ಮೇ 13ಕ್ಕೆ ಸಿದ್ದರಾಮಯ್ಯ ಸೋಲಿನ ಜೊತೆಗೆ ಮುಸ್ಲಿಮ್‌ ಓಲೈಕೆ ಅಂತ್ಯ : ಪ್ರತಾಪ್‌ ಸಿಂಹ

Public TV
1 Min Read

ಮಡಿಕೇರಿ: ಮುಸ್ಲಿಮರ ಓಲೈಕೆ ಮಾಡುವ ಕೆಲಸಕ್ಕೆ 2023 ಮೇ 13ರಂದು ಸಿದ್ದರಾಮಯ್ಯ (Siddaramaiah) ಅವರ ಜೊತೆಗೆ ಅಂತ್ಯ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.

ಕೊಡಗಿನ ಸೋಮವಾರಪೇಟೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ಮತಯಾಚನೆಗೆ ಆಗಮಿಸಿದ ಬಳಿಕ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರು ಜಾತಿವಾದಿಯಾಗಿದ್ದಾರೆ. ವೀರಶೈವ ಅವರನ್ನು ಒಡೆಯುವ ಕೆಲಸ ಹಾಗೂ ಹಿಂದೂಗಳನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಮುಸ್ಲಿಂ ಅವರ ಓಲೈಕೆ ಮಾಡುವ ಕೆಲಸಕ್ಕೆ 2023 ಮೇ 13 ರಂದು ಸಿದ್ದರಾಮಯ್ಯ ಅವರ ಜೊತೆಗೆ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹತಾಶೆ ಹಾಗೂ ಭಯದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ನಾವು ವರುಣ ಕ್ಷೇತ್ರದಲ್ಲಿ ಮತವನ್ನು ಕೇಳಲು ಹೋದ್ರೆ ಅಲ್ಲಿ ಕಾರ್ಯಕರ್ತರನ್ನು ಬಿಟ್ಟು ಛೀಮಾರಿ ಹಾಕಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ನಮಾಜ್ ಕೂಗು ಕೇಳಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

ಸಿದ್ದರಾಮಯ್ಯ ಹುಂಡಿಯಲ್ಲಿ ರಾಮ ಭಕ್ತರಿಗೆ ಬೆಲೆ ಇದೆ, ಹೊರತು ರಾಮ ವಿರೋಧಿಗಳಿಗೆ ಬೆಲೆ ಇಲ್ಲ. ರಾಮನ ಬಂಟನಾದ ಆಂಜನೇಯನ ಹುಟ್ಟಿದ್ದು ಯಾವಾಗ ಅನ್ನೊದು ಗೊತ್ತ ಎಂದು ಪ್ರಶ್ನೆ ಮಾಡಿದವರನ್ನು ವರುಣಾ ಕ್ಷೇತ್ರದ ಜನರು ಆಶೀರ್ವಾದ ಮಾಡುವುದಿಲ್ಲ. ಅವರಿಗೆ ತಕ್ಕ ಪಾಠಗಳನ್ನು ಜನ ಕಲಿಸುತ್ತಾರೆ. 13 ನೇ ದಿನಾಂಕದಂದು ಬರುವ ಫಲಿತಾಂಶ ಸೋಮಣ್ಣ ಅವರು ಗೆಲವು ಅಗಿರುತ್ತದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

Share This Article