`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

Public TV
2 Min Read

ಪ್ಯಾನ್‌ ಇಂಡಿಯಾ `ಪುಷ್ಪ’ (Pushpa) ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದರೂ ಅದರ ಹವಾ ಮಾತ್ರ ಕಮ್ಮಿಯಾಗಿಲ್ಲ. ಚಿತ್ರದ ಮೇಲಿನ ಕ್ರೇಜ್ ಜಾಸ್ತಿಯಾಗುತ್ತಲೇ ಇದೆ. `ಪುಷ್ಪ’ ಪಾರ್ಟ್ 2ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಚಿತ್ರದ `ಸಾಮಿ ಸಾಮಿ’ (Sami Sami) ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಆದರೆ ಇದೀಗ ಇನ್ಮುಂದೆ ಡ್ಯಾನ್ಸ್ ಮಾಡದಿರಲು ನಿರ್ಧರಿಸಿದ್ದಾರೆ. ಅಭಿಮಾನಿಯ ಮನವಿಗೂ ರಶ್ಮಿಕಾ ನೋ ಎಂದಿದ್ದಾರೆ.

ನ್ಯಾಷನಲ್ ಸ್ಟಾರ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದ್ದರು. ಅವರಿಗೆ ಎದುರಾದ ಕೆಲ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟಿದರು. ಇದರಲ್ಲಿ `ಸಾಮಿ ಸಾಮಿ’ ಹಾಡಿನ ವಿಚಾರವೂ ಅಭಿಮಾನಿಯಿಂದ ಪ್ರಸ್ತಾಪ ಆಗಿತ್ತು. ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಶಿವಣ್ಣನ ಭೇಟಿಯಾದ ಮಾಲಿವುಡ್ ನಟಿ

ನಾನು ನಿಮ್ಮ ಜೊತೆ `ಸಾಮಿ ಸಾಮಿ’ ಹಾಡಿಗೆ ಡ್ಯಾನ್ಸ್ ಮಾಡಬೇಕು ಎಂದು ಅಭಿಮಾನಿಯೋರ್ವ ಕೋರಿದ್ದ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ನಾನು ಸಾಮಿ ಸಾಮಿ ಸ್ಟೆಪ್‌ನ ತುಂಬಾ ಬಾರಿ ಮಾಡಿದ್ದೇನೆ. ವಯಸ್ಸಾದಾಗ ನನಗೆ ಬೆನ್ನಿನ ಸಮಸ್ಯೆ ಬರಬಹುದು ಎಂದು ಅನಿಸುತ್ತಿದೆ. ನಾವು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ ಎಂದು ರಶ್ಮಿಕಾ ಉತ್ತರ ನೀಡಿದ್ದಾರೆ. ಈ ಉತ್ತರ ನೋಡಿ ಹಲವರಿಗೆ ಅಚ್ಚರಿ ಮೂಡಿಸಿದೆ. ರಶ್ಮಿಕಾಗೆ `ಸಾಮಿ ಸಾಮಿ’ ಸ್ಟೆಪ್ ಬೇಸರ ಮೂಡಿಸಿದೆ. ಅದಕ್ಕೆ ಅವರು ಮುಂದಿನ ದಿನಗಳಲ್ಲಿ ಇದನ್ನು ಮಾಡದಿರಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಹೇಳಿರಬಹುದು ಎಂದು ಅಂದಾಜಿಸಿದ್ದಾರೆ.

ನಟಿ ರಶ್ಮಿಕಾ ಅವರು ಪುಷ್ಪ 2, ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿ ಗಮನ ಸೆಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *