ಒಟ್ಟಿಗೆ ಕಾಣಿಸಿಕೊಂಡು ಬ್ರೇಕಪ್ ಸುದ್ದಿಗೆ ಅಂತ್ಯ ಹಾಡಿದ ಮಲೈಕಾ- ಅರ್ಜುನ್ ಕಪೂರ್

Public TV
1 Min Read

ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳು ಮಲೈಕಾ ಅರೋರಾ(Malaika Arora)- ಅರ್ಜುನ್ ಕಪೂರ್ ಬೇರೆ ಬೇರೆ ಆಗಿದ್ದಾರೆ ಎನ್ನಲಾದ ಸುದ್ದಿಗೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ.  ಇಬ್ಬರ ಬ್ರೇಕಪ್ (Breakup) ಊಹಾಪೋಹಗಳಿಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ಬಿಟೌನ್‌ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದ ವಿಚಾರ ಅಂದರೆ, ಮಲೈಕಾ- ಅರ್ಜುನ್ ಕಪೂರ್ (Arjun Kapoor) ಬ್ರೇಕಪ್ ಸುದ್ದಿ. ವೈಯಕ್ತಿಕ ಮನಸ್ತಾಪಗಳಿಂದ ಬೇರೆಯಾಗಿದ್ದಾರೆ ಎನ್ನಲಾಗಿತ್ತು. ಇದೀಗ ಸ್ಪಷ್ಟನೆ ಸಿಕ್ಕಿದೆ. ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಒಟ್ಟಿಗೆ ಇಬ್ಬರು ಡಿನ್ನರ್ ಮಾಡಿ ಮನೆಗೆ ಹೋಗುವಾಗ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಬ್ರೇಕಪ್ ಆಗಿದೆ ಎಂಬ ಸುದ್ದಿ ಸುಳ್ಳು ಎಂದು ಈಗ ಕ್ಲ್ಯಾರಿಟಿ ಸಿಕ್ಕಿದೆ. ಇದನ್ನೂ ಓದಿ:ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

ಸಲ್ಮಾನ್ (Salman Khan) ಸಹೋದರ ಅರ್ಬಾಜ್ ಖಾನ್ (Arbaaz Khan) ಜೊತೆ ಮಲೈಕಾ 19 ವರ್ಷಗಳ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿದ್ದರು. ಪರಸ್ಪರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದಿದ್ದರು. ಈ ಜೋಡಿಗೆ 20 ವರ್ಷದ ಮಗನಿದ್ದಾರೆ. ಹೀಗಿರುವಾಗ ೪೯ ವರ್ಷದ ಮಲೈಕಾ, ತನಗಿಂತ ಕಿರಿಯ ನಟನ ಜೊತೆ ಡೇಟ್ ಮಾಡ್ತಿರೋದು ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದೆ. ಆದರೂ ಡೋಂಟ್ ಕೇರ್ ಎನ್ನುತ್ತಾ ಆಗಾಗ ಇಬ್ಬರೂ ಫಾರಿನ್‌ಗೆ ಹೋಗಿ ಬರುತ್ತಾರೆ.

ಈಗ ಬ್ರೇಕಪ್ ಸುದ್ದಿ ಸುಳ್ಳು ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಗ ಮದುವೆಯಾಗಿ ಎಂದು ಮನವಿ ಮಾಡಿದ್ದಾರೆ. ಯಾವಾಗ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಿರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್