ಒಂದ್ರೂಪಾಯಿನೂ ಕಟ್ಟಲ್ಲ – ಸಿದ್ದರಾಮಯ್ಯ, ಡಿಕೆಶಿ ಮನೆಗೆ ಹೋಗಿ: ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ತರಾಟೆ

Public TV
1 Min Read

ಬೀದರ್: ಕಾಂಗ್ರೆಸ್ (Congress) ಸರ್ಕಾರ ಗ್ಯಾರಂಟಿ ಕಾರ್ಡ್‌ನಲ್ಲಿ (Guarantee Card) ಕರೆಂಟ್ ಬಿಲ್ (Electricity Bill) ಫ್ರೀ ಎಂದು ಹೇಳಿದೆ. ಹೀಗಾಗೀ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಜೆಸ್ಕಾಂ (JESCOM) ಸಿಬ್ಬಂದಿಗೆ ವ್ಯಕ್ತಿಯೊಬ್ಬ ತರಾಟೆ ತೆಗೆದುಕೊಂಡ ಘಟನೆ ಬೀದರ್ (Bidar) ತಾಲೂಕಿನ ಯದಲಾಪೂರ್ ಗ್ರಾಮದಲ್ಲಿ ನಡೆದಿದೆ.

ಮನೆಗೆ ಬಂದು ಕರೆಂಟ್ ಬಿಲ್ ಎಷ್ಟು ಬಾಕಿ ಇದೆ ಎಂದು ಜೆಸ್ಕಾಂ ಸಿಬ್ಬಂದಿ ಕೇಳಿದ ತಕ್ಷಣ ಕಾಂಗ್ರೆಸ್ ಸರ್ಕಾರ ಬಂದರೆ ಅವರೇ ಕಟ್ಟುತ್ತಾರೆ ಎಂದಿದ್ದಾರೆ. ನಾವು ಯಾಕೆ ಕಟ್ಟೋಣ ಸರ್? ನೀವು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಎಂದು ವ್ಯಕ್ತಿ ಹೇಳಿದ್ದಾನೆ.

ಅದು ಮುಂದಿನ ತಿಂಗಳು ಇದೆ, ಅವರು ಇನ್ನೂ ಆದೇಶ ಮಾಡಿಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದಾಗ, ನಾವು ಒಂದು ರೂಪಾಯಿನೂ ಕಟ್ಟಲ್ಲ. ಕಾಂಗ್ರೆಸ್ ಸರ್ಕಾರ ಬಂದಿದೆಯಲ್ಲಾ? ನೀವು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮನೆಗೆ ಹೋಗಿ ಬಿಲ್ ಕೇಳಿ ಎಂದು ವ್ಯಕ್ತಿ ಪಟ್ಟು ಹಿಡಿದಿದ್ದಾನೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?

ಮುಂದಿನ ತಿಂಗಳು ಬಂದರೆ ಬಿಲ್ ಕಟ್ಟತ್ತಿರಾ ಎಂದು ಜೆಸ್ಕಾಂ ಸಿಬ್ಬಂದಿ ಪ್ರಶ್ನೆ ಮಾಡಿದರೆ, ಮುಂದಿನ ತಿಂಗಳು ಬಂದರೆ ಒಡಾಡಿಸಿ ಹೊಡೆಯುತ್ತೇವೆ ಎಂದು ವ್ಯಕ್ತಿ ಜೆಸ್ಕಾಂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾನೆ. ಇದನ್ನೂ ಓದಿ: ಇವತ್ತೇ ಸಿದ್ದು ಸಂಪುಟಕ್ಕೆ ಕ್ಲೈಮ್ಯಾಕ್ಸ್ – 24 ಸಂಭವನೀಯ ಸಚಿವರು ಯಾರು?

Share This Article