ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

Public TV
2 Min Read

ಚಂಡೀಗಡ: ಪ್ರವಾಹ ಪೀಡಿತ ದೆಹಲಿಗೆ (Delhi) ಉದ್ದೇಶಪೂರ್ವಕವಾಗಿ ಹತ್ನಿಕುಂಡ್ ಬ್ಯಾರೇಜ್ ಮೂಲಕ ನೀರನ್ನು ತಿರುಗಿಸಲು ಹರಿಯಾಣ ಸರ್ಕಾರವನ್ನು ಬಿಜೆಪಿ (BJP) ಬಳಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (Aam Aadmi Party) ಆರೋಪಿಸಿದೆ.

1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ಹರಿವನ್ನು ಬೇರೆ ಕಡೆಗಳಿಗೆ ಬಿಡುವಂತಿಲ್ಲ. ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾರ್ಗಸೂಚಿಗಳ ಪ್ರಕಾರ 1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ನೀರನ್ನು ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ (Yamuna) ಕಾಲುವೆಗೆ ಬಿಡುವಂತಿಲ್ಲ ಎಂದು ದೆಹಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

ಪಶ್ಚಿಮ ಯಮುನಾ ಕಾಲುವೆ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಬಿಡದೆ ಹತ್ನಿಕುಂಡ್ ಬ್ಯಾರೇಜ್‍ನಿಂದ ಯಮುನಾ ನದಿಗೆ ನೀರು ಬಿಡಲಾಗುತ್ತಿದೆ. ಇದು ದೆಹಲಿಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಎಎಪಿ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಹತ್ನಿಕುಂಡ್‍ನಲ್ಲಿ ಹರಿಯುತ್ತಿರುವ ನೀರಿನ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಹತ್ನಿಕುಂಡ್ ಬ್ಯಾರೇಜ್‍ನಲ್ಲಿ 1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ನೀರಿನ ಹರಿವು ಇದ್ದರೆ ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಹರಿಯುತ್ತದೆ. ದೆಹಲಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಡಲು ಅನಗತ್ಯ ಆರೋಪ ಮಾಡುತ್ತಿದೆ ಎಂದು ಹರಿಯಾಣದ ನೀರಾವರಿ ಸಲಹೆಗಾರ ದೇವೇಂದ್ರ ಸಿಂಗ್ ಹೇಳಿದ್ದಾರೆ.

ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ದೆಹಲಿ ಈ ಮಳೆಯಿಂದ ಸಮಸ್ಯೆ ಅನುಭವಿಸುತ್ತಿವೆ. ಕಳೆದ ಮೂರು ದಿನಗಳಿಂದ ಮಳೆ ಆಗದಿದ್ದರೂ ಯಮುನೆಯ ನೀರಿನ ಮಟ್ಟ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ನಗರದ ಕೆಲವು ಭಾಗಗಳಿಗೆ ನೀರು ನುಗ್ಗಿರುವುದು ಏಕೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.

ಹತ್ನಿಕುಂಡ್ ಬ್ಯಾರೇಜ್‍ನಲ್ಲಿ, ನೀರಿನ ಹರಿವು ಮೂರು ವಿಭಿನ್ನ ಮಾರ್ಗಗಳಿವೆ. ಒಂದು ಮಾರ್ಗ ನೀರನ್ನು ದೆಹಲಿಗೆ ತರುತ್ತದೆ. ಇನ್ನೊಂದು ಅದನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ಇಂತಹ ಪ್ರವಾಹದಲ್ಲಿ ಮೂರು ಕಾಲುವೆಗಳು ನೀರಿನ ಒತ್ತಡವನ್ನು ಸಮಾನವಾಗಿ ಹಂಚಿಕೆ ಮಾಡಿದ್ದರೆ ಇದು ಸೂಕ್ತವಾಗಿತ್ತು. ಆದರೆ ಬಿಜೆಪಿಯು ಯಮುನಾ ನದಿಯನ್ನು ರೂಪಿಸುವ ಮತ್ತು ದೆಹಲಿಯನ್ನು ಪ್ರವೇಶಿಸುವ ಹೊಳೆಗೆ ಎಲ್ಲಾ ನೀರನ್ನು ಕಳುಹಿಸಲು ಸಂಚು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಮೇಲೆ ಶಾಕ್ – ಆಷಾಢ ಮುಗಿಯುತ್ತಿದ್ದಂತೆ ಹೋಟೆಲ್ ದರ ಏರಿಕೆ ಬರೆ ಫಿಕ್ಸ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್