ಭದ್ರತಾ ಪಡೆಗಳ ಗುಂಡಿಗೆ ಐವರು ಮಹಿಳೆಯರು ಸೇರಿ 17 ಮಂದಿ ನಕ್ಸಲರು ಬಲಿ

1 Min Read

ರಾಂಚಿ: ಜಾರ್ಖಂಡ್‌ನ (Jharkhand) ಸಾರಂಡಾ ಕಾಡಿನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ (Encounter) ಐವರು ಮಹಿಳೆಯರು ಸೇರಿದಂತೆ 17 ಮಂದಿ ನಕ್ಸಲರು (Naxal) ಬಲಿಯಾಗಿದ್ದಾರೆ.

ಆಪರೇಷನ್ ಮೇಘಬುರು ಹೆಸರಿನಲ್ಲಿ 209 ಕೋಬ್ರಾ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್‌ ತಂಡದಿಂದ ಜ.22 ರಂದು ಈ ಎನ್‌ಕೌಂಟರ್‌ ಆರಂಭಗೊಂಡಿತ್ತು. ಸತತ ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐನ (ಮಾವೋವಾದಿ) ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ, ಪತಿರಾಮ್ ಮಾಜ್ಹಿ ಅಲಿಯಾಸ್ ಅನಲ್ ಡಾ ಈ ವೇಳೆ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ 149 ಪ್ರಕರಣಗಳಿದ್ದವು, ಅಲ್ಲದೇ ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ. ಇವನ ಜೊತೆಗೆ ಇನ್ನಿತರ 14 ಮಂದಿ ಹತ್ಯೆಯಾಗಿದ್ದರು. ಇದನ್ನೂ ಓದಿ: ತಲೆಗೆ ಲಕ್ಷ ಲಕ್ಷ ಬಹುಮಾನ ಘೋಷಣೆಯಾಗಿದ್ದ 9 ನಕ್ಸಲರು ಶರಣು

ಮತ್ತೊಮ್ಮೆ ನಡೆದ ಗುಂಡಿನ ದಾಳಿಯ ಬಳಿಕ ಎರಡು ಶವಗಳು ಪತ್ತೆಯಾಗಿವೆ. ಈ ಮೂಲಕ ಸಾವಿನ ಸಂಖ್ಯೆ 17 ಕ್ಕೆ ಏರಿದೆ. ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಹೇಳಿಕೊಂಡಿವೆ. ಭದ್ರತಾ ಪಡೆಗಳಿಂದ ಶೋಧ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿಯ ಆರಂಭದಲ್ಲಿ, ಬಸ್ತಾರ್ ವ್ಯಾಪ್ತಿಯ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದರು. ಛತ್ತೀಸ್‌ಗಢದಲ್ಲಿ ಒಟ್ಟು 47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶುಕ್ರವಾರ ಶರಣಾಗಿದ್ದರು.

ಜ.20 ರಂದು, ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಮಾತನಾಡುತ್ತಾ, ನಗರ ನಕ್ಸಲಿಸಂನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್ – ಜೈಶ್ ಉಗ್ರ ಬಲಿ

Share This Article