ಕೋರ್ಟ್ ಹೇಳಿದ್ರೆ ಹೊರ ನಡೆಯುತ್ತೇವೆ- ಸೌರವ್ ಗಂಗೂಲಿ

Public TV
2 Min Read

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ವಿಚಾರದಲ್ಲಿ ಕೋರ್ಟ್ ಆದೇಶವನ್ನು ಪಾಲನೆ ಮಾಡುವುದಾಗಿ ಸೌರವ್ ಗಂಗೂಲಿ ಹೇಳಿದ್ದಾರೆ. ಅಲ್ಲದೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಬೋರ್ಡ್ ನಿಂದ ಹೊರ ನಡೆಯಲಿದ್ದಾರೆ ಎಂದಿದ್ದಾರೆ.

ಬಿಸಿಸಿಯ ನೂತನ ನಿಯಮಗಳ ಅನ್ವಯ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಂಡಿದೆ. ಪರಿಣಾಮ ಲೋಧಾ ಸಮಿತಿ ನಿಯಮಗಳ ಅನ್ವಯ 3 ವರ್ಷಗಳ ಕೂಲಿಂಗ್ ಆಫ್ ಪಿಡಿಯಡ್ ಅವಧಿಯ ನಿಯಮಗಳಲ್ಲಿ ಬದಲಾವಣೆ ಮಾಡಲು ಬಿಸಿಸಿಐ ಕೋರ್ಟಿಗೆ ಮನವಿ ಸಲ್ಲಿಸಿತ್ತು. ಪರಿಣಾಮ ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ನೀಡುವವರೆಗೂ ಗಂಗೂಲಿ, ಜಯ್ ಶಾ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಹೆಚ್ಚಾಯ್ತು ಐಪಿಎಲ್ ಜಾಹೀರಾತು ದರ – 10 ಸೆಕೆಂಡ್‍ಗೆ ಎಷ್ಟು ಹಣ ಕೊಡ್ಬೇಕು?

ಬಿಸಿಸಿಐ ಅರ್ಜಿಯನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟಿನ ನ್ಯಾ. ಅರವಿಂದ್ ಬೊಬ್ಡೆ, ಎಲ್ ನಾಗೇಶ್ವರ್ ನೇತೃತ್ವದ ದ್ವಿ-ಸದಸ್ಯ ಪೀಠಕ್ಕೆ ಅರ್ಜಿಯ ವಿಚಾರಣೆ ನಡೆಸಲಿದೆ. ಆದರೆ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಇದು ಸರಿಯೋ-ತಪ್ಪೋ.. ನಮಗಾಗಿ ಬೋರ್ಡ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಉಳಿದದೆಲ್ಲಾ ಈಗ ನ್ಯಾಯಾಂಗದ ಕೈಯಲ್ಲಿದೆ. ಕೋರ್ಟ್ ಪದವಿಯಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಇರುವೆ, ಇಲ್ಲವಾದರೆ ಅಲ್ಲಿಂದ ತೆರಳುವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‍ಗಾಗಿ ದುಬೈಗೆ ಹಾರಲಿದ್ದಾರೆ ಬಂಗಾಳದ ದಿನಗೂಲಿ ಕೆಲಸಗಾರ

ಅಂದ ಹಾಗೇ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಸೌರವ್ ಗಂಗೂಲಿ, ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಯ್ ಶಾ ಸತತ 5 ವರ್ಷ ಕಾರ್ಯನಿರ್ವಹಿಸಿದ್ದರು. ಇತ್ತ ಬಿಸಿಸಿಐನಲ್ಲೂ ಇಬ್ಬರ ಒಂದು ವರ್ಷದ ಅವಧಿ ಪೂರ್ಣಗೊಂಡಿದೆ. ಲೋಧಾ ಸಮಿತಿಯ ನಿಯಮಗಳ ಅನ್ವಯ ಬಿಸಿಸಿಐ ಹಾಗೂ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಸತತ 6 ವರ್ಷ ಕಾರ್ಯನಿರ್ವಹಿಸಿದ ಬಳಿಕ ಕಡ್ಡಾಯವಾಗಿ 3 ವರ್ಷ ಕೂಲಿಂಗ್ ಆಫ್ ನಿಯಮವನ್ನು ಅನುಸರಿಸಬೇಕಿದೆ. ಆದರೆ ಬಿಸಿಸಿಐ ಈ ನಿಯಮವನ್ನು ತನ್ನ ಹೊಸ ನಿಯಮಾವಳಿಯಲ್ಲಿ ಪರಿಷ್ಕರಿಸಲು ನ್ಯಾಯಾಲಯವನ್ನು ತನ್ನ ಅರ್ಜಿಯಲ್ಲಿ ಕೋರಿದೆ.

Share This Article
Leave a Comment

Leave a Reply

Your email address will not be published. Required fields are marked *