-ರಾಜಿ ಮಾಡಿಕೊಳ್ಳದೇ ದೇಶದ ರಾಜಕೀಯದಲ್ಲಿ ಮಹಿಳೆಯರು ಮುನ್ನಡೆಯುವುದು ಬಹುತೇಕ ಅಸಾಧ್ಯ
ಪಾಟ್ನಾ: ಶೇ.90ರಷ್ಟು ಮಹಿಳೆಯರ ರಾಜಕೀಯ ವೃತ್ತಿಜೀವನ ರಾಜಕಾರಣಿಗಳ ಬೆಡ್‌ರೂಮ್‌ನಿಂದ ಪ್ರಾರಂಭವಾಗುತ್ತದೆ ಎಂದು ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ (Pappu Yadav) ಅಲಿಯಾಸ್ ರಾಜೇಶ್ ರಂಜನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. ಶೇ.90ರಷ್ಟು ಮಹಿಳೆಯರ ರಾಜಕೀಯ ವೃತ್ತಿಜೀವನವು ರಾಜಕಾರಣಿಗಳ ಬೆಡ್‌ರೂಮ್‌ನಿಂದ ಪ್ರಾರಂಭವಾಗುತ್ತದೆ. ಕಟು ಸತ್ಯ ಏನೆಂದರೆ `ರಾಜಿ’ ಮಾಡಿಕೊಳ್ಳದೇ ದೇಶದ ರಾಜಕೀಯದಲ್ಲಿ ಮಹಿಳೆಯರು ಮುನ್ನಡೆಯುವುದು ಬಹುತೇಕ ಅಸಾಧ್ಯವಾಗಿದ್ದು, ಅವರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂದಿದ್ದಾರೆ.ಇದನ್ನೂ ಓದಿ:ರಾಜ್ಯದಲ್ಲಿ ಹಿಟ್ ಸ್ಟ್ರೋಕ್‌ಗೆ ಎರಡನೇ ಬಲಿ – ಬಿಸಿಲ ತಾಪಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾವು
ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ದೇವತೆಗಳೆಂದು ಪರಿಗಣಿಸಲಾಗಿದ್ದರೂ ವಾಸ್ತವವು ಇದಕ್ಕೆ ವಿರುದ್ಧವಾಗಿದೆ. ರಾಜಕೀಯದಲ್ಲಿ 90% ಮಹಿಳೆಯರು ಪ್ರಭಾವಿ ನಾಯಕರ ಬೆಡ್‌ರೂಮ್‌ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. ಮಹಿಳೆಯರ ಶೋಷಣೆ ಅಧಿಕಾರದ ಕಾರಿಡಾರ್‌ನಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದ್ದಾರೆ.
ಸಂಸದ ಪಪ್ಪು ಯಾದವ್ ನೀಡಿದ ಹೇಳಿಕೆ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಬಿಹಾರ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ. ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡುವುದಾಗಿ ಆಯೋಗ ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಬೆಂಗ್ಳೂರಲ್ಲಿ ಜೀವಂತ ಗ್ರೆನೇಡ್ ಪತ್ತೆ ಕೇಸ್ – 7 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್

