ಬೆಂಗಳೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಇಂದು 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ರಾಗಾನಿಗೆ ಶುಭ ಕೋರಿದ್ದಾರೆ.
ಈ ಸಂಬಂಧ ಇನ್ ಸ್ಟಾ ಸ್ಟೋರಿಯಲ್ಲಿ ರಾಹುಲ್ ಗಾಂಧಿ ಫೋಟೋ ಹಾಕಿಕೊಂಡಿರುವ ರಮ್ಯಾ, ಜಗತ್ತನ್ನು ಉತ್ತಮವಾಗಿಸುವ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಂತೆ ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ರಮ್ಯಾ ಅವರ ವಿಶ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಶೇರ್ ಮಾಡಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.
ಸದಾ ಸದಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಮ್ಯಾ ಒಮ್ಮೊಮ್ಮೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅಲ್ಲದೆ ಪ್ರಮುಖ ವ್ಯಕ್ತಿಗಳ ಹುಟ್ಟುಹಬ್ಬ ಬಂದಾಗ ವಿಶ್ ಮಾಡುತ್ತಿರುತ್ತಾರೆ. ಇತ್ತ ರಾಹುಲ್ ಗಾಂಧಿ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಅವರ ಮಾತು ಮತ್ತು ಹಾವ-ಭಾವಗಳನ್ನು ಮೀಮ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಆದರೆ ಅವರ ಬಗ್ಗೆ ರಮ್ಯಾ ಅಪಾರ ಗೌರವ ಹೊಂದಿದ್ದು, ಆ ಗೌರವಿಂದಲೇ ಇಂದು ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಹುಟ್ಟುಹಬ್ಬದ ನಿಮಿತ್ತ ಕಾಂಗ್ರೆಸ್ ದೇಶಾದ್ಯಂತ ಸೇವಾ ದಿವಸ್ ಅನ್ನು ಆಚರಿಸಿ ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್‍ಮಾಸ್ಕ್, ಮೆಡಿಸಿನ್ ಕಿಟ್, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಕಾಂಗ್ರೆಸ್ ನಿಂತಿದೆ. ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಜೊತೆಗೆ ಅವರ ಅಗತ್ಯಗಳನ್ನು ಕೇಳಿ, ಪೂರೈಸುತ್ತಿದ್ದಾರೆ.