ಧಾರವಾಡ: ಪಿ.ಎಫ್.ಐ ಒಂದು ದೇಶದ್ರೋಹಿ ಸಂಘಟನೆಯಾಗಿದ್ದು, ಅವರ ಬಗ್ಗೆ ಹೆಚ್ಚು ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ತೀರ್ಮಾನ ಆದ ನಂತರ ರಾಮ ಮಂದಿರ ಟ್ರಸ್ಟ್‍ನ್ನು ರಚಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇಡೀ ದೇಶಕ್ಕೆ ಸೇರಿದ ಮಂದಿರ ಅದು, ಶ್ರೀರಾಮ ಎಲ್ಲರಿಗೂ ಸೇರಿದವನು. ಜಾತಿ ಮತ ಪಂಥ ಎಲ್ಲ ಮಿರಿ ಮರ್ಯಾದಾ ಪುರುಷೋತ್ತಮ ಎನಿಸಿಕೊಂಡವನು ಶ್ರೀ ರಾಮ. ಪಿ.ಎಫ್.ಐ ಅಂಥವರ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನು ಓದಿ .ರಾಮಮಂದಿರ ನಿರ್ಮಾಣಕ್ಕೆ 1 ಪೈಸೆ ಕೊಡಬೇಡಿ – ಮುಸ್ಲಿಮರಿಗೆ ಪಿಎಫ್‍ಐ ಕರೆ
ಬೇರೆ ಬೇರೆ ದೇಶದಲ್ಲಿ ನೂರರಷ್ಟು ಇಸ್ಲಾಮೇ ಇದೆ, ಅಲ್ಲಿ ಕೂಡಾ ಅವರು ಶಾಂತವಾಗಿಲ್ಲ. ಭಾರತದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಶಾಂತತೆಯಿಂದ ಬಾಳುತಿದ್ದೇವೆ. ಭಾರತದ ಮಣ್ಣಿನಲ್ಲಿ, ಭಾರತದ ರಕ್ತದಲ್ಲಿ ಧರ್ಮ ಐಕ್ಯತೆ ಇದೆ. ಆರ್.ಎಸ್.ಎಸ್ ಬಗ್ಗೆ ಪಿ.ಎಫ್.ಐ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.