ಮೋದಿ ಭದ್ರತೆಗೆ 2,000 ಪೊಲೀಸರ ನಿಯೋಜನೆ – ಐವರು ಎಸ್‌ಪಿಗಳು ಸ್ಥಳದಲ್ಲೇ ಮೊಕ್ಕಾಂ

Public TV
1 Min Read

ಧಾರವಾಡ: ರಾಜ್ಯದ ಮೊದಲ ಐಐಟಿ ಕೇಂದ್ರ ಉದ್ಘಾಟನೆಗಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಧಾರವಾಡಕ್ಕೆ (Dharwad) ಆಗಮಿಸಲಿದ್ದು, ಅವರ ಭದ್ರತೆಗಾಗಿ ಪೊಲೀಸ್ (Police) ಸರ್ಪಗಾವಲು ಹೆಣೆಯಲಾಗಿದೆ.

ಐವರು ಎಸ್‌ಪಿಗಳನ್ನೊಳಗೊಂಡು ಒಟ್ಟು 2 ಸಾವಿರ ಪೊಲೀಸರನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಧಾರವಾಡ ಹೊರವಲಯದ ಚಿಕ್ಕಮಲ್ಲಿಗವಾಡ ಬಳಿ ಐಐಟಿ ನೂತನ ಕ್ಯಾಂಪಸ್ ನಿರ್ಮಾಣವಾಗಿದ್ದು, ನಾಳೆ ಇದನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ವೇಳೆ 5 ಎಸ್‌ಪಿ, 8 ಜನ ಅಡಿಷನಲ್ ಎಸ್‌ಪಿ, 28 ಡಿವೈಎಸ್‌ಪಿ, 63 ಸಿಪಿಐಗಳು, 125 ಪಿಎಸ್ಐಗಳು, 158 ಎಎಸ್‌ಐಗಳು, 1,484 ಕಾನ್ಸ್‌ಟೇಬಲ್‌ಗಳು, 10 ಡಿಆರ್ ತುಕಡಿಗಳು, 15 ಕೆಎಸ್‌ಆರ್‌ಪಿ ತುಕಡಿಗಳನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

ಮೋದಿ ಅವರ ಈ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಐಐಟಿ ಕಟ್ಟಡದ ಮುಂಭಾಗದಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 4 ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, 200ಕ್ಕೂ ಹೆಚ್ಚು ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ಕ್ಯಾಂಪಸ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಅದಕ್ಕಾಗಿ ಐಐಟಿ ಕ್ಯಾಂಪಸ್‌ ಒಳಗಡೆಯೇ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಯಾರಿಗೋ ಹುಟ್ಟಿದ ಮಗುವನ್ನು ಜೆಡಿಎಸ್-ಕಾಂಗ್ರೆಸ್‍ನವರು ತಮ್ಮದೆನ್ನುತ್ತಾರೆ: ಈಶ್ವರಪ್ಪ ವಾಗ್ದಾಳಿ

Share This Article
Leave a Comment

Leave a Reply

Your email address will not be published. Required fields are marked *