Dakshina Kannada
ರಾಮಮಂದಿರ ನಿರ್ಮಾಣಕ್ಕೆ 1 ಪೈಸೆ ಕೊಡಬೇಡಿ – ಮುಸ್ಲಿಮರಿಗೆ ಪಿಎಫ್ಐ ಕರೆ

– ರಾಮಮಂದಿರ ಅಲ್ಲ ಅದು ಆರ್ಎಸ್ಎಸ್ ಮಂದಿರ
– ಆರ್ಎಸ್ಎಸ್ ಕ್ಯಾನ್ಸರ್ ಇದ್ದ ಹಾಗೆ ಅದು ವಾಸಿ ಆಗಲ್ಲ
ಮಂಗಳೂರು: ರಾಮಮಂದಿರ ನಿರ್ಮಾಣಕ್ಕೆ 1 ಪೈಸ್ ಕೊಡಬೇಡಿ. ಅದು ರಾಮಮಂದಿರ ಅಲ್ಲ ಆರ್ಎಸ್ಎಸ್ ಮಂದಿರ ಎಂದು ಪಿಎಫ್ಐನ ಜನರಲ್ ಸೆಕ್ರೆಟರಿ ಅನಿಸ್ ಅಹಮ್ಮದ್ ಹೇಳಿಕೆ ನೀಡಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಮ ಮಂದಿರ ನಿರ್ಮಾಣಕ್ಕೆ 1 ಪೈಸೆಯನ್ನೂ ಕೊಡಬೇಡಿ. ನಿಮ್ಮ ಮನೆ ಬಾಗಿಲಿಗೆ ಚಂದಾ ಸಂಗ್ರಹಕ್ಕೆ ಬಂದ್ರೆ ಹಣ ಕೊಡಬೇಡಿ ಎಂದು ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ದೇಶದಲ್ಲಿ ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿ ಜಾಗ ಬಿಟ್ಟು ಕೊಡಿ ಎಂದಿದ್ದರು. ಈಗ ಜಾಗ ಬಿಟ್ಟು ಕೊಟ್ಟಾಯ್ತು. ಆದರೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಇನ್ನೂ ಕೂಡ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಆ್ಯಂಟಿ ಹಿಂದೂ ಸಂಘಟನೆ ನಮ್ಮದಲ್ಲ, ಆರ್ಎಸ್ಎಸ್ ಆ್ಯಂಟಿ ಹಿಂದೂ ಸಂಘಟನೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿರೋ ಆರ್ಎಸ್ಎಸ್ ಕ್ಯಾನ್ಸರ್ ಇದ್ದ ಹಾಗೆ ಅದು ವಾಸಿ ಆಗಲ್ಲ. ಆಗಾಗ ದೇಶದ ಶಾಂತಿಯನ್ನ ಕದಡುವ ಕೆಲಸ ಮಾಡುತ್ತಿದೆ. ಹಿಂದೂ ವರ್ಸಸ್ ಮುಸ್ಲಿಂ ಅಲ್ಲ, ಮುಸ್ಲಿಂ ವರ್ಸಸ್ ಆರ್ಎಸ್ಎಸ್ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಪಿಎಫ್ಐನ ದುಷ್ಮನ್ ಏನೇ ಇದ್ದರೂ ಆರ್ಎಸ್ಎಸ್ ಮಾತ್ರ. ನಿಮ್ಮಲ್ಲಿರೋ ಪ್ರತಿ ಆರ್ಎಸ್ಎಸ್ ನಾಯಕರನ್ನೂ ಗುರುತಿಸಿ ಇಟ್ಕೊಳ್ಳಿ ಎಂದು ಧಮ್ಕಿ ಭಾಷಣ ಮಾಡಿದ್ದಾರೆ.
