ನಮೋ ಕ್ಲಿನಿಕ್‌ಗೆ ಟಕ್ಕರ್ ಕೊಡಲು ಪಂಜಾಬ್‌ನಲ್ಲಿ `ಆಮ್ ಆದ್ಮಿ ಕ್ಲಿನಿಕ್’- ಆ.15ಕ್ಕೆ 100 ಕ್ಲಿನಿಕ್ ಓಪನ್

Public TV
1 Min Read

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸ್ಥಾಪಿತವಾದ `ನಮೋ ಕ್ಲಿನಿಕ್’ಗೆ ಟಕ್ಕರ್ ಕೊಡಲು ಪಂಜಾಬ್‌ನಲ್ಲಿ ಎಎಪಿ ಸರ್ಕಾರ `ಆಮ್ ಆದ್ಮಿ ಕ್ಲಿನಿಕ್’ ಸ್ಥಾಪಿಸಲು ಮುಂದಾಗಿದೆ.

ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿಎಂ ಭಗವಂತ್ ಮಾನ್ ನೇತೃತ್ವದ ರಾಜ್ಯ ಸರ್ಕಾರ ಪಂಜಾಬ್‌ನಲ್ಲಿ 100 `ಆಮ್ ಆದ್ಮಿ ಕ್ಲಿನಿಕ್’ಗಳನ್ನು ಸ್ಥಾಪಿಸಲು ಮುಂದಾಗಿದೆ. ಸಾರ್ವಜನಿಕರ ಯೋಗಕ್ಷೇಮಕ್ಕಾಗಿ ಈ ಹಿಂದೆ 75ಕ್ಕೆ ಸ್ಥಾಪಿಸಲು ಗುರಿ ಹೊಂದಿದ್ದ ಕ್ಲಿನಿಕ್‌ಗಳ ಗುರಿಯನ್ನು 100ಕ್ಕೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಾಮಜ್ರಾ ಇಂದು ಹೇಳಿದ್ದಾರೆ. ಇದನ್ನೂ ಓದಿ: ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

ಸಾಮಾನ್ಯ ಜನರಿಗೂ ಉನ್ನತ ದರ್ಜೆಯ ಆರೋಗ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧತೆಯ ಈಡೇರಿಕೆಗೆ ಆಮ್ ಆದ್ಮಿ ಸರ್ಕಾರದ ಮೊದಲ ಆರೋಗ್ಯ ಹೆಜ್ಜೆ ಇರಿಸಿದೆ. ಈ ಸಂಬಂಧ ಆರೋಗ್ಯ ಉಪಕರಣಗಳು ಹಾಗೂ ಮೂಲ ಸೌಕರ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ – ಅಧಿಕೃತ ಆದೇಶ

MEDICAL
ಸಾಂದರ್ಭಿಕ ಚಿತ್ರ

ಆಮ್ ಆದ್ಮಿ ಕ್ಲಿನಿಕ್ ಪ್ರಯೋಜನವೇನಿದೆ?:

  •  ಈ ಚಿಕಿತ್ಸಾಲಯಗಳ ಸ್ಥಾಪನೆಯಿಂದ ಕೆಳ ಹಾಗೂ ಮಧ್ಯಮ ವರ್ಗದ ಜನರ ಮನೆ ಬಾಗಿಲಿಗೆ ಆರೋಗ್ಯ ಪ್ರಯೋಜನ.
  • ಆರೋಗ್ಯ ಕೇಂದ್ರಗಳಲ್ಲಿ ಅನಗತ್ಯ ಜನಸಂದಣಿಗೆ ಕಡಿವಾಣ.
  • ಒಂದು ಕ್ಲಿನಿಕ್‌ನಲ್ಲಿ ಒಬ್ಬರು ಎಂಬಿಬಿಎಸ್ ವೈದ್ಯರು ಸೇರಿದಂತೆ 5 ಸಿಬ್ಬಂದಿ ನೇಮಕ.
  • ರಾಜ್ಯದ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವ ಗುರಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *