ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಭಾರೀ ಮಳೆ (Rain) ಸುರಿಯುತ್ತಿರುವ ಪರಿಣಾಮ 75,000ಕ್ಕೂ ಹೆಚ್ಚು ಲೋಡೆಡ್ ಟ್ರಕ್‌ಗಳು (Loaded Trucks) ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಸಿಲುಕಿಕೊಂಡಿವೆ ಎಂದು ವರದಿಗಳು ತಿಳಿಸಿವೆ.
ತಮಿಳುನಾಡಿನಲ್ಲಿ ಎಡೆಬಿಡದಂತೆ ಮಳೆ ಸುರಿಯುತ್ತಿರುವ ಹಿನ್ನೆಲೆ ಟ್ರಕ್‌ಗಳು ಸಿಲುಕಿಕೊಂಡಿದ್ದು, ಈ ಟ್ರಕ್‌ಗಳು ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮುಕಾಶ್ಮೀರವನ್ನು ತಲುಪಬೇಕು. ಮಳೆಯಿಂದಾಗಿ ಟ್ರಕ್‌ಗಳು ರಾಜ್ಯಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇನ್ನು ತಮಿಳುನಾಡಿಗೆ ಬರಬೇಕಿದ್ದ 25,000ಕ್ಕೂ ಹೆಚ್ಚು ಟ್ರಕ್‌ಗಳು ಉತ್ತರ ರಾಜ್ಯಗಳಲ್ಲಿ ಸಿಲುಕಿಕೊಂಡಿದೆ ಎಂದು ತಮಿಳುನಾಡು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: 15 ಸಾವಿರಕ್ಕಾಗಿ ಭಾರತೀಯ ಸೇನೆ ರಹಸ್ಯ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್
Advertisement
Advertisement
ಲೋಡೆಡ್ ಟ್ರಕ್‌ಗಳು ತೆಂಗಿನಕಾಯಿ, ಸಾಗುವಾನಿ, ಆರೋಗ್ಯವರ್ಧಕ ಔಷಧಗಳಲ್ಲಿ ಬಳಸುವ ಕಚ್ಚಾ ವಸ್ತುಗಳು, ಬೆಂಕಿಕಡ್ಡಿಗಳು, ಪಟಾಕಿಗಳು, ಜವಳಿ ಮತ್ತು ಉಕ್ಕು ಮತ್ತು ಕಬ್ಬಿಣದ ವಸ್ತುಗಳನ್ನು ಒಳಗೊಂಡಿದ್ದು, ಇದನ್ನು ಮಳೆಯ ಸಂದರ್ಭದಲ್ಲಿ ಉತ್ತರ ರಾಜ್ಯಗಳಿಗೆ ಸಾಗಿಸಲು ಅಸಾಧ್ಯವಾಗಿದೆ. ಅದೇ ರೀತಿ ತಮಿಳುನಾಡಿಗೆ ಬರಬೇಕಿದ್ದ ಟ್ರಕ್‌ಗಳು ಸೇಬು, ಯಂತ್ರಗಳು ಮತ್ತು ಜವಳಿಗಳಂತಹ ಸರಕುಗಳನ್ನು ಒಳಗೊಂಡಿದ್ದು, ತಮಿಳುನಾಡಿಗೆ ತಲುಪಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ದೆಹಲಿ ನೈಟ್‍ಕ್ಲಬ್ ಲಿಫ್ಟ್‌ನಲ್ಲಿ 10 ಗಂಟೆಗಳ ಕಾಲ ಸಿಲುಕಿದ ಹತ್ತು ಮಂದಿ!
Advertisement
Advertisement
ಹವಾಮಾನ (Weather) ಹಾಗೂ ಪರಿಸ್ಥಿತಿಗಳು ಸಾಮಾನ್ಯವಾಗಿ ಪ್ರಯಾಣಿಸಲು ಸುರಕ್ಷಿತವೆನಿಸುವವರೆಗೆ ಟ್ರಕ್‌ಗಳು ಇಲ್ಲಿಯೇ ಇರುತ್ತವೆ. ಇದರಿಂದಾಗಿ ಟ್ರಕ್ ಚಾಲಕರು ಹಾಗೂ ಸರಕುಗಳನ್ನು ಆರ್ಡರ್ ಮಾಡಿದ ಕಂಪನಿಗಳು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮತ್ತೊಂದು ಕೇಸ್ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!
Web Stories