ಪೊಲೀಸರ ಸೋಗಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

Public TV
1 Min Read

– ಚಾಕು ತೆಗೆದು ಬೆದರಿಕೆ

ಮುಂಬೈ: ಪೊಲೀಸರ ಸೋಗಿನಲ್ಲಿ ಟ್ರಕ್ ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ 43 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ.

ದಿಲೀಪ್ ಕುಮಾರ್ ಮತ್ತು ವಿಜಯ್ ಚೌಹಾನ್ ಟ್ರಕ್‍ನಲ್ಲಿ ಕಬ್ಬಿಣದ ಸರಳುಗಳನ್ನು ವಡಕ್ಕಲಾ ಹಳ್ಳಿಯಿಂದ ರಾಯ್‍ಘರ್‍ನ ಸೆವ್ರಿ ಪ್ರದೇಶಕ್ಕೆ ಸಾಗಿಸುತ್ತಿದ್ದರು. ಆಗ ಇಬ್ಬರು ದುಷ್ಕರ್ಮಿಗಳು ಹಣ ನೀಡುವಂತೆ ಇವರಿಗೆ ಬೆದರಿಕೆ ಹಾಕಿದ್ದಾರೆ. ಟ್ರಕ್ ಚಾಲಕರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ವಡಾಲಾದಲ್ಲಿ ಶಾಂತಿ ನಗರ ಸಿಗ್ನಲ್ ಸಮೀಪಿಸುತ್ತಿದ್ದಾಗ ಮೋಟಾರ್ ಸೈಕಲ್‍ನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಟ್ರಕ್ ತಡೆದು ನಿಲ್ಲಿಸುವಂತೆ ಸೂಚಿಸಿದರು. ನಾನು ಭಯಭೀತರಾಗಿ ಟ್ರಕ್ ಅನ್ನು ನಿಧಾನಗೊಳಿಸಿದೆವು. ಆಗ ಪೊಲೀಸ್ ಎಂದು ಹೇಳಿಕೊಂಡು ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎಂದು ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇಬ್ಬರು ವಾಹನದಿಂದ ಇಳಿಯುವಾಗ ಪೊಲೀಸರು ಎಂದು ಹೇಳಿಕೊಂಡ ಆರೋಪಿಗಳು ಟ್ರಕ್ ಚಾಲಕನನ್ನು ಬೆದರಿಸಿದ್ದಾರೆ. ನಂತರ ಆರೋಪಿ ಚಾಕುವನ್ನು ತೆಗೆದುಕೊಂಡು ಚುಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿಗಳಿಬ್ಬರೂ ಟ್ರಕ್ ಚಾಲಕರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ವಡಾಲಾ ಪೊಲೀಸರು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ವ್ಯಾನ್ ಘಟನೆ ನಡೆಯುವ ಸ್ಥಳದಲ್ಲಿ ಹಾದು ಹೋಗುವ ಸಮಯದಲ್ಲಿ ಇಬ್ಬರು ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದರು. ಆದರೆ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿ ಪೊಲೀಸರ ಠಾಣೆಗೆ ಕರೆದೊಯ್ದಿದಿದ್ದಾರೆ.

ಪೊಲೀಸರು ವಶದಲ್ಲಿರುವ ಆರೋಪಿಯನ್ನು ಮೊಹಮ್ಮದ್ ನಿಜಾಮ್ ಶೇಖ್ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿಗೆ ಹುಡುಕಾಟ ನಡೆಯುತ್ತಿದೆ. ಟ್ರಕ್ ಚಾಲಕನಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *