ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್‍ಗಳಲ್ಲಿ ಬಿಜೆಪಿ ಚಾರಿತ್ರಿಕ ಗೆಲುವು- ನಳಿನ್ ಕುಮಾರ್ ಕಟೀಲ್

Public TV
1 Min Read

ಬೆಂಗಳೂರು: ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್‍ಗಳಲ್ಲಿ ಬಿಜೆಪಿ ಅತ್ಯಾದ್ಭುತ ಸಾಧನೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

ಮಾಧ್ಯಮ ಪ್ರಕಟಣೆಯಲ್ಲಿ ಅವರು, ಜನಪರ ಕೆಲಸಗಳು ಮತ್ತು ಕೋವಿಡ್‍ನ ಅತ್ಯಂತ ಸಮರ್ಥ ನಿರ್ವಹಣೆಯಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ವಿಶ್ವವಂದ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿರುವುದಕ್ಕೆ ಇದು ಸಾಕ್ಷಿಯಂತಿದೆ ಎಂದು ತಿಳಿಸಿದ್ದಾರೆ.


ಒಟ್ಟು 75 ಜಿಲ್ಲಾ ಪಂಚಾಯತ್‍ಗಳ ಅಧ್ಯಕ್ಷ ಸ್ಥಾನದ ಪೈಕಿ 67ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದೊಂದು ಚಾರಿತ್ರಿಕ ಗೆಲುವಾಗಿದೆ. ಇದು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *