Photo Album- ಹಾಟ್ ಫೋಟೋಶೂಟ್ ನಲ್ಲಿ ನಟಿ ಲಾರಿಸ್ಸಾ ಬೊನೆಸಿ

Public TV
1 Min Read

ಬಾಲಿವುಡ್ (Bollywood) ನಟಿ ಹಾಗೂ ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ (Larissa Bonesi) ಅಭಿಮಾನಿಗಳಿಗಾಗಿ ಆಗಾಗ್ಗೆ ತಮ್ಮ ಫೋಟೋಶೂಟ್ (Photoshoot) ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಬಂದಿರುವುದರಿಂದ ಪ್ರತಿ ಫೋಟೋಗಳು ಹಾಟ್ ಹಾಟ್ ಆಗಿಯೇ ಇರುತ್ತವೆ.

ಲಾರಿಸ್ಸಾ ಮೂಲತಃ ಬ್ರೆಜಿಲಿಯನ್ (Brazilian) ಮಾಡೆಲ್ (Model). ಹಲವು ವರ್ಷಗಳ ಕಾಲ ಅವರು ಮಾಡೆಲಿಂಗ್ ಕ್ಷೇತ್ರದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಸಿನಿಮಾ ರಂಗದತ್ತ ಮುಖ ಮಾಡಿದರು.

2011ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ನಟಿಸಿದ ಸೂಪರ್ ಹಿಟ್ ಹಾಡು ‘ಸುಬಾ ಹೋನೆ ನಾ ದೇ’ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ವೃತ್ತಿ ಜೀವನ ಆರಂಭಿಸಿದರು. ಈ ಹಾಡು ಕೂಡ ಹಿಟ್ ಆಯಿತು.

ಮೊದಲು ಬಾಲಿವುಡ್ ಪ್ರವೇಶ ಮಾಡಿದ್ದು ಹಾಡಿನ ಮೂಲಕ. ಆದರೆ, 2013ರಲ್ಲಿ ಗೋ ಗೋವಾ ಗಾನ್ ಸಿನಿಮಾ ಮೂಲಕ ಬಾಲಿವುಡ್ ಅನ್ನು ನಾಯಕಿಯಾಗಿ ಪ್ರವೇಶ ಮಾಡಿದರು ಲಾರಿಸ್ಸಾ ಬೊನೆಸಿ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ತೆಲುಗು ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಲಾರಿಸ್ಸಾ ಬೊನೆಸಿ. 2016ರಲ್ಲಿ ತೆರೆಕಂಡ ತೆಲುಗಿನ ತಿಕ್ಕ ಚಿತ್ರದಲ್ಲೂ ನಟಿಸಿದ್ದಾರೆ

ಅರ್ಜುನ್ ರಾಂಪಾಲ್ ಹಾಗೂ ಬಾಬಿ ಡಿಯೋಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ವೆಬ್ ಸರಣಿ ಪೆಂಟ್ ಹೌಸ್ ನಲ್ಲಿ ಲಾರಿಸ್ಸಾ ಬೊನೆಸಿ ವಿಭಿನ್ನ ಪಾತ್ರವನ್ನು ಮಾಡಿದ್ದಾರೆ.

ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಸಾಕಷ್ಟ ವಿಡಿಯೋ ಆಲ್ಬಂಗೂ ಲಾರಿಸ್ಸಾ ಬೊನೆಸಿ ಕುಣಿದಿದ್ದಾರೆ. ಗಾಯಕ ಗುರು ರಾಂಧವಾ ಅವರೊಂದಿಗೆ ಸುರ್ಮಾ ಸುರ್ಮಾ ಎಂಬ ಹಿಟ್ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

Share This Article