ಅಟಲ್ ಸುರಂಗ ಮಾರ್ಗದಲ್ಲಿ ಡಾನ್ಸ್ – ಪೊಲೀಸರ ಬಲೆಗೆ ಬಿದ್ದ ಪ್ರವಾಸಿಗರು

Public TV
2 Min Read

ಶಿಮ್ಲಾ: ವಿಶ್ವದ ಅತೀ ಉದ್ದ ಅಟಲ್ ಸುರಂಗದೊಳಗೆ ಸಂಚಾರದ ನಿಯಮ ಉಲ್ಲಂಘನೆ ಮಾಡಿ ಡಾನ್ಸ್ ಮಾಡಿದ ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಸುರಂಗ ಮರ್ಗದ ನಿಯಮ ಉಲ್ಲಂಘನೆ ಮಾಡಿದ ಪ್ರವಾಸಿಗರನ್ನು ರಿಷವ್ ಗುಪ್ತಾ(19), ರವೀನ್ ಮಂಗಲ್ (19), ಶಿವಮ್ ಸಿಂಗಲ್ (19), ರಿತಿಕ್ ಗೋಯಲ್ (20), ಹಪ್ರ್ರೀತ್ ಸಿಂಗ್ (12), ಸಿಮ್ರಾನ್ ಸಿಂಗ್ (25) ಮತ್ತು ಅವರ ಚಾಲಕ ಸಂದೀಪ್ (37) ಎಂದು ಗುರುತಿಸಲಾಗಿದೆ. ಅಟಲ್ ಸುರಂಗದೊಳಗೆ ಇರುವ ಸಂಚಾರ ನಿಯಮಗಳನ್ನು 7 ಮಂದಿ ಪ್ರವಾಸಿಗರು ಬೇಜವಾಬ್ದಾರಿ ವರ್ತನೆ ಮಾಡಿ ಸಂಚಾರವನ್ನು ಅಡ್ಡಿಪಡಿಸಿದಿದ್ದಾರೆ. ಪ್ರವಾಸಿಗರು ತಮ್ಮ ಕಾರನ್ನು ಮಧ್ಯದಲ್ಲಿ ನಿಲ್ಲಿಸಿ ಸಂಗೀತಕ್ಕೆ ನೃತ್ಯ ಮಾಡಿದ್ದಾರೆ.

ದೆಹಲಿಯ ಏಳು ಪ್ರವಾಸಿಗರನ್ನು 19 ರಿಂದ 25 ವರ್ಷ ವಯಸ್ಸಿನವರನ್ನು ಮತ್ತು ಕ್ಯಾಬ್ ಚಾಲಕನನ್ನು ಬಂಧಿಸಿದ್ದೇವೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರವಾಸಿಗರು ತಮ್ಮ ಕಾರನ್ನು ಮಧ್ಯದಲ್ಲಿ ನಿಲ್ಲಿಸಿ ಸಂಗೀತಕ್ಕೆ ನೃತ್ಯ ಮಾಡಲು ಪ್ರಾರಂಭಿಸಿದರು ಎಂದು ಕುಲ್ಲು ಪೊಲೀಸರು ತಿಳಿಸಿದ್ದಾರೆ.

ಅಟಲ್ ಸುರಂಗದ ಮಧ್ಯದಲ್ಲಿ ಪ್ರವಾಸಿಗರು ಸಂಗೀತಕ್ಕೆ ನೃತ್ಯ ಮಾಡುತ್ತಿದ್ದರು ಎಂದು ಅನೇಕ ದೂರುಗಳು ಬಂದಿದ್ದವು. ಅನೇಕ ವಿಡಿಯೋ ತುಣುಕುಗಳ ಆಧಾರದ ಮೇಲೆ, ಕುಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೆಹಲಿಯ ನರೇಲಾ ನೆರೆಹೊರೆಯ ನಿವಾಸಿಗಳಾದ ಏಳು ಯುವಕರನ್ನು ಮತ್ತು ಅವರ ಚಾಲಕರನ್ನು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಹಾಗೂ ಅವರಿಗೆ ಸೇರಿದ ಮೂರು ವಾಹನಗಳನ್ನು ಸಹ ಬಂಧಿಸಿದ್ದಾರೆ. ಇದನ್ನು ಓದಿ: ವಿಶ್ವದ ಅತೀ ಉದ್ದ ಅಟಲ್ ಸುರಂಗ ಹೆದ್ದಾರಿ ಸಿದ್ದ-ಶೀಘ್ರವೇ ಉದ್ಘಾಟನೆ 

ಸುರಂಗದಲ್ಲಿನ ಇಂತಹ ಚಟುವಟಿಕೆಗಳು ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುತ್ತವೆ. ನಾವು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕುಲ್ಲು ಎಸ್‍ಪಿ ಗೌರವ್ ಸಿಂಗ್‍ತಿಳಿಸಿದ್ದಾರೆ.

ಮನಾಲಿಯನ್ನು ಲೇಹ್‍ನೊಂದಿಗೆ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗವಾಗಿದೆ. ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಅಕ್ಟೋಬರ್ 3 ರಂದು ಉದ್ಘಾಟಿಸಿದ್ದರು. 10,000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವು ಮನಾಲಿ-ಲೇಹ್ ಸಂಪರ್ಕಿಸುತ್ತದೆ. ಇದು 10 ವರ್ಷಗಳ ನಂತರ ಸಿದ್ಧವಾಗಿದೆ.

 

ಮೊದಲೆಲ್ಲಾ ನೀವು ಮನಾಲಿಯಿಂದ ಲೇಹ್‍ಗೆ ತೆರಳಬೇಕೆಂದರೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋಮೀಟರ್ ಅಂತರ ಕಡಿಮೆಯಾಗಿದೆ. ಜೊತೆಗೆ ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಸಮಯ ಉಳಿತಾಯವಾಗಿದೆ. ಇದೀಗ 10,000 ಅಡಿಗಳಿಗಿಂತ ಹೆಚ್ಚು ಎತ್ತರದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವು ಮನಾಲಿಯನ್ನು ಲೇಹ್‍ನೊಂದಿಗೆ ಸಂಪರ್ಕಿಸುತ್ತಿದೆ. 9.02 ಕಿ.ಮೀ ಉದ್ದದ ಈ ಸುರಂಗವು ರೋಹ್ಟಾಂಗ್ ಪಾಸ್ ಮೂಲಕ ಹಾದುಹೋಗುತ್ತದೆ. ಒದು ವಿಶ್ವದ ಅತ್ಯಂತ ಉದ್ದದ ಸುರಂಗ ಮಾರ್ಗ ಎನ್ನಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *