ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್

Public TV
2 Min Read

ಯಾದಗಿರಿ: ಪೊಲೀಸರ ಮೇಲೆ ಪಿಸ್ತೂಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಡಕಾಯಿತಿ (Robbery) ಗ್ಯಾಂಗ್ ಲೀಡರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

ಆರೋಪಿ ಮಹಮ್ಮದ್ ರಫಿಯನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ ಆತ ಪಿಸ್ತೂಲ್ ಹಾಗೂ ಚಾಕುವಿನಿಂದ ಹೆದರಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ವಿ.ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿಯವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೂವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ

ಪ್ರಕರಣದ ಹಿನ್ನೆಲೆ: ಫೆ. 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ದೀಪಕ್ ನಂದಕಿಶೋರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಎಂಟರಿಂದ ಹತ್ತು ಜನರ ತಂಡದಲ್ಲಿ ನಾಲ್ಕು ಜನ ದೀಪಕ್ ನಂದಕಿಶೋರ್ ಮನೆಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ಹಣವನ್ನು ದೋಚಿದ್ದರು.

ದೀಪಕ್ ಕುಟುಂಬಸ್ಥರು ವಿರೋಧಿಸಿದಾಗ ಕಾರದಪುಡಿ ಎರಚಿ ವಿಕೃತಿ ಮರೆದಿದ್ದರು. ಈ ವೇಳೆ ದೀಪಕ್ ಸಹೋದರ ಮನೆಯ ಮಹಡಿಯಿಂದ ಹಾರಿ ಕಿರುಚಾಡಿ ಜನರನ್ನ ಸೇರಿಸಿದ್ದರು. ಜನ ಬರುವಷ್ಟರಲ್ಲಿ ಕಳ್ಳರು ತಪ್ಪಿಸಿಕೊಂಡಿದ್ದರು. ನಗರದ ಪ್ರಮುಖ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು.

ಪ್ರಕರಣ ಸಂಬಂಧ ಯಾದಗಿರಿ ಎಸ್ಪಿ ಸಿಬಿ ವೇದಮೂರ್ತಿ, ಎಸ್ಪಿ ಸುನೀಲ್ ವಿ ಮೂಲಿಮನಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

CRIME 2

ಸತತ 15 ದಿನಗಳ ಕಾಲ ಹೈದ್ರಾಬಾದ್ (Hyderabad), ನಾರಾಯಣಪೇಟೆ ಹಾಗೂ ರಾಯಚೂರು (Raichur) ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಿದ್ದ ಪೊಲೀಸರ ತಂಡ ಭಾನುವಾರ ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಮಹ್ಮದ್ ಸಾಜೀದ್, ಸೈಯದ್ ಮುಕ್ತಿಯಾರ್, ಮಹೆಬೂಬ್, ಶಹಬಾಜ್ ಹೈಯಾಸ್ ಬಂಧಿತ ಆರೋಪಿಗಳು. ಆದರೆ ಗ್ಯಾಂಗ್ ಲೀಡರ್ ಮಹಮ್ಮದ್ ರಫೀ ಹಾಗೂ ಸಲೀಂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು.

ಗ್ಯಾಂಗಸ್ಟರ್ ಮಹಮ್ಮದ್ ರಪಿ, ಉದ್ಯಮಿ ದೀಪಕ್ ನಂದಕಿಶೋರ್ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ. ನಂದಕಿಶೋರ್ ಸಿಗರೇಟ್ ಸೇರಿದಂತೆ ಸಗಟು ವ್ಯಾಪಾರದ ವ್ಯಾಪರಸ್ಥನಾಗಿದ್ದ. ಕೆಲ ದಿನಗಳ ಹಿಂದೆ ದೀಪಕ್ ನಂದಕಿಶೋರ್ ಮನೆಯಲ್ಲಿ ಸಿಗರೇಟ್ ಬಾಕ್ಸ್ ಗಳನ್ನ ರಫಿ ಕದ್ದು ಸಿಕ್ಕಿಬಿದ್ದಿದ್ದ. ಆಗ ಪೊಲೀಸರಿಗೆ ದೂರು ನೀಡದೇ ಬುದ್ಧಿ ಹೇಳಿ ಕೆಲಸದಿಂದ ತೆಗೆದಿದ್ದರು. ಇದೇ ಸಿಟ್ಟಿಗೆ ಕಳ್ಳತನದ ಪ್ಲಾನ್ ಮಾಡಿದ್ದ. ಸಲೀಂ ಹಾಗೂ ರಫಿ ಯಾದಗಿರಿ ನಗರದ ವರ್ಕನಳ್ಳಿ ಭಾಗದಲ್ಲಿ ಒಂದೇ ಕಡೆ ಅಡಗಿ ಕುಳಿತಿದ್ದ ಖಚಿತ ಮಾಹಿತಿ ಪಡೆದ ಸಿಪಿಐ ಸುನೀಲ್ ನೇತೃತ್ವದ ತಂಡ ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದೆ.

ಗಾಯಗೊಂಡಿದ್ದ ಆರೋಪಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯ ಪ್ರತಿದಾಳಿಯಲ್ಲಿ ಗಾಯಗೊಂಡ ಪೊಲೀಸರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಎಸ್‍ಪಿ ವೇದಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಹೇ ನಡೀಯಪ್ಪ ನೀನು, ನಮಗೆ ತಲೆ ಬಿಸಿಯಾಗಿದೆ: ಸಿದ್ದರಾಮಯ್ಯ ಇನ್ ಟೆನ್ಶನ್

Share This Article
Leave a Comment

Leave a Reply

Your email address will not be published. Required fields are marked *