ಮೈನಸ್ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮುಳುಗೆದ್ದ ನಟಿ ಪ್ರಜ್ಞಾ ಜೈಸ್ವಾಲ್

Public TV
1 Min Read

ತೆಲುಗು- ಹಿಂದಿ ಸಿನಿಮಾಗಳಲ್ಲಿ ಆಕ್ಟೀವ್ ಇರುವ ನಟಿ ಪ್ರಜ್ಙಾ ಜೈಸ್ವಾಲ್ (Pragya Jaiswal) ಅವರು ಬಾಲಯ್ಯ (Balayya) ಜೊತೆ ‘ಅಖಂಡ’ (Akanda Film)  ಸಿನಿಮಾದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು. ಪ್ರಜ್ಞಾ ಜೈಸ್ವಾಲ್ ಅವರು ಇತ್ತೀಚೆಗೆ ಫಿನ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು, ಐಸ್ ಬಾತ್ ಮಾಡಿ ಅಚ್ಚರಿ ಮೂಡಿಸಿರುವ ವಿಡಿಯೋ ಒಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

2021ರಲ್ಲಿ ಬಾಲಯ್ಯ ನಟನೆಯ ‘ಅಖಂಡ’ ಚಿತ್ರದಲ್ಲಿ ಪ್ರಜ್ಞಾ ನಟಿಸಿದ್ದರು. ಬಾಲಯ್ಯ ಜೊತೆ ಡ್ಯುಯೇಟ್ ಹಾಡಿದ್ದರು. ಪ್ರಜ್ಞಾ ಜೈಸ್ವಾಲ್ ಅವರು ಫಿನ್‌ಲ್ಯಾಂಡ್‌ನಲ್ಲಿ ಐಸ್ ಸ್ನಾನ ಮಾಡಿದ್ದಾರೆ. ಫಿನ್‌ಲ್ಯಾಂಡ್‌ನ ಹಿಮದ ಮಧ್ಯದಲ್ಲಿರುವ ಸರೋವರದಲ್ಲಿ ಪಿಂಕ್ ಬಿಕಿನಿ ತೊಟ್ಟು ಮಿಂದೆದ್ದಿದ್ದಾರೆ. ಈ ಹಿಂದೆ ನಟಿ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಮಂಜು ಗಡ್ಡೆಯಿಂದ ಆವೃತವಾಗಿರುವ ಕೊಳದಲ್ಲಿ ಈಜಿದ್ದ ವಿಡಿಯೋ ಹಂಚಿಕೊಂಡಿದ್ದರು. ಈಗ ಅದೇ ಸ್ಥಳಕ್ಕೆ ಅಖಂಡ ನಾಯಕಿ ಭೇಟಿ ನೀಡಿದ್ದಾರೆ.

ಐಸ್ ಬಾತ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಜ್ಞಾ, ತಮಗಾದ ಅನುಭವದ ಬಗ್ಗೆ ತಿಳಿಸಿದ್ದಾರೆ. ಬೆಂಕಿ ಮತ್ತು ಮಂಜುಗಡ್ಡೆ. ಸೌನಾದ ತೀವ್ರವಾದ ಶಾಖದ ನಂತರ ಮಂಜುಗಡ್ಡೆಯ ನೀರಿನಲ್ಲಿ ಮೈನಸ್ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮಿಂದಿದ್ದು, ಒಂದು ಮರೆಯಲಾಗದ ಅನುಭವ ಎಂದು ಬರೆದುಕೊಂಡಿದ್ದಾರೆ.

ʻಅಖಂಡʼ ಸಿನಿಮಾದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ನಟಿಗೆ ಅರಸಿ ಬರುತ್ತಿದೆ. ಉತ್ತಮ ಕಥೆ, ಪಾತ್ರಗಳು ಮೂಲಕ ಬರಲು ಪ್ರಜ್ಞಾ ಸಿದ್ಧತೆ ನಡೆಸುತ್ತಿದ್ದಾರೆ.

Share This Article