ಮಾಸ್ಕ್ ಬದಲಿಸಿಕೊಂಡು ಮದುವೆಯಾದ ಜೋಡಿ

Public TV
1 Min Read

ಧಾರವಾಡ: ಮಾತು ಬಾರದ, ಕಿವಿ ಕೇಳದ ವಿಶೇಷ ಜೋಡಿ ಮದುವೆಯಲ್ಲಿ ಮಾಸ್ಕ್ ಬದಲಿಸಿಕೊಂಡು ದಾಂಪತ್ಯಜೀನಕ್ಕೆ ಕಾಲಿಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸತ್ತೂರಿನ ಕುಮಾರ, ಧಾರವಾಡದ ಸಾರಸ್ವತಪುರದ ಶ್ವೇತಾ ವಿಶೇಷ ಚೇತನರಾಗಿದ್ದಾರೆ. ವಧುಗೆ ವರ ಮಾಸ್ಕ್ ಹಾಕುವುದು, ವರನಿಗೆ ವಧು ಮಾಸ್ಕ್ ಹಾಕುವ ಮೂಲಕ ಹಾರ ಬದಲಾಯಿಸಿದಂತೆ ಮಾಸ್ಕ್ ಬದಲಾಯಿಸಿ, ಬಳಿಕ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಎರಡೂ ಮನೆ ಕಡೆಯವರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹ ಸಮಾರಂಭ ನಡೆದಿದೆ. ಇದನ್ನೂ ಓದಿ:  ನಿಂಬೇಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಇಂದು ಪೊಲೀಸ್

ವಿದ್ಯಾಕಾಶಿ ಧಾರವಾಡದಲ್ಲಿ ಲಾಕ್‍ಡೌನ್ ಬಳಿಕ ಜಿಲ್ಲಾಡಳಿತ ಅನುಮತಿ ಪಡೆದು ನಡೆದ ಮೊದಲ ವಿವಾಹ ಇದಾಗಿದೆ. ಈ ಮದುವೆಯ ವಿಶೇಷ ಏನು ಅಂದ್ರೆ, ಸತಿ-ಪತಿಗಳಾದ ಈ ನವ ಜೋಡಿಗೆ ಮಾತು ಬಾರದು, ಕಿವಿಯೂ ಕೇಳದು. ಇದನ್ನೂ ಓದಿ:  ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ

ಸತ್ತೂರಿನ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರುವುದಿಲ್ಲ. ಮನೆಯಲ್ಲಿ ಈತನೇ ಹಿರಿ ಮಗ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕುಮಾರನಿಗೆ ಇವನಂತೆಯೇ ಇರುವ ಹುಡುಗಿಯನ್ನು ಹುಡುಕುತ್ತಾ ಇದ್ದರು. ಸಾರಸ್ವತಪುರದ ಶ್ವೇತಾಳನ್ನು ನೋಡಿಯೂ ಬಂದಿದ್ದರು. ಆಗ ಕುಮಾರ ಕೂಡಾ ಇಷ್ಟಪಟ್ಟಿದ್ದನು. ಶ್ವೇತಾ ಮನೆಯಲ್ಲೇ ಇದ್ದು, ಕಸೂತಿ ಕಲೆಯ ಕೆಲಸ ಮಾಡಬಲ್ಲವಳಾಗಿದ್ದು, ಕಿವಿ ಕೇಳದ ಮತ್ತು ಮಾತು ಬಾರದವರ ಸಂವೇದನೆಯ ಭಾಷೆಯನ್ನೂ ಬಲ್ಲವಳಾಗಿದ್ದಾಳೆ. ಇದನ್ನೂ ಓದಿ:  1 ಲಕ್ಷ ಮೌಲ್ಯದ ನಾಲ್ಕು ನಾಯಿಗಳ ಕಳ್ಳತನ – ವಾಟ್ಸಪ್‍ನಿಂದ ಶ್ವಾನ ಕಳ್ಳರು ಅರೆಸ್ಟ್

 

ಗುರುಹಿರಿಯರೆಲ್ಲ ಒಂದು ತಿಂಗಳ ಹಿಂದೆಯೇ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಇವತ್ತಿನಿಂದ ಅನುಮತಿ ಸಿಗುತ್ತಿದ್ದಂತೆಯೇ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಿದರು. ಮದವೆಯಲ್ಲಿ ಮಾಸ್ಕ್ ಬದಲಾಯಿಸಿಕೊಂಡಿರುವುದು ವಿಶೇಷವಾಗಿದೆ. ಈ ವಿಶೇಷ ಚೇತನರ ವಿವಾಹಕ್ಕೆ ಧಾರವಾಡದ ಸತ್ತೂರ ಗ್ರಾಮದ ಕೇರಿ ಓಣಿ ಸಾಕ್ಷಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *