– ಬೆಳಗ್ಗೆ 9 ಗಂಟೆಗೆ 18.39% ಮತದಾನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal Elections Phase 2) ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನವು ಇಂದು ನಡೆಯುತ್ತಿದ್ದು, ಮತದಾನದ ಆರಂಭಿಕ ಗಂಟೆಗಳಲ್ಲೇ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳು ನಡೆದ ವರದಿಯಾಗಿದೆ.
ಬೆಳಿಗ್ಗೆ 9 ಗಂಟೆಯವರೆಗೆ ರಾಜ್ಯದಲ್ಲಿ ಸರಾಸರಿ 18.39% ಮತದಾನ ದಾಖಲಾಗಿದೆ. ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 20.86% ಮತದಾನವಾಗಿದ್ದರೆ, ಹೂಗ್ಲಿಯಲ್ಲಿ 20.16% ಮತದಾನ ನಡೆದಿದೆ.
ಚಪ್ರಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 53ರಲ್ಲಿ ಬಿಜೆಪಿ (BJP) ಪೋಲಿಂಗ್ ಏಜೆಂಟ್ ಮೇಲೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
At Bally, Central Forces lathicharged few TMC individuals trying to cause chaos infront of the booths. Both have been arrested and taken away. pic.twitter.com/Ys8xBpu2JG
— Sudhanidhi Bandyopadhyay (@SudhanidhiB) April 29, 2026
ಶಾಂತಿಪುರದ ವಾರ್ಡ್ ಸಂಖ್ಯೆ 16ರಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
Nadia, West Bengal: BJP polling agent Mosharraf Mir of booth number 52 of Hatra Panchayat, Chapra Assembly constituency, says, “…Some TMC goons were hiding there. They have several cases against them. Janiallamulla is a criminal. He had a gun, and two other men also had guns.… https://t.co/Gdu8qUwQ9k pic.twitter.com/RrPrP1Yxb4
— ANI (@ANI) April 29, 2026
ಹೌರಾದ ಬಲ್ಲಿಯಲ್ಲಿ ಇವಿಎಂ ದೋಷದ ಹಿನ್ನೆಲೆಯಲ್ಲಿ ಬಲ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ವೇಳೆ ಕೇಂದ್ರ ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ 7 ಜಿಲ್ಲೆಗಳ 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸುಮಾರು 3.22 ಕೋಟಿ ಮತದಾರರು ಇಂದು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
West Bengal Assembly Elections: Violence and vandalism marred early voting in West Bengal during the second phase of assembly elections on Wednesday. Police reported disturbances from Chapra, Shantipur, Nimtala and Bhangar, raising concerns over voter safety and poll security.… pic.twitter.com/xwChGbkoSH
— Mirror Now (@MirrorNow) April 29, 2026
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು(Mamata Banerjee) ಕೇಂದ್ರ ಭದ್ರತಾ ಪಡೆಗಳು ಬಿಜೆಪಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿವೆ ಮತ್ತು ಟಿಎಂಸಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಸುವೇಂದು ಅಧಿಕಾರಿ (Suvendu Adhikari) ತನ್ನ ಏಜೆಂಟ್ಗಳು ಮತ್ತು ಕಾರ್ಯಕರ್ತರ ಮೇಲೆ ಟಿಎಂಸಿ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದೆ ಎಂದು ದೂರಿದ್ದಾರೆ.

