Connect with us

Latest

ನಿಂಬೆಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಇಂದು ಪೊಲೀಸ್

Published

on

Share this

ತಿರುವನಂತಪುರಂ: ನಿಂಬೆಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಈಗ ಕೇರಳದಲ್ಲಿ ಪೊಲೀಸ್ ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ರಾಜೀನಾಮೆ ನೀಡುವ ನಿರ್ಧಾರ ಬದಲಿಸಬೇಕು: ಸಚಿವ ಹೆಬ್ಬಾರ್

ಆನ್ಯಿ ಶಿವಾಳ ಅವರಿಗೆ ತುಂಬಾ ಚಿಕ್ಕ ವಯಸ್ಸಿನವರಿದ್ದಾಗಲೇ ಮದುವೆಯಾಗಿತ್ತು. 18 ವರ್ಷದವಳಾಗಿದ್ದಾಗ ಅವಳ ಕೈಗೊಂದು ಕೂಸನ್ನು ದಯಪಾಲಿಸಿ, ಗಂಡನಾದವನು ಅವಳನ್ನು ನಡುಬೀದಿಯಲ್ಲಿ ಬಿಟ್ಟುಹೋಗಿದ್ದನು. ತನ್ನ ಗಂಡನಿಂದ ದೂರವಾಗಿ ತಮ್ಮ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ಆಗ ಜೀವನ ನಿರ್ವಹಣೆಗಾಗಿ ನಿಂಬೆಹಣ್ಣಿನ ಜ್ಯಸ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇದೇ ಮಹಿಳೆ 31 ವರ್ಷಕ್ಕೆ ತನ್ನ ಕನಸ್ಸನ್ನು ನನಸು ಮಾಡಿಕೊಂಡಿದ್ದಾಳೆ. ಈಗ ಕೇರಳದ ವೆರಕಾಲ್ ಪೊಲೀಸ್ ಠಾಣೆಯಲ್ಲಿ ಎಸ್‍ಐ ಆಗಿದ್ದಾರೆ.

12 ವರ್ಷಗಳ ಹಿಂದೆ ಅಂದು ವಾರ್ಕಳ ಶಿವಗಿರಿ ಆಶ್ರಮದಲ್ಲಿ ನಿಂಬೆಹಣ್ಣಿನ ಜ್ಯೂಸ್, ಐಸ್‍ಕ್ರೀಮ್, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದ ಆನ್ಯಿ ಅವರಿಗೆ ಒಬ್ಬರು ದಾರಿ ತೋರಿದ್ದರು. ಆಕೆಗೆ ಒಂದಷ್ಟು ಹಣ ನೀಡುತ್ತಾ ಪೊಲೀಸ್ ಇಲಾಖೆ ಮತ್ತು ಸಾಯಹಕ ಹೆಂಗಸೊಬ್ಬರು ಸಹಾಯ ಮಾಡಿದ್ದರು. ಆನ್ಯಿ ನೀನು ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಪರೀಕ್ಷೆ ಬರೆಯಬೇಕಮ್ಮಾ, ನಿನ್ನ ಜೀವನವನ್ನು ದಿಟ್ಟವಾಗಿ ಎದುರಿಸಬೇಕು ಎಂದರೆ ನೀನೊಬ್ಬ ಪೊಲೀಸ್ ಅಧಿಕಾರಿ ಆಗಬೇಕಮ್ಮಾ ಅಂದಿದ್ದರು. ಅಂದಿನಿಂದ ಆ್ಯನಿ ಹಿಂದಿರುಗಿ ನೋಡಲಿಲ್ಲ. ಏಕೆಂದ್ರೆ ಎದುರಿಗೆ ಗುರಿ-ಗುರು ಸ್ಪಷ್ಟವಾಗಿ ಕಾಣುತ್ತಿತ್ತು.

ನಂತರ 2016ರಲ್ಲಿ ಸಬ್ ಇನ್ಸ್​​ಪೆಕ್ಟರ್ ಎಕ್ಸಾಂ ಬರೆದಿದ್ದದ್ದಾರೆ. ಲೋನ್ ಮಾಡಿಕೊಂಡು ಎಕ್ಸಾಂಗೆ ಬೇಕಾಗುವ ಎಲ್ಲಾ ತಯಾರಿಯನ್ನು ಮಾಡಿಕೊಂಡು ಎಕ್ಸಾಂ ಬರೆದಿದ್ದಾರೆ. ನಂತರ ಒಂದೂವರೆ ವರ್ಷದ ನಂತರ ಟ್ರೈನಿಂಗ್ ಮುಗಿಸಿ ಕೇರಳದ ವೆರಕಾಲ್‍ದಲ್ಲಿ ಎಸ್‍ಐ ಆಗಿ ಸೇವೆಸಲ್ಲಿಸುತ್ತಿದ್ದಾರೆ.

ಮಗನನ್ನು ಮಡಿಲಲ್ಲಿ ಹಿಡಿದು, ಕಾಣದ ಗುರಿಯತ್ತ ಹೆಜ್ಜೆಹಾಕುತ್ತಾ 12 ವರ್ಷ ಸಾಗಿ ಬಂದ ಆನ್ಯಿ ಶಿವಾಳ ಸಾಧನೆ ಇತತರಿಗೆ ಪ್ರೇರಣಾದಾಯಕ. ಪುರುಷ ಪ್ರಧಾನ ಈ ಸಾಮ್ರಾಜ್ಯದಲ್ಲಿ ಶಿವಾಳ ಸಾಧನೆ ಅಮೋಘ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement