ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟವ್ ಪ್ರಕರಣಗಳ ಸಂಖ್ಯೆ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 42,470 ಕೇಸ್ ದಾಖಲಾಗಿದ್ದು, 26 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 30 ಸಾವಿರ ಗಡಿದಾಟಿದ್ದ ಪಾಸಿಟಿವ್ ಕೇಸ್‍ಗಳ ಸಂಖ್ಯೆ ದಿಢೀರ್ ಆಗಿ 17,266ಕ್ಕೆ ಇಳಿಕೆ ಕಂಡಿದೆ.
ರಾಜ್ಯದಲ್ಲಿ ಇಂದು ಒಟ್ಟು 35,140 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 34,67,472 ಮಂದಿಗೆ ಕೊರೊನಾ ಬಂದಿದೆ. 30,98,432 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪಾಸಿಟಿವಿಟಿ ರೇಟ್ ಶೇ.19.33 ರಷ್ಟಿದ್ದರೇ, ಕೋವಿಡ್-19 ಮರಣ ಪ್ರಮಾಣ ಶೇ.0.06 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 17,266 ಪಾಸಿಟಿವ್ ಕೇಸ್ ದಾಖಲಾಗಿದ್ದು, 443 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 6 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್
ರಾಜ್ಯದಲ್ಲಿ ಇಂದು ಒಟ್ಟು 1,79,816 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 2,19,699 ಸ್ಯಾಂಪಲ್ (ಆರ್ಟಿಪಿಸಿಆರ್ 1,70,637 + 49,062 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 42, ಬಳ್ಳಾರಿ 845, ಬೆಳಗಾವಿ 405, ಬೆಂಗಳೂರು ಗ್ರಾಮಾಂತರ 958, ಬೆಂಗಳೂರು ನಗರ 17,266, ಬೀದರ್ 138, ಚಾಮರಾಜನಗರ 397, ಚಿಕ್ಕಬಳ್ಳಾಪುರ 892, ಚಿಕ್ಕಮಗಳೂರು 166, ಚಿತ್ರದುರ್ಗ 622, ದಕ್ಷಿಣ ಕನ್ನಡ 795, ದಾವಣಗೆರೆ 645, ಧಾರವಾಡ 790, ಗದಗ 306, ಹಾಸನ 2,679, ಹಾವೇರಿ 124, ಕಲಬುರಗಿ 665, ಕೊಡಗು 653, ಕೋಲಾರ 1,417, ಕೊಪ್ಪಳ 138, ಮಂಡ್ಯ 1,822 ಮೈಸೂರು 4,601, ರಾಯಚೂರು 236, ರಾಮನಗರ 506, ಶಿವಮೊಗ್ಗ 474, ತುಮಕೂರು 3,417 ಉಡುಪಿ 877, ಉತ್ತರ ಕನ್ನಡ 390, ವಿಜಯಪುರ 125 ಮತ್ತು ಯಾದಗಿರಿಯಲ್ಲಿ 79 ಪಾಸಿಟಿವ್ ಪ್ರಕರಣ ದಾಖಲಾಗಿದೆ.