– ನಿರ್ದಿಷ್ಟ ಕಾರಣವಿಲ್ಲದೇ ಸವಾರಿ ಕ್ಯಾನ್ಸಲ್ ಮಾಡಿದ್ರೂ ಬೀಳುತ್ತೆ ದಂಡ
ನವದೆಹಲಿ: ಬೆಂಗಳೂರು (Bengaluru), ಮುಂಬೈನಂತಹ ಮಹಾ ನಗರಗಳಲ್ಲಿ ತುರ್ತು ಕಾರ್ಯಗಳಿಗೆ ಓಡಾಡಬೇಕು ಅಂದ್ರೆ ಆಟೋ, ಓಲಾ. ಊಬರ್‌ನಲ್ಲಿ ಓಡಾಡಬೇಕು. ಆದ್ರೆ ಕೆಲವೊಮ್ಮೆ ನಿಗದಿಕ್ಕಿಂತ ಹೆಚ್ಚು ದುಡ್ಡು ಕೇಳಿದಾಗ ಅನುಕೂಲ ಇದ್ದವರು ಕೊಟ್ಟು ಹೋಗ್ತಾರೆ, ಇಲ್ಲದವರು ಏನ್ ಮಾಡ್ತಾರೆ ಹೇಳಿ? ಅದರಲ್ಲೂ, ಮಳೆಗಾಲ, ಟ್ರಾಫಿಕ್ ಜಾಮ್‌ನಂತಹ ಸಂದರ್ಭದಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆಯನ್ನು ಖಾಸಗಿ ಕ್ಯಾಬ್ ಸೇವಾ ಕಂಪನಿಗಳು (Cab Aggregators) ಸೃಷ್ಟಿಸುತ್ತಿವೆ. ಇದರ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಆದರೀಗ ಕೇಂದ್ರ ಸರ್ಕಾರವೇ ಪೀಕ್ ಅವರ್‌ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಅವಕಾಶ ಮಾಡಿಕೊಟ್ಟಿದೆ.
ಹೌದು. ಓಲಾ, ಊಬರ್ (Ola, Uber) ನಂತರ ಅಗ್ರಿಗೇಟರ್ ಕಂಪನಿಗಳು ಪೀಕ್ ಅವರಗಳಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ದರ ಅಂದರೆ ಸರ್ಜ್ ಚಾರ್ಜ್ ವಿಧಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Ministry of Road Transport and Highways) ಜುಲೈ 1ರಂದು ಆದೇಶ ಹೊರಡಿಸಿದೆ. ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು (MVAG) 2025ರ ಅನ್ವಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ
ಈವರೆಗೆ ಕ್ಯಾಬ್ ಅಗ್ರಿಗೇಟರ್‌ಗಳು ಪೀಕ್ ಅವರ್‌ಗಳಲ್ಲಿ ಸರ್ಜ್ ಬೆಲೆ ಮೂಲ ದರಕ್ಕಿಂತ 1.5 ಪಟ್ಟು ಹೆಚ್ಚು ವಿಧಿಸಲಾಗುತ್ತಿತ್ತು. ಆದರೀಗ ಹೊಸ ಮಾರ್ಗಸೂಚಿಯ ಪ್ರಕಾರ 2 ಪಟ್ಟು ಹೆಚ್ಚಿನ ದರ ವಿಧಿಸಬಹುದಾಗಿದೆ. ಅಲ್ಲದೇ ಮುಂದಿನ ಮೂರು ತಿಂಗಳ ಒಳಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಿಂದ RailOne ಆಪ್ ಬಿಡುಗಡೆ- ಏನೆಲ್ಲಾ ಸೇವೆ ಲಭ್ಯವಿದೆ?
ಇದರೊಂದಿಗೆ ಇನ್ನಷ್ಟು ನಿಯಮಗಳನ್ನೂ ಜಾರಿಗೆ ತರಲಾಗಿದೆ. ನಿರ್ದಿಷ್ಟ ಕಾರಣವಿಲ್ಲದೇ ಸವಾರಿಯನ್ನ ರದ್ದುಗೊಳಿಸಿದ್ರೆ 100 ರೂ.ಗೆ 10% ನಂತೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಜೊತೆಗೆ 3 ಕಿಮೀ ಒಳಪಟ್ಟ ಡೆಡ್ ಮೈಲೆಜ್‌ಗೆ ಪ್ರಯಾಣಿಕಗೆ ಯಾವುದೇ ಶುಲ್ಕ ವಿಧಿಸಬಾರದು. ಅಗ್ರಿಗೇಟರ್ ಪ್ರಯಾಣಿಕರಿಗೆ ಕನಿಷ್ಠ 5 ಲಕ್ಷ ರೂ. ವಿಮೆ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಮೋಟಾರ್ ವೆಹಿಕಲ್ ಅಗ್ರಿಗೇಟರ್ ಕಂಪನಿಗಳು ಕೇಂದ್ರದ ಈ ನಿಯಮವನ್ನು ಸ್ವಾಗತಿಸಿವೆ. ಎಲ್ಲಾ ಹಂತಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ ಎಂದೂ ಹೇಳಿದೆ. ಇದನ್ನೂ ಓದಿ: 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ