ಮತ್ತೆ ಹೊಂದಾಣಿಕೆ ರಾಜಕೀಯ ಬಾಂಬ್- ಬಿಜೆಪಿ ಸಮಾವೇಶಗಳಲ್ಲೇ ಗದ್ದಲ, ಆಕ್ರೋಶ ಸ್ಫೋಟ

Public TV
1 Min Read

– ಕಾರ್ಯಕರ್ತರ ರೋಷಕ್ಕೆ ನಾಯಕರು ಥಂಡಾ

ಬೆಂಗಳೂರು: ವಿಧಾನಸಭಾ ಚುನಾವಣೆ (Vidhanasabha Election) ಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ (BJP) ಯಲ್ಲಿ ಅಸಮಾಧಾನ, ಆಕ್ರೋಶ ಸ್ಫೋಟವಾಗುತ್ತಿದೆ. ನಾಯಕರ ಬಳಿಕ ಈಗ ಕಾರ್ಯಕರ್ತರ ಸರದಿ. ನಾಯಕರ ವಿರುದ್ಧವೇ ಕಾರ್ಯಕರ್ತರು ಮುಗಿಬಿದ್ದಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ (bS Yediyurappa) ಸಮ್ಮುಖದಲ್ಲೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ (Mahalakshmi Layout) ನಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಭೆ ನಡೆಯಿತು. ಈ ವೇಳೆ ಬ್ಯಾಟರಾಯನಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮೇಶ್‍ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ (Congress) ಪರ ಕೆಲಸ ಮಾಡಿರುವ ಮುನೇಂದ್ರ ಕುಮಾರ್ ಹೊರಗೆ ಕಳಿಸುವಂತೆ ಅಶ್ವಥ್ ನಾರಾಯಣ್ ಎದುರು ಸಿಟ್ಟು ಹೊರ ಹಾಕಿದರು. ಆಗ ಬಿಎಸ್‍ವೈ ಸಮಾಧಾನ ಮಾಡಿದ್ರು. ಶಾಸಕ ಮುನಿರಾಜು ಭಾಷಣಕ್ಕೂ ಕಾರ್ಯಕರ್ತರು ಅಡ್ಡಿಪಡಿಸಿದ್ರು. ಕಾರ್ಯಕರ್ತರು ತಪ್ಪು ಮಾಡಿದಾಗ ಬುದ್ಧಿ ಹೇಳ್ತೀರಾ?. ನಾಯಕರು ತಪ್ಪು ಮಾಡಿದಾಗ ಯಾಕೆ ಬುದ್ದಿ ಹೇಳಲ್ಲ. ಹಿಂದೆ ಬಿಎಸ್‍ವೈ ಕೆಳಗಿಳಿಸಿದಾಗ ಯಾಕೆ ಮಾತನಾಡಲಿಲ್ಲ..? ಅಂತ ಪ್ರಶ್ನಿಸಿದ್ರು.

ಕೊನೆಗೆ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದ್ದಾರೆ. ನಿಮ್ಮ ಸಮಸ್ಯೆ ಬಗೆಹರಿಸ್ತೀವಿ ಅಂತ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸರ್ಕಾರ ಕಿತ್ತೊಗೆಯೋಣ – ಯಡಿಯೂರಪ್ಪ ಸಂಕಲ್ಪ

Share This Article