9 ದೇಶಗಳಲ್ಲಿ ಓಮಿಕ್ರಾನ್ ಪತ್ತೆ

Public TV
1 Min Read

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಬೆಳಕಿಗೆ ಬಂದ ಓಮಿಕ್ರಾನ್ ಹೆಮ್ಮಾರಿ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಆಸ್ಟ್ರೇಲಿಯಾ, ಬ್ರಿಟನ್‍ನಲ್ಲಿಯೂ ಹೊಸದಾಗಿ ತಲಾ ಎರಡು ಕೇಸ್ ಬೆಳಕಿಗೆ ಬಂದಿದ್ದು, ಓಮಿಕ್ರಾನ್ ವೈರಸ್ ಕಂಡು ಬಂದ ದೇಶಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ.

ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ , ಬ್ರಿಟನ್, ಇಸ್ರೇಲ್, ಹಾಂಗ್ ಕಾಂಗ್, ಬೋಟ್ಸ್ವಾನ, ಬೆಲ್ಜಿಯಂ ಒಟ್ಟು 9 ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ಓಮಿಕ್ರಾನ್ ವೈರಸ್‍ಗೆ ಡೆಲ್ಟಾ ವೈರಸ್‍ಗಿಂತ ಶೇಕಡಾ 40ರಷ್ಟು ವೇಗದಲ್ಲಿ ಹಬ್ಬುವ ಶಕ್ತಿ ಇದೆ ಎನ್ನಲಾಗಿದೆ. ಹೀಗಾಗಿ ಜಗತ್ತಿನ ಬಹುತೇಕ ದೇಶಗಳು ಅಲರ್ಟ್ ಆಗಿವೆ. ಈಗಾಗಲೇ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಜಪಾನ್ ಸೇರಿ ಹಲವು ದೇಶಗಳು ದಕ್ಷಿಣ ಆಫ್ರಿಕಾ ಜೊತೆಗಿನ ವೈಮಾನಿಕ ಸಂಪರ್ಕವನ್ನು ತಾತ್ಕಾಲಿಕವಾಗಿ ರದ್ದು ಮಾಡಿವೆ. ಭಾರತ ಕೂಡ ತುರ್ತುಸಭೆ ನಡೆಸಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಕೋವಿಡ್ ತಜ್ಞರು ಈಗಲೂ ಹೇಳುತ್ತಿರುವುದು ಒಂದೇ ಮಾತು. ಮಾಸ್ಕ್ ಧರಿಸಿ. ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಚಳಿಗಾಲದ ಅಧಿವೇಶನ – ಆಡಳಿತ ಪಕ್ಷ ವಿರುದ್ಧ ಮುಗಿಬೀಳಲು ವಿಪಕ್ಷ ತಯಾರಿ

ಓಮಿಕ್ರಾನ್ ವೈರಸ್ ಬಗ್ಗೆ ತಿಳಿಯಲು ಮತ್ತಷ್ಟು ಅಧ್ಯಯನ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೇ ದಕ್ಷಿಣ ಆಫ್ರಿಕಾ ದೇಶವನ್ನು ಅಮೆರಿಕಾ ಅಭಿನಂದಿಸಿದೆ. ಹೊಸ ರೂಪಾಂತರಿಯನ್ನು ಕೂಡಲೇ ಗುರುತಿಸಿ, ಈ ಬಗ್ಗೆ ಜಗತ್ತಿಗೆ ತಿಳಿಸಿ ಎಚ್ಚರಿಸಿದ್ದಕ್ಕೆ ಧನ್ಯವಾದ ಎಂದು ಅಮೆರಿಕಾ ಅಭಿನಂದಿಸಿದೆ. ಮಾಹಿತಿ ಹಂಚಿಕೊಳ್ಳುವಲ್ಲಿ ಪಾರದರ್ಶಕತೆ ತೋರಿದ ದಕ್ಷಿಣ ಅಫ್ರಿಕಾ ಜಗತ್ತಿಗೆ ಆದರ್ಶಪ್ರಾಯ ಎಂದಿದೆ. ಕೊರೊನಾ ಹುಟ್ಟಿಗೆ ಕಾರಣವಾದ ಚೀನಾ, ಈ ವಿಚಾರವನ್ನು ಬಹಳ ತಡವಾಗಿ ಜಗತ್ತಿನ ಮುಂದಿಟ್ಟಿತ್ತು. ಆದರೆ ಅಷ್ಟೊತ್ತಿಗೆ ಜಗತ್ತಿನದ್ಯಾಂತ ಕೊರೊನಾ ಹಬ್ಬಿತ್ತು. ಹಾಗಾಗಿ ದಕ್ಷಿಣ ಆಫ್ರಿಕಾ ಮೊದಲೇ ಜಗತ್ತಿಗೆ ತಿಳಿಸಿರುವುದು ಗಮನರ್ಹವಾಗಿದೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ: ಸುಪ್ರೀಂ ಬೇಸರ

Share This Article
Leave a Comment

Leave a Reply

Your email address will not be published. Required fields are marked *