114 ಎಸೆತ ಹಾಕಿಯೂ ವಿಕೆಟ್‌ ಪಡೆಯದ ಬುಮ್ರಾ

1 Min Read

ಮುಂಬೈ: ವಿಶ್ವದ ಶ್ರೇಷ್ಠ ಬೌಲರ್‌, ಯಾರ್ಕರ್‌ ಎಸೆದೇ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸುವ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಈಗ ವಿಕೆಟ್‌ ಬರ ಎದುರಿಸುತ್ತಿದ್ದಾರೆ.

ಹೌದು. ಕಳೆದ 5 ಐಪಿಎಲ್‌ (IPL) ಪಂದ್ಯಗಳಲ್ಲಿ ಬುಮ್ರಾ 114 ಎಸೆತವನ್ನು ಎಸೆದಿದ್ದಾರೆ. ಇಷ್ಟು ಎಸೆತ ಹಾಕಿಯೂ ಬುಮ್ರಾ ವಿಕೆಟ್‌ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.

ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಕ್ವಾಲಿಫೈಯರ್‌ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಪಂಜಾಬ್‌ ಕಿಂಗ್ಸ್‌ (PBKS) 5 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಬುಮ್ರಾ 4 ಓವರ್‌ ಎಸೆದು 40 ರನ್‌ ನೀಡಿದ್ದರು. ಇದನ್ನೂ ಓದಿ: ಹೆಲ್ಮೆಟ್‌, ಗ್ಲೌಸ್‌ ಎಸೆದು ಕೊಹ್ಲಿ ಆಕ್ರೋಶ

 

ಈ ಬಾರಿ 4 ಪಂದ್ಯವನ್ನು ಬುಮ್ರಾ ಆಡಿದ್ದಾರೆ. ಕೋಲ್ಕತ್ತಾ (KKR) ವಿರುದ್ಧ ಮೊದಲ ಪಂದ್ಯದಲ್ಲಿ 4 ಓವರ್‌ ಎಸೆದು 35 ರನ್‌ ನೀಡಿದರೆ ಡೆಲ್ಲಿ (DC) ವಿರುದ್ಧ 4 ಓವರ್‌ ಎಸೆದು 21 ರನ್‌ ನೀಡಿದ್ದರು.

ಮಳೆಯಿಂದಾಗಿ ಪಂದ್ಯದ ಓವರ್‌ ಕಡಿತಗೊಂಡ ಪರಿಣಾಮ ರಾಜಸ್ಥಾನದ (RR) ವಿರುದ್ಧ ಬುಮ್ರಾ 3 ಓವರ್‌ ಎಸೆದು 32 ರನ್‌ ನೀಡಿದ್ದರು. ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲೂ ಬುಮ್ರಾ 4 ಓವರ್‌ ಎಸೆದು 35 ರನ್‌ ನೀಡಿದ್ದರು. ಇದನ್ನೂ ಓದಿ: ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

ಐಪಿಎಲ್‌ನಲ್ಲಿ ಬುಮ್ರಾಗೆ ಕೊನೆಯ ಬಾರಿ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ ಸಿಕ್ಕಿತ್ತು. ಈ ಪಂದ್ಯದಲ್ಲಿ ಬುಮ್ರಾ 3.2 ಓವರ್‌ ಎಸೆದು 12 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು.

2013 ರಲ್ಲಿ 10 ಲಕ್ಷ ರೂ. ನೀಡಿ ಮುಂಬೈ ತಂಡ ಬುಮ್ರಾ ಅವರನ್ನು ಖರೀದಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಬುಮ್ರಾ ಮುಂಬೈ ಪರವಾಗಿಯೇ ಆಡುತ್ತಿದ್ದಾರೆ. 2026 ರಲ್ಲಿ ಮುಂಬೈ 18 ಕೋಟಿ ರೂ. ನೀಡಿ ಬುಮ್ರಾ ಅವರನ್ನು ಮುಂಬೈ ತಂಡದಲ್ಲಿ ಉಳಿಸಿಕೊಂಡಿತ್ತು.

Share This Article