ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

Public TV
2 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಹಿಜಬ್ (Hijab) ನಿಂದ ಆರಂಭವಾಗಿದ್ದ ಜಟಾಪಟಿ ಕೊಂಚ ತಣ್ಣಗಾಗಿತ್ತು. ಇದೀಗ ಮತ್ತೆ ಜಾತ್ರೆ ಉತ್ಸವ ಆರಂಭವಾಗುತ್ತಿದ್ದಂತೆ ವ್ಯಾಪಾರ ನಿರಾಕರಣೆಗೆ ಕರೆ ನೀಡಲಾಗಿದೆ. ಇದಕ್ಕೆ ಕಾರಣ ಮಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಕುಕ್ಕರ್ ಬಾಂಬ್ ಸ್ಫೋಟ (Mangaluru Bomb Blast Case) ಪ್ರಕರಣ ಕಾರಣವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಜಬ್ ಹೋರಾಟದ (Hijab Controversy) ನಂತರ ಧರ್ಮ ದಂಗಲ್ ಆರಂಭವಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಮಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬಾರದು ಎಂಬ ಅಸಹಕಾರ ಧೋರಣೆ ಕಳೆದ ವರ್ಷ ನಡೆದಿತ್ತು. 2-3 ತಿಂಗಳ ಜಟಾಪಟಿಯ ನಂತರ ಕೆಲವು ಉತ್ಸವ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳು (Muslim Traders) ವ್ಯವಹಾರ ನಡೆಸಿದ್ದರು. ಇದೀಗ ಮತ್ತೆ ವೈಮನಸ್ಸಿಗೆ ಕಾರಣವಾಗಿದ್ದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ. ಇದನ್ನೂ ಓದಿ: ಹಿರೇಕೊಡಗಲಿ ಗ್ರಾಮದ ಅಭಿಮಾನಿ ಮನೆಗೆ ಧ್ರುವ ಸರ್ಜಾ ಅಚ್ಚರಿಯ ಭೇಟಿ

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆಯುವ ಜಾತ್ರೆ ಮತ್ತು ಉತ್ಸವದ ವ್ಯಾಪಾರಕ್ಕೆ ಈ ಬಾರಿ ತಡೆಯೊಡ್ಡಲಾಗಿದೆ. ಕೋಟ್ಯಂತರ ರೂಪಾಯಿ ವ್ಯವಹಾರ ಕೈ ತಪ್ಪಲಿದೆ. ಶಂಕಿತ ಉಗ್ರ ಶಾರಿಕ್ (Shariq) ನಿಂದ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಬೆಳವಣಿಗೆಯಿಂದ ಕರಾವಳಿಯಲ್ಲಿ ಹಿಂದೂ ಮುಸ್ಲಿಮರ ನಡುವೆ ಬಿರುಕು ಜಾಸ್ತಿಯಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವ್ಯಾಪಾರ ನಿರಾಕರಣೆ, ಚಳುವಳಿ ಮಾದರಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸಂಗೀತ ವಿದ್ವಾನ್ ಎಂ.ನಾರಾಯಣಗೆ ಕದ್ರಿ ಸಂಗೀತ ಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ

ವಿಶ್ವ ಹಿಂದೂ ಪರಿಷತ್ (VHP), ಭಜರಂಗದಳ (Bajrang Dal), ಹಿಂದೂ ಜಾಗರಣ ವೇದಿಕೆ ಶ್ರೀರಾಮ ಸೇನೆ (SriRam Sena) ತಮ್ಮ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪತ್ರದ ಮುಖೇನ ಮನವಿ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಮೂಲಕ ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ. ಎರಡು ದಿನಗಳ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಆಡಳಿತ ಮಂಡಳಿಯೇ ಈ ತೀರ್ಮಾನವನ್ನು ಮಾಡಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳು ಮನವಿ ಕೊಡುತ್ತಿವೆ. ಕಂಬಳ ದೈವಾರಾಧನೆ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ಅನ್ಯಧರ್ಮಿಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಕೂಗೂ ಜೋರಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *