Connect with us

ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವುದು ತಿಳಿದ ವಿಚಾರ. ಇದೀಗ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಮುದ್ದು ಮಗುವನ್ನು ತೋರಿಸಿದ್ದು, ‘ದೇವ್ಯಾನ್’ ಎಂದು ಪರಿಚಯಿಸಿದ್ದಾರೆ. ಅಲ್ಲದೆ ಕನಸಿನಂತೆ ಭಾಸವಾಗುತ್ತಿದೆ, ಬ್ಯೂಟಿಫುಲ್ ಗಿಫ್ಟ್ ಎಂದು ಹೇಳಿಕೊಂಡಿದ್ದಾರೆ.

 

View this post on Instagram

 

A post shared by shreyaghoshal (@shreyaghoshal)

ಪತಿ ಶಿಲಾದಿತ್ಯ ಹಾಗೂ ತಾವು ಮಗುವನ್ನು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಮಗುವಿನ ಮುಖವನ್ನು ಮಾತ್ರ ತೋರಿಸಲಾಗಿಲ್ಲ. ಈ ಕುರಿತು ಭಾವನಾತ್ಮಕ ಸಾಲುಗಳನ್ನು ಬರೆದಿರುವ ಶ್ರೇಯಾ, ‘ದೇವ್ಯಾನ್ ಮುಖ್ಯೋಪಾಧ್ಯಾಯ’ನನ್ನು ಪರಿಚಯಿಸುತ್ತಿದ್ದೇನೆ. ಇವನು ಮೇ 22ರಂದು ಜನಿಸಿದ್ದು, ನಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೀಮಂತ ಫೋಟೋ ಹಂಚಿಕೊಂಡ ಶ್ರೇಯಾ ಘೋಷಾಲ್

ಅವನು ಹುಟ್ಟಿದ ತಕ್ಷಣ ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿದ. ತಂದೆ, ತಾಯಿ ಮಾತ್ರ ಇದನ್ನು ಅನುಭವಿಸಲು ಸಾಧ್ಯ. ಶುದ್ಧ, ನಿಯಂತ್ರಿಸಲಾಗದ ಅಗಾಧ ಪ್ರೀತಿ, ಇನ್ನೂ ನಮಗೆ ಕನಸಿನಂತೆ ಭಾಸವಾಗುತ್ತಿದೆ. ಈ ಸುಂದರವಾದ ಜೀವನದ ಉಡುಗೊರೆಗೆ ನಾನು ಹಾಗೂ ಶಿಲಾದಿತ್ಯ ಕೃತಜ್ಞರಾಗಿದ್ದೇವೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮೇ 22ರಂದು ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ಸಹ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ಇಂತಹ ಭಾವನೆಯನ್ನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಕುಟುಂಬಸ್ಥರೂ ಸೇರಿದಂತೆ ಶೀಲಾದಿತ್ಯ ಹಾಗೂ ನಾನು ತುಂಬಾ ಸಂತೋಷಗೊಂಡಿದ್ದೇವೆ. ಬೆಲೆ ಕಟ್ಟಲಾಗದ ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಶ್ರೇಯಾ ಘೋಷಾಲ್ ಬರೆದುಕೊಂಡಿದ್ದರು. ಮಾರ್ಚ್ 4ರಂದು ಶ್ರೇಯಾ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು.

Advertisement
Advertisement