ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ ಬೇಕಾದ ಎಲ್ಲಾ ಸಹಕಾರ ಸಿಗುತ್ತದೆ: ಅಶ್ವತ್ ನಾರಾಯಣ್

Public TV
1 Min Read

ಕೋಲಾರ: ಕೊರೊನಾ ನಿವಾರಣೆ ಮಾಡುವ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಔಷಧವನ್ನ ಕೋಲಾರ ಜಿಲ್ಲೆಗೆ ನೀಡಲು ಸರ್ಕಾರ ಬದ್ದ ಎಂದು ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಲು ನಗರದ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ನಿವಾರಣೆ ಮಾಡುವ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಔಷಧವನ್ನ ಕೋಲಾರ ಜಿಲ್ಲೆಗೆ ನೀಡಲು ಸರ್ಕಾರ ಬದ್ದವಾಗಿದೆ. ಮುಳಬಾಗಿಲು ನಗರದಲ್ಲಿರುವ ಹಳೇ ಕೋರ್ಟ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾವಣೆ ಮಾಡಲಾಗಿತ್ತು. ಅದರಂತೆ ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಕೋವಿಡ್ ಆಸ್ಪತ್ರೆಯನ್ನ ಸುಧಾರಣೆ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ಬಿಎಸ್‍ವೈಗೆ ಹೈಕಮಾಂಡ್ ಬಿಗ್ ರಿಲೀಫ್ – ಸಕ್ರಿಯರಲ್ಲದ ಸಚಿವರಿಗೆ ಕೊಕ್ ಸಾಧ್ಯತೆ

80 ಲಕ್ಷ ಸೇರಿದಂತೆ ದಾನಿಗಳ ನೆರವು ಪಡೆದು ಸುಸ್ಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲಾಗಿದೆ, ಇದು ಮುಳಬಾಗಲು ನಗರಕ್ಕೆ ಅವಶ್ಯಕವಾಗಿತ್ತು. ಹಾಗಾಗಿ ಮೂರನೆ ಅಲೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ಹಾಗೂ ಸಲಕರಣಿಗಳನ್ನ ನೀಡಲಾಗಿದ್ದು, ಮತ್ತಷ್ಟು ನೆರವು ನೀಡಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದರು. ಮುಂದಿನ ಸಿಎಂ ಅಭ್ಯರ್ಥಿ ನೀವು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಸದ್ಯಕ್ಕೆ ಡಿಸಿಎಂ ಆಗಿದ್ದೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳೆಲ್ಲಾ ಮಾಯವಾಗಿದ್ದವು. ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ವೇಳೆ ಕೋವಿಡ್ ನಿಯಮ ಪಾಲನೆ ಮರೆತು ಸಚಿವರು, ಡಿಸಿಎಂ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಜನರು ಸಾಮಾಜಿಕ ಅಂತರ ಮರೆತು ಜಮಾಯಿಸಿದ್ದರು. ಬಿಜೆಪಿ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸುತ್ತಿದ್ದಂತೆ ಜನರನ್ನ ಹೊರ ಕಳಹಿಸಿದ ಸನ್ನಿವೇಶ ನಡೆಯಿತು. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಜನರನ್ನ ವಾಪಸ್ ಕಳಹಿಸಿದ ಸನ್ನಿವೇಶ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *