ತೆರಿಗೆ ಕಾನೂನುಗಳು ಸರಳವಾಗ್ಬೇಕು; ಹೆಚ್ಚು ತೆರಿಗೆ ಸಂಗ್ರಹವಾಗ್ತಿದ್ರೆ, ದೇಶದ ಅಭಿವೃದ್ಧಿಯ ಸಂಕೇತ: ಬೊಮ್ಮಾಯಿ

By
2 Min Read

ಬೆಂಗಳೂರು: ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ ದೇಶ ಅಭಿವೃದ್ಧಿ ಆಗುತ್ತಿದೆ ಎಂದು ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯ ಪಟ್ಟರು.

ರಾಷ್ಟ್ರೀಯ ತೆರಿಗೆ (Tax) ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರ್ಥಿಕ ಬೆಳವಣಿಗೆ ಹೊಂದಲು ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ನಾನು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮನಸು ಮಾಡಿದರೆ ಯಾವುದೂ ಕಷ್ಟವಲ್ಲ ಎಂದು ಯೋಚಿಸಿ ಕಾರ್ಯ ಪ್ರವೃತ್ತನಾದೆ. ಮೂರು ತಿಂಗಳಲ್ಲಿ 70% ರಷ್ಟು ಆದಾಯ ಹೆಚ್ಚಳ ಮಾಡಿದೆ. ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಸರಪ್ಲಸ್ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂದರು.

ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದ ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಅಂತಿಮವಾಗಿ ದೇಶದ ಅಭಿವೃದ್ಧಿ ಆಗಬೇಕು. ಅದರಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ- 9 ಮಂದಿಯ ರಕ್ಷಣೆ

ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಆದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಗುರಿ ಮುಟ್ಟುವ ಕನಸು ಸಾಧ್ಯವಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್‍ಟಿಯನ್ನು ವಿರೋಧಿಸಿದ್ದರು. ಆದರೆ ಈಗ ಎಲ್ಲರು ಒಪ್ಪಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದರು.

ಒಂದು ದೇಶದ ಜಿಡಿಪಿಯನ್ನು (GDP) ಅಳೆಯುವುದು ಹೇಗೆ ಎನ್ನುವುದು ಪ್ರಶ್ನೆ, ಆರ್ಥಿಕ ತಜ್ಞರು ಜಿಡಿಪಿಯನ್ನು ಕ್ಲಿಷ್ಟಮಯಗೊಳಿಸುತ್ತಾರೆ. ಕೆಲವರಿಗೆ ಕಾನೂನಿನ ಅರಿವಿಲ್ಲದೆ ತೆರಿಗೆ ಕಟ್ಟದೇ ಉಳಿಯುತ್ತಾರೆ. ಕೆಲವರಿಗೆ ಕಾನೂನಿನ ಮಾಹಿತಿ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಣ್ಣವರು ಹೆಚ್ಚು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾರೆ. ಅವರಿಗೆ ಒಂದು ಸಾವಿರ ರೂಪಾಯಿ ಹೆಚ್ಚಿಗೆ ತೆರಿಗೆ ಕಟ್ಟಿ ಎಂದರೆ ಕಟ್ಟುತ್ತಾರೆ. ಆದರೆ ದೊಡ್ಡವರಿಗೆ ಒಂದು ಕೋಟಿ ರೂ. ತೆರಿಗೆ ಹೆಚ್ಚಾಗಿದೆ ಅಂದರೆ, ಆಗ ಅವರಿಂದ ತೆರಿಗೆ ಸಂಗ್ರಹಿಸುವುವ ಚಾಲೆಂಜ್ ಎದುರಾಗುತ್ತದೆ ಎಂದು ಹೇಳಿದರು.

ತೆರಿಗೆ ಕಾನೂನುಗಳು ಸರಳವಾಗಬೇಕು. ದೇಶದ ಆರ್ಥಿಕತೆಯನ್ನು ತೆರಿಗೆ ಸಂಗ್ರಹದ ಮೂಲಕ ಅಳೆಯಲಾಗುವುದು. ತೆರಿಗೆ ಸಂಗ್ರಹ ಹೆಚ್ಚಾದರೆ ದೇಶ ಅಭಿವೃದ್ಧಿಯಾಗುತ್ತಿದೆ ಎಂದು ಅರ್ಥ. ಆಡಳಿತ ನಡೆಸುವವರು ಕಾನೂನು ಜಾರಿ ಮಾಡುತ್ತೇವೆ. ಅದನ್ನು ಅರ್ಥ ಮಾಡಿಕೊಂಡು, ಜಾರಿಗೆ ತರುವ ಕೆಲಸವನ್ನು ತೆರಿಗೆ ಸಲಹೆಗಾರರು ಮಾಡುತ್ತಿದ್ದಾರೆ. ತೆರಿಗೆ ಸಲಹೆಗಾರರು ಸರ್ಕಾರದ ಭಾಗವಾಗಿದ್ದು, ವ್ಯಾಪಾರಿ ಸಮುದಾಯದ ಭಾಗವಾಗಿಯೂ ಕೆಲಸ ಮಾಡುತ್ತಿದ್ದು, ದ್ವಿಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

ವ್ಯಾಪಾರ ಮತ್ತು ತತ್ವಜ್ಞಾನದಲ್ಲಿ ಲಾಭ ನಷ್ಟದ ಲೆಕ್ಕ ತದ್ವಿರುದ್ಧವಾಗಿದ್ದು, ವ್ಯಾಪಾರದಲ್ಲಿ ಪಾಪ ಪುಣ್ಯ, ತತ್ವಜ್ಞಾನದಲ್ಲಿ ಲಾಭನಷ್ಟದ ಲೆಕ್ಕ ಹಾಕಬೇಕು ಎಂದರು. ಸಾಮಾನ್ಯ ಜನರು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿದರೆ, ಆ ಹಣವನ್ನು ರಸ್ತೆ ಟಾರ್ ಹಾಕುವವರು ಟಾರ್ ಹಾಕದೇ ಇದ್ದರೆ ಅಭಿವೃದ್ಧಿ ಹೇಗೆ ಅಭಿವೃದ್ಧಿಯಾಗುತ್ತದೆ. ಕೆಳ ಹಂತದಿಂದಲೆ ಮಾನವ ಸಂಪನ್ಮೂಲ ಅಭಿವೃದ್ದಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್