ಕಪಿಲ್, ಸುನಿಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರಿಂದ ಪಾಕ್‌ಗೆ ಪತ್ರ – ಇಮ್ರಾನ್‌ಗೆ ವೈದ್ಯಕೀಯ ಸೇವೆ ನೀಡುವಂತೆ ಮನವಿ

1 Min Read

ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಿರುವ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ (Imran Khan) ಸಂಬಂಧ ಪಾಕ್ ಸರ್ಕಾರಕ್ಕೆ ಕಪಿಲ್‌ದೇವ್, ಸುನೀಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರು ಮನವಿ ಮಾಡಿದ್ದಾರೆ.

1992ರ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರನ್ನು ನ್ಯಾಯಯುತ ಮತ್ತು ಮಾನವೀಯವಾಗಿ ನಡೆಸಿಕೊಳ್ಳಬೇಕು. ಖಾನ್ ಅವರ ಕ್ಷೀಣಿಸುತ್ತಿರುವ ಆರೋಗ್ಯ ಮತ್ತು ಕಾನೂನು ಸ್ಥಿತಿಯ ಬಗ್ಗೆ ಆತಂಕಕಾರಿ ವರದಿಗಳ ನಡುವೆ ಆಸ್ಟ್ರೇಲಿಯಾದ ದಿಗ್ಗಜ ಗ್ರೆಗ್ ಚಾಪೆಲ್ ಸಹ-ಸಹಿ ಮಾಡಿರುವ ಮನವಿ ಇದಾಗಿದೆ. ಇದನ್ನೂ ಓದಿ: ಭಾರತದಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ – ಪಾಕ್‌ ಆಟಗಾರರ ಕಥೆ ಏನು?

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಉದ್ದೇಶಿಸಿ ಬರೆದಿರುವ ಈ ಪತ್ರದಲ್ಲಿ ನಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಮಾಜಿ ನಾಯಕರಾದ ನಾವು, ಪಾಕಿಸ್ತಾನದ ಗೌರವಾನ್ವಿತ ಮಾಜಿ ನಾಯಕ ಮತ್ತು ವಿಶ್ವ ಕ್ರಿಕೆಟ್‌ನ ದಂತಕಥೆಯಾಗಿರುವ ಇಮ್ರಾನ್ ಖಾನ್ ಅವರ ಚಿಕಿತ್ಸೆ ಮತ್ತು ಜೈಲುವಾಸದ ಪರಿಸ್ಥಿತಿಗಳ ಬಗ್ಗೆ ವರದಿಯಿಂದಾಗಿ ತೀವ್ರ ಕಳವಳದಿಂದ ಬರೆಯುತ್ತಿದ್ದೇವೆ. ರಾಜಕೀಯ ಹೊಂದಾಣಿಕೆಗಿಂತ ಹೆಚ್ಚಾಗಿ ಕ್ರೀಡಾ ಮನೋಭಾವ ಮತ್ತು ಸಾಮಾನ್ಯ ಮಾನವೀಯತೆಯಿಂದ ಕೂಡಿದೆ ಎಂದು ಒತ್ತಿ ಹೇಳಿದ್ದಾರೆ.

ಇಮ್ರಾನ್ ಕಾರಾಗೃಹ ವಾಸದ ಬಗ್ಗೆ ಕ್ರಿಕೆಟಿಗರು ಆತಂಕ ವ್ಯಕ್ತಪಡಿಸಿದ್ದು, ಕ್ರಿಕೆಟ್‌ಗೆ ಇಮ್ರಾನ್ ಕೊಡುಗೆ ಅಪಾರವಾಗಿದೆ.ಇದನ್ನೂ ಓದಿ: ಟಿ-20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್‌ – ಸೂಪರ್‌-8ಕ್ಕೆ ಜಿಂಬಾಬ್ವೆ ಜಿಗಿತ

Share This Article