ಬೆಂಗ್ಳೂರಿಗೆ ಮೋದಿ – ಬೆಳಗ್ಗಿನ ಜಾವದಿಂದಲೇ ಸಂಚಾರದಲ್ಲಿ ಏರುಪೇರು; ಹೇಗಿದೆ ರೂಟ್ ಮ್ಯಾಪ್?

Public TV
2 Min Read

ಬೆಂಗಳೂರು: ಚಂದ್ರಯಾನ-3 (Chandrayaan-3) ಆಪರೇಷನ್ ಯಶಸ್ವಿಯಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದಾರೆ.

ಗ್ರೀಸ್‌ನ ಅಥೆನ್ಸ್ ನಗರದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಸುಮಾರು 1 ಗಂಟೆಗಳ ಕಾಲ ಪೀಣ್ಯ ಬಳಿಯ ನೆಲಗದರನಹಳ್ಳಿಯಲ್ಲಿರುವ ಇಸ್ರೋ ಕಮಾಂಡಿಂಗ್ ಸೆಂಟರ್‌ನಲ್ಲಿ ಇರಲಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸಕ್ಸಸ್‌ಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದಿಸಲಿದ್ದಾರೆ. ವಿಜ್ಞಾನಿಗಳ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಲಿದ್ದಾರೆ.

ಬೆಳಗ್ಗೆ 8:05ಕ್ಕೆ ಇಸ್ರೋದಿಂದ ನಿರ್ಗಮಿಸಲಿದ್ದಾರೆ, ಬೆಳಗ್ಗೆ 8:30 ಹೆಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ 8:35 ದೆಹಲಿಗೆ ತಲುಪಲಿದ್ದಾರೆ. ಬೆಂಗಳೂರಿಗೆ ಮೋದಿ ಬರೋ ಹಿನ್ನೆಲೆಯಲ್ಲಿ ಬೆಳಗಿನ ಜಾವ 4 ಗಂಟೆಯಿಂದ ಬೆಳಗ್ಗೆ 9.00 ಗಂಟೆವರೆಗೆ ಸಂಚಾರ ಏರುಪೇರಾಗಲಿದೆ. ಇದನ್ನೂ ಓದಿ: ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

ಮೋದಿ ರೂಟ್ ಮ್ಯಾಪ್ ಹೇಗಿದೆ?
ಹೆಚ್‌ಎಎಲ್‌ಗೆ ಬಂದಿಳಿಯಲಿರುವ ಪ್ರಧಾನಿ ಮೋದಿ, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್ ಬ್ರಿಡ್ಜ್, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್, ಟಾಟಾ ಇನ್‌ಸ್ಟಿಟ್ಯೂಟ್, ಯಶವಂತಪುರ ಮೇಲ್ಸೇತುವೆ, ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ ಕ್ರಾಸ್ ಎಡ ತಿರುವು, ಇಸ್ರೋ ಕಚೇರಿ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

ರೋಡ್ ಶೋ ಕ್ಯಾನ್ಸಲ್‌:
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸೋ ಬಿಜೆಪಿ ನಾಯಕರ ಪ್ಲ್ಯಾನ್‌ ಉಲ್ಟಾ ಆಗಿದೆ. ಇಸ್ರೋ ಕಮಾಂಡಿಂಗ್ ಸೆಂಟರ್ ಇರೋ ಕಚೇರಿ ಪೀಣ್ಯವು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಹೀಗಾಗಿ, ದಾಸರಹಳ್ಳಿಯಿಂದ ಇಸ್ರೋ ಕಚೇರಿವರೆಗೆ 1 ಕಿ.ಮೀ. ರೋಡ್ ಶೋ ನಡೆಸುತ್ತೇವೆ ಅಂತ ಅಶೋಕ್ ಹೇಳಿದ್ದರು. ಆದರೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ಕೊಟ್ಟಿದ್ದು, ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಅಂದಿದ್ದಾರೆ.

ಇನ್ನು, ದಾಸರಹಳ್ಳಿ ಬಿಜೆಪಿ ಶಾಸಕ ಮುನಿರಾಜು ಮಾತನಾಡಿ, ರೋಡ್ ಶೋ ಅಂತಿಮವಾಗಿಲ್ಲ. ಎಸ್‌ಪಿಜಿಯಿಂದ ಅನುಮತಿ ಕೂಡ ಸಿಕ್ಕಿಲ್ಲ. ಆದರೆ, ಸಾವಿರಾರು ಕಾರ್ಯಕರ್ತರು ಜಮಾಯಿಸ್ತಾರೆ. ಸಹಜವಾಗಿ ಕಾರ್ಯಕರ್ತರು ಕಂಡಾಗ ಮೋದಿ ಕೈ ಬೀಸ್ತಾರೆ. ಕೆಳಗೆ ಇಳಿದರೂ ಇಳಿಯಬಹುದು ಅಂದಿದ್ದಾರೆ. ಈ ಬೆನ್ನಲ್ಲೇ ಮೋದಿ ಇಸ್ರೋ ಭೇಟಿ ಹೊತ್ತಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಬೆಂಗಳೂರಿನ ಎಲ್ಲಾ 16 ಬಿಜೆಪಿ ಶಾಸಕರು ಹಾಜರಿದ್ದು ಸ್ವಾಗತ ಕೋರಲಿದ್ದಾರೆ. ಇನ್ನೂ ಪ್ರಧಾನಿಗಳ ಭೇಟಿಗೆ ನಮ್ಮದೇನೂ ವಿರೋಧ ಇಲ್ಲ. ರೋಡ್ ಶೋನಾದರೂ ಮಾಡಲಿ.. ಪಬ್ಲಿಕ್ ಮೀಟಿಂಗಾದರೂ ಮಾಡಲಿ ಅಭ್ಯಂತರ ಇಲ್ಲ ಅಂತ ಸಿಎಂ ಹೇಳಿದ್ದಾರೆ. ರೋಡ್ ಶೋ ಮೂಲಕ ಇಸ್ರೋ ಸಾಧನೆಯನ್ನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳೋದು ಪ್ಲ್ಯಾನ್‌ ಅಂತ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್