ಬಾಂಬ್ ಮಾಡುವುದನ್ನ ಕಲಿತು ಪತ್ನಿ ಮೇಲೆ ಅತ್ಯಾಚಾರ ಮಾಡಿದವನನ್ನ ಕೊಂದ!

Public TV
2 Min Read

ಭೋಪಾಲ್: ಬಾಂಬ್ ತಯಾರು ಮಾಡುವುದನ್ನು ಕಲಿತು ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರ ಮೇಲೆ ಪತಿ ಸೇಡು ತೀರಿಸಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರತ್ಲಾಮ್ ಜಿಲ್ಲೆಯ ನಿವಾಸಿ 32 ವರ್ಷದ ವ್ಯಕ್ತಿಯ ಪತ್ನಿ ಮೇಲೆ ಅದೇ ಊರಿನ ಜನರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ವಿಷಯ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿದ್ದರು. ಅದಕ್ಕೆ ಆ ವ್ಯಕ್ತಿಯೂ ಸಹ ದೂರನ್ನು ನೀಡಿರಲಿಲ್ಲ. ಆದರೆ ಪತ್ನಿಗೆ ಆಗಿದ್ದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಂಚನ್ನು ಮಾಡುತ್ತಿದ್ದ. ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

POLICE JEEP

ಈ ಹಿನ್ನೆಲೆ ಆತ ಇಂಟರ್ನೆಟ್‍ನಿಂದ ಬಾಂಬ್ ಅನ್ನು ಹೇಗೆ ತಯಾರಿ ಮಾಡಬಹುದು ಎಂದು ಕಲಿತುಕೊಂಡಿದ್ದಾನೆ. ಬಾಂಬ್ ಮಾಡುವುದನ್ನು ಕಲಿತ ನಂತರ ಜ.4 ರಂದು ಹಳ್ಳಿಯ ಲಾಲ್ ಸಿಂಗ್ ಅವರ ಕೊಳವೆ ಬಾವಿಯ ಬಳಿ ಬಾಂಬ್ ಇಟ್ಟಿದ್ದಾನೆ. ನಂತರ ಆ ಬಾಂಬ್ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಇದ್ದ ಲಾಲ್ ಸಿಂಗ್ ಸಾವನ್ನಪ್ಪಿದ್ದ. ಬಳಿಕ ಪೊಲೀಸರು ಸ್ಫೋಟಕ್ಕೆ ಕಾರಣವನ್ನು ತಿಳಿದುಕೊಳ್ಳಲು ಮುಂದಾಗಿದ್ದು, ಜಿಲೆಟಿನ್ ರಾಡ್ ಮತ್ತು ಡಿಟೋನೇಟರ್ ನಿಂದಾಗಿ ಸ್ಫೋಟ ಸಂಭವಿಸಿದೆ ಎಂದು ವಿಧಿವಿಜ್ಞಾನ ತಜ್ಞರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಗಸ್ಟ್‍ನಲ್ಲಿಯೂ ಇದೇ ರೀತಿ ಭನ್ವರ್ ಲಾಲ್ ಅವರ ಕೊಳವೆ ಬಾವಿಯಲ್ಲಿ ಸ್ಫೋಟ ಸಂಭವಿಸಿತ್ತು. ಆದರೆ ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಹಿನ್ನೆಲೆ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಸಾವಿಗೆ ಗ್ರಾಮದವರೆ ಕಾರಣ ಎಂದು ತಿಳಿದುಕೊಂಡಿದ್ದಾರೆ.

ಗ್ರಾಮದಿಂದ ಕಾಣೆಯಾದ ಕುಟುಂಬವನ್ನು ಪೊಲೀಸರು ಕಂಡುಹಿಡಿಯಲು ಪ್ರಾರಂಭಿಸಿದ್ದಾರೆ. ಜ.7 ರಂದು ಮಂಡ್‌ಸೌರ್‌ನಲ್ಲಿ ಪೊಲೀಸರಿಗೆ ಆರೋಪಿ ಮತ್ತು ಅವರ ಕುಟುಂಬ ಸದಸ್ಯರು ಸಿಕ್ಕಿದ್ದು, ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಆರೋಪಿ, ಕಳೆದ ವರ್ಷ ಜುಲೈನಲ್ಲಿ ಲಾಲ್ ಸಿಂಗ್, ಭವರ್‍ಲಾಲ್ ಮತ್ತು ದಿನೇಶ್ ಅವರು ನಮ್ಮ ಮನೆಗೆ ನುಗ್ಗಿ ನನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅದನ್ನು ನಾನು ತಡೆಯಲು ಪ್ರಯತ್ನಿಸಿದಾಗ ನನ್ನ ಮೇಲೆಯೂ ಹಲ್ಲೆ ಮಾಡಿದರು. ನಂತರ, ಅವರು ಈ ವಿಚಾರ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಪರಿಣಾಮ ನಾನು ಪೊಲೀಸರಿಗೆ ವಿಷಯವನ್ನು ತಿಳಿಸಲಿಲ್ಲ. ಆದರೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ.

ಆರೋಪಿಯ ದೂರಿನ ಮೇರೆಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಮಸ್ಥರಾದ ಭನ್ವರ್ ಲಾಲ್ ಮತ್ತು ದಿನೇಶ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

Meghalaya: Gelatin sticks, detonators seized from Ri-Bhoi, 1 held - India  News

ಈ ಕುರಿತು ಮಾತನಾಡಿದ ಎಸ್‍ಪಿ ತಿವಾರಿ, ಆರೋಪಿಗಳು ಬಾಂಬ್ ಅನ್ನು ಹೇಗೆ ಜೋಡಿಸುವುದು ಎಂದು ಇಂಟರ್ನೆಟ್‍ನಿಂದ ಕಲಿತುಕೊಂಡಿದ್ದಾರೆ. ಅವರು ಮೊದಲು ಭನ್ವರ್‍ಲಾಲ್ ಅವರ ಕೊಳವೆ ಬಾವಿಯ ಮೇಲೆ ಬಾಂಬ್ ಅನ್ನು ಪ್ರಯೋಗಿಸಿದ್ದಾರೆ. ಆದರೆ ಆತನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಬಳಿಕ ಹೆಚ್ಚು ಜಿಲೆಟಿನ್ ರಾಡ್ ಹಾಕಿ ಬಾಂಬ್ ತಯಾರಿಸಿ ಲಾಲ್ ಸಿಂಗ್ ಕೊಳವೆ ಬಾವಿಯ ಬಳಿ ಇಟ್ಟಿದ್ದಾರೆ. ಪರಿಣಾಮ ಸ್ಥಳಕ್ಕೆ ಬಂದ ಲಾಲ್ ಸಿಂಗ್ ದೇಹ ಅಲ್ಲೇ ಛಿದ್ರವಾಗಿದೆ ಎಂದು ತಿಳಿಸಿದ್ದಾರೆ.

ಈ ಅಪರಾಧದಲ್ಲಿ ಸಂತ್ರಸ್ತೆಯ ಪಾತ್ರದ ಬಗ್ಗೆಯೂ ಶಂಕೆಯಿದೆ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *