ದಾಖಲೆ ಕೊಡ್ತೀನಿ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ: ಹೆಚ್‍ಡಿಕೆ ಪ್ರಶ್ನೆ

Public TV
2 Min Read

ಬೆಂಗಳೂರು: ಕಳೆದ ಎರಡು ವರ್ಷದಿಂದ ಒಂದು ದಾಖಲೆ ನೀಡಿಲ್ಲ. ಪ್ರತಿನಿತ್ಯ ತನಿಖೆ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್‍ನವರು ಇನ್ನೂ ಹನಿಮೂನ್ ಪೀರಿಯಡ್ ಅಂತ ಹೇಳುತ್ತಿದ್ದಾರೆ. ದಾಖಲೆ ಕೊಡ್ತೀನಿ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ತಿಂಗಳಿಗೆ ಹಗಲು ದರೋಡೆ ಮಾಡುತ್ತಿದ್ದೀರಿ. ದಾಖಲೆ ಬಿಡುಗಡೆ ಮಾಡೋದಕ್ಕೆ ನಿಮ್ಮ ಕೈಯಲ್ಲಿ ತಾಕತ್ತು ಇಲ್ಲ. ಆದರೆ ಕುಮಾರಸ್ವಾಮಿಗೆ ತಾಕತ್ತು ಇರೋದ್ರಿಂದ ದಾಖಲೆ ಬಿಡುಗಡೆ ಮಾಡ್ತೀನಿ. ನಾನು ದಾಖಲೆ ಕೊಟ್ಟರೆ ಆ ಮಂತ್ರಿಯನ್ನ ವಜಾ ಮಾಡ್ತೀರಾ? ಆ ಸಚಿವರನ್ನು ವಜಾ ಮಾಡುವ ತಾಕತ್ತು ನಿಮಗೆ ಇದ್ಯಾ?. ವಿಧಾನಸೌಧದಲ್ಲಿ ಇಡ್ತೀನಿ. ದಾಖಲೆ ಕೊಟ್ಟರೆ ನಿಮ್ಮ ಸರ್ಕಾರ ಇರುತ್ತಾ?. ಸುಧಾರಿಸಿಕೊಂಡು ಕೆಲಸ ಮಾಡಲಿ ಅಂತ ಬಿಟ್ಟಿದ್ದೀನಿ ಎಂದು ಹೇಳಿದರು.

ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿಲ್ಲ. ಕಾಂಗ್ರೆಸ್‍ನವರು (Congress) ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗಾವಣೆ ಧಂದೆಗೆ ಹಣ ನಿಗದಿ ಮಾಡಿದ್ದೀರಿ ಅಂತಾನೂ ಗೊತ್ತು. ಟೈಮ್ ಬಂದಾಗ ದಾಖಲೆ ಕೊಡ್ತೀನಿ. ನಾನು ಕೊಡೋ ದಾಖಲೆ ನೋಡಿ ಸಚಿವರಿಗೆ ಯಾವ ರೀತಿ ಕ್ರಮ ಕೈಗೊಳ್ತೀರಾ ಅಂತ ಮೊದಲು ಅವರು ಹೇಳಲಿ. ಕೆಲವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಅಂತಾ ಹೇಳುತ್ತಾರೆ. ಈಗಾಗಲೇ ಡಿಕೆ ಕೂಡ ಟವೆಲ್ ಹಾಕಿದ್ದಾರೆ. ನೋಡೋಣ ಎಷ್ಟು ದಿನ ಈ ಸರ್ಕಾರ ಇರುತ್ತೆ ಅಂತಾ ಎಂದರು. ಇದನ್ನೂ ಓದಿ: ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್‌ ಸಿಬಲ್‌ ಆರೋಪ

ಕಳೆದ ಎರಡು ವರ್ಷ ಇವರ ಯೋಗ್ಯತೆಗೆ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ. ಮಂತ್ರಿ ಒಬ್ಬರು ಪುಟಗಟ್ಟಲೆ ದಾಖಲೆ ಬಿಡುಗಡೆ ಮಾಡಿದ್ದೀವಿ ಅಂತ ಹೇಳಿದ್ದರೂ ದಾಖಲೆ ಕೊಡಲಿಲ್ಲ. ಹಿಂದಿನ ಸರ್ಕಾರದ ಹಲವಾರು ವಿಷಯ ಇಟ್ಕೊಂಡು ಗುಮ್ಮ ಬಿಡ್ತಿದ್ದೀರಲ್ಲ ಹಾಗೆ ಅಂದುಕೊಂಡಿದ್ದೀರಾ..?. ಹನಿಮೂನ್ ಪಿರಿಯಡ್ ಅಂತ ಬೋಸರಾಜು ಹೇಳ್ತಾರೆ. ಜನ ಒಳ್ಳೆಯ ಅವಕಾಶ ಕೊಟ್ಟಾಗ ಬಳಸಿಕೊಳ್ಳಿ. ಇಲ್ಲವಾದ್ರೆ ಮುಂದೆ ಏನಾಗ್ತೀರಿ ನೋಡಿ. ಸಾಕ್ಷಿ ಕೇಳ್ತಿದ್ದಾರಲ್ಲ ಎಲ್ಲಾ ಮಂತ್ರಿಗಳಿಗೂ ಒಂದೊಂದು ಕೊಡೋಣ ನಾನು ಸಿದ್ಧನಿದ್ದೇನೆ. ನಿಮ್ಮ ಕೈಯಲ್ಲಿ ತಾಕತ್ ಇದ್ಯಾ ಧಮ್ ಇದ್ಯಾ.? ಅಂತಾ ಕೇಳ್ತಾರೆ. ನನಗೆ ತಾಕತ್ ಧಮ್ ಇಲ್ಲದೇ ಇರಬಹುದು ಆದರೆ ದಾಖಲೆ ಇಟ್ಕೊಂಡು ಕೊಡುವ ಧಮ್ ಇದೆ ಎಂದು ವಾಗ್ದಾಳಿ ನಡೆಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್