ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್‌ ಹೊಡೆದ 2 ಪಾಕ್‌ ತೈಲ ಟ್ಯಾಂಕರ್‌ಗಳು

1 Min Read

ಟೆಹ್ರಾನ್‌: ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ಬೆನ್ನಲ್ಲೇ ಬೆನ್ನಲ್ಲೇ ಪಾಕಿಸ್ತಾನ (Pakistan) ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯ ದಾಟದೇ ಯೂಟರ್ನ್‌ ಹೊಡೆದಿದೆ.

ತೈಲ ಟ್ಯಾಂಕರ್‌ಗಳಾದ ಖೈರ್‌ಪುರ್ (Khairpur) ಮತ್ತು ಶಲಾಮರ್ (Shalamar) ರಂದು ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ತಮ್ಮ ದಾರಿಯನ್ನು ಬದಲಾಯಿಸಿದೆ ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಾರ್ಮುಜ್ ಜಲಸಂಧಿಯ ಬಳಿ ಯು-ಟರ್ನ್ ತೆಗೆದುಕೊಂಡಿದ್ದ ಖೈರ್‌ಪುರ್ ಹಡಗು, ನಂತರ ಎರಡನೇ ಬಾರಿ ಹಾದಿ ಬದಲಿಸಿ ಪರ್ಷಿಯನ್ ಗಲ್ಫ್‌ನತ್ತ ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ವರದಿಯಾಗಿದೆ. ಇದು ಕುವೈತ್‌ನ ಮಿನಾ ಅಬ್ದುಲ್ಲಾ (Mina Abdullah) ಬಂದರಿನತ್ತ ಸಾಗುತ್ತಿತ್ತು. ಇದನ್ನೂ ಓದಿ: ಪಾಕ್‌ ಜನತೆಗೆ ಮತ್ತೊಂದು ಶಾಕ್‌ – ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಯುಎಇಯ ದಾಸ್ ದ್ವೀಪದತ್ತ (Das Island) ಹೊರಟಿದ್ದ ಶಲಾಮರ್ ಹಡಗು ಯೂಟರ್ನ್‌ ತೆಗೆದುಕೊಂಡಿದ್ದು ಇದು ಸದ್ಯಕ್ಕೆ ಕಾಯುವ ಸ್ಥಿತಿಯಲ್ಲಿದ್ದು ತನ್ನ ಮುಂದಿನ ಪ್ರಯಾಣದ ಬಗ್ಗೆ ನಿರ್ಧರಿಸಬೇಕಿದೆ.  ಇದನ್ನೂ ಓದಿ: ಇರಾನ್‌ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್‌ ವಾರ್ನಿಂಗ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯ ಮೇಲೆ ತಕ್ಷಣದ ನೌಕಾ ದಿಗ್ಬಂಧನ (Blockade) ಹೇರುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಈ ಹಡಗುಗಳು ಹಾದಿಯನ್ನು ಬದಲಿಸಿವೆ.  ಇದನ್ನೂ ಓದಿ: Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್‌ ಆಯ್ಕೆ ಮಾಡಿದ್ದು ಯಾಕೆ?
ಇರಾನ್ ತನ್ನ ಪರಮಾಣು ನೀತಿಯಲ್ಲಿ ಪಟ್ಟು ಸಡಿಲಿಸದ ಕಾರಣ ಮಾತುಕತೆ ಮುರಿದುಬಿದ್ದಿದೆ. ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ಹೊರಬರುವ ಯಾವುದೇ ಹಡಗುಗಳನ್ನು ತಡೆಯಲು ಮತ್ತು ಇರಾನ್‌ಗೆ ಸುಂಕ ಪಾವತಿಸುವ ಹಡಗುಗಳನ್ನು ವಶಪಡಿಸಿಕೊಳ್ಳಲು ಅಮೆರಿಕ ನೌಕಾಪಡೆಗೆ ಟ್ರಂಪ್‌ ಸೂಚನೆ ನೀಡಿದ್ದಾರೆ.
Share This Article