42 ನಕಲಿ ಕಾಮಗಾರಿ ಬಿಲ್‌ – ED, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು

Public TV
2 Min Read

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 42 ನಕಲಿ ಕಾಮಗಾರಿಯ ಬಿಲ್ ತಯಾರಾಗಿದ್ದು, 9.5 ಕೋಟಿ ರೂ. ಅವ್ಯವಹಾರದ ವಿರುದ್ಧ ಜಾರಿ ನಿರ್ದೇಶನಾಲಯ (ED) ಹಾಗೂ ಲೋಕಾಯುಕ್ತಕ್ಕೆ (Karnataka Lokayukta) ದೂರು ಕೊಟ್ಟಿರುವುದಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.

ಈ ಸಂಬಂಧ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತನಿಖೆ ಮಾಡುವವರು ಎಲ್ಲವನ್ನೂ ತರಿಸಿಕೊಳ್ಳುತ್ತಾರೆ. ನಾನು ಒಬ್ಬ ಶಾಸಕನಾಗಿ ನನ್ನ ಗಮನಕ್ಕೆ ಬಂದಿದ್ದನ್ನ ತಿಳಿಸಿದ್ದೇನೆ. ಸರ್ಕಾರ SIT ಮೂಲಕ ತನಿಖೆಗೆ ಮುಂದಾಗಿದೆ. ನನ್ನ ಗಮನಕ್ಕೆ ಬಂದಿರೋದನ್ನ ನಾನು ಮಾಡುತ್ತಿದ್ದೇನೆಯೇ ಹೊರತು ತಪ್ಪೇನು ಮಾಡಿಲ್ಲ. ಲೋಕಾಯುಕ್ತ, ಇಡಿಗೆ ದೂರು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ

ಇಡೀ ಕ್ಷೇತ್ರದಲ್ಲೇ ಅಭಿವೃದ್ಧಿ ಕಾಮಗಾರಿ (Development Work) ನಿಂತಿದೆ, ಬೇಕಿದ್ದರೆ ತನಿಖೆ ಮಾಡಲಿ, ಸತ್ಯ ಹೊರಬರಲಿ. ಈಗಾಗಲೇ 4 ತಿಂಗಳು ಕಳೆದಿದೆ. ಫ್ಲೈ ಓವರ್ ಕಾಮಗಾರಿ ನಿಂತಿದೆ, ಶಾಲೆಗಳ ಕಾಮಗಾರಿಯೂ ನಿಂತಿದೆ. ಮನೆ ಕಟ್ಟುವವರಿಗೆ ತೊಂದರೆಯಾಗಿದೆ, ಲಾ ಆಂಡ್ ಆರ್ಡರ್ ಸಮಸ್ಯೆಯಿದೆ. ನಡೆಯುತ್ತಿರೋ ಕಾಮಗಾರಿ ನಿಲ್ಲಿಸಿ ಏನು ಸಾಧನೆ ಮಾಡ್ತಾರೆ? ಸರ್ಕಾರದಲ್ಲಿ ಹೊಸ ಕಾಮಗಾರಿಗೆ ದುಡ್ಡಿಲ್ಲ. ಹೊಸದಾಗಿ ಮಾಡೋಕಾಗಲ್ಲ ಅಂತ ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಣ ಇಲ್ಲದೇ ಇದ್ರೆ ಹಿಂದಿನ ಸರ್ಕಾರದ ಕಾಮಗಾರಿಯನ್ನಾದರೂ ಮಾಡಬೇಕಲ್ಲ. ನನ್ನ ಕ್ಷೇತ್ರ ಬೆಂಗಳೂರು ಗ್ರಾಮಾಂತರದಲ್ಲಿದೆ. ಅದಕ್ಕೆ ನನ್ನ ಮೇಲೆ ಅಭಿಮಾನ, ಈ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಿದ್ದು, ತಾಯಿ ರಾಜರಾಜೇಶ್ವರಿ ತೀರ್ಪು. ಮುನಿರತ್ನ ಇಲ್ಲದೇ ಇದ್ದಿದ್ದರೆ ಈ ಕ್ಷೇತ್ರವನ್ನ ಯಾರೂ ತಿರುಗಿ ನೋಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇವತ್ತು ಐಟಿ-ಬಿಟಿಗೆ ಇಡೀ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆದ್ರೆ ನಮ್ಮ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಕ್ಕದ ರಾಜ್ಯಕ್ಕೆ ಹೈದರಾಬಾದ್‌ಗೆ ಹೋಗ್ತಿದೆ. ಅದರ ಬಗ್ಗೆ ಗಮನ ಹರಿಸೋದು ಬಿಟ್ಟು ಬೇಡದಿರುವುದರ ಬಗ್ಗೆ ಈ ಸರ್ಕಾರ ಮಾತನಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್