Year: 2025

  • ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ

    ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಇಂದು (ಜ.7) ನಟಿ ರಮ್ಯಾ (Ramya) ಹಾಜರಾಗಿದ್ದಾರೆ. ಇದನ್ನೂ ಓದಿ:ರೂಲ್ಸ್‌ಗೆಲ್ಲಾ ಡೊಂಟ್ ಕೇರ್-‌ ಮತ್ತೆ ಹೊಡೆದಾಡಿಕೊಂಡ ತ್ರಿವಿಕ್ರಮ್‌, ಉಗ್ರಂ ಮಂಜು

    ramya 1

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ರಮ್ಯಾ ಹಾಜರಾಗಿದ್ದಾರೆ.

    ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  • ಸಚಿನ್ ಆತ್ಮಹತ್ಯೆ ಕೇಸ್ – ಡಿಐಜಿಪಿ ಶಾಂತನು ಸಿನ್ಹಾ ಭೇಟಿ, ಸ್ಥಳ ಮಹಜರು

    ಸಚಿನ್ ಆತ್ಮಹತ್ಯೆ ಕೇಸ್ – ಡಿಐಜಿಪಿ ಶಾಂತನು ಸಿನ್ಹಾ ಭೇಟಿ, ಸ್ಥಳ ಮಹಜರು

    ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ (Sachin Panchal Sucide Case) ಸಂಬಂಧಿಸಿದಂತೆ ಇಂದು ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಭೇಟಿ ನೀಡಿದ್ದಾರೆ.

    ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶೀಘ್ರವಾಗಿ ತನಿಖೆ ಮಾಡಿ, ವರದಿ ನೀಡಲು ಆದೇಶಿಸಿದೆ. ಈ ಹಿನ್ನೆಲೆ ಇಂದು ಜಿಲ್ಲೆಗೆ ಆಗಮಿಸಿರುವ ಸಿಐಡಿ ಡಿಐಜಿಪಿ ಶಾಂತನು ಸಿನ್ಹಾ ಆತ್ಮಹತ್ಯೆ ಸ್ಥಳ ಮಹಜರು ಮಾಡಿದ್ದಾರೆ.ಇದನ್ನೂ ಓದಿ:Ramanagara| ಬಾಯ್ಲರ್ ಪೈಪ್ ಸ್ಫೋಟ – ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವು

    ಬಸವೇಶ್ವರ ವೃತ್ತದ ಬಳಿಯ ರೈಲು ಹಳಿ ಮೇಲೆ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿ, ಆತ್ಮಹತ್ಯೆ ದಿನದ ಇಂಚಿಂಚು ಮಾಹಿತಿ ಪಡೆದಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಐಡಿ ತಂಡದಿಂದ ಪ್ರತಿಯೊಂದು ಮಾಹಿತಿ ಪಡೆದಿದ್ದಾರೆ.

    ಇನ್ನೂ ಭಾಲ್ಕಿಯ ಕಟ್ಟಿತೂಗಾಂವ ಗ್ರಾಮದ ಸಚಿನ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರ ವಿಚಾರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

     

  • Ramanagara| ಬಾಯ್ಲರ್ ಪೈಪ್ ಸ್ಫೋಟ – ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವು

    Ramanagara| ಬಾಯ್ಲರ್ ಪೈಪ್ ಸ್ಫೋಟ – ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವು

    ರಾಮನಗರ: ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು (Boiler Blast) ಗಾಯಗೊಂಡಿದ್ದ 5 ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

    ಉಮೇಶ್ ಕುಮಾರ್ ಸಿಂಗ್ (32) ಮೃತ ಕಾರ್ಮಿಕ. ಕಳೆದ ಶನಿವಾರ ಬಿಡದಿಯ (Bidadi) ಭೈರಮಂಗಲ ಕ್ರಾಸ್ ಬಳಿ ಇರುವ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬಾಯ್ಲರ್ ಪೈಪ್ ಸ್ಫೋಟಗೊಂಡು ಐದು ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಈ ಪೈಕಿ ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು – ಫೆ.4 ರಂದು ಉದ್ಘಾಟನೆ: ಈಶ್ವರಪ್ಪ

    ಒಣ ತ್ಯಾಜ್ಯ ಬರ್ನ್ ಆದ ನಂತರ ಬೂದಿ ಹೊರ ಹೋಗುವ ಬಾಯ್ಲರ್ ಪೈಪ್ ಕಟ್ಟಿಕೊಂಡಿದ್ದ ಪರಿಣಾಮ ಕಾರ್ಮಿಕರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಓಪನ್ ಮಾಡಿದ ಕಾರಣ ಅವಘಡ ಸಂಭವಿಸಿದೆ. ಅಲ್ಲದೇ ಇಂದು ಸಂಜೆ ಘಟನಾ ಸ್ಥಳಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಫೆ.5ಕ್ಕೆ ಚುನಾವಣೆ, ಫೆ.8 ರಂದು ಮತ ಎಣಿಕೆ

  • ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

    ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್

    ಸೌತ್ ಬ್ಯೂಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ‘ಕಣ್ಣಪ್ಪ’ (Kannappa) ಸಿನಿಮಾದಲ್ಲಿ ಪಾರ್ವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ದೇವಿ ಅವತಾರದಲ್ಲಿ ನಟಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    Kajal Aggarwal

    ಡೈರೆಕ್ಟರ್ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಪ್ರಭಾಸ್ ಜೊತೆ ಕಾಜಲ್ ನಟಿಸಿದ್ದಾರೆ. ಪಾರ್ವತಿ ದೇವಿಯಾಗಿ ನಟಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿನ ನಟಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಬಿಳಿ ಬಣ್ಣದ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ನೋಡಿದ್ರೆ ದೈವಿಕ ಕಳೆ ಎದ್ದು ಕಾಣುತ್ತಿದೆ. ಅವರೇ ಈ ಪಾತ್ರಕ್ಕೆ ಸೂಕ್ತ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ‘ಕಣ್ಣಪ್ಪ’ ಚಿತ್ರವನ್ನು ಮೋಹನ್ ಬಾಬು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಪ್ರಭಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

    ಇನ್ನೂ ನಟಿಯ ಬಳಿ ಹಲವು ಸಿನಿಮಾಗಳಿವೆ. ಅದರಲ್ಲಿ ಸಲ್ಮಾನ್‌ ಖಾನ್‌ ನಟನೆಯ ‘ಸಿಖಂದರ್‌’ ಸಿನಿಮಾದಲ್ಲಿ ಕಾಜಲ್‌ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿಯಾಗಿದ್ದಾರೆ. 2025ರ ಈದ್‌ ಹಬ್ಬದಂದು ರಿಲೀಸ್‌ ಆಗಲಿದೆ.

  • ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು – ಫೆ.4 ರಂದು ಉದ್ಘಾಟನೆ: ಈಶ್ವರಪ್ಪ

    ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು – ಫೆ.4 ರಂದು ಉದ್ಘಾಟನೆ: ಈಶ್ವರಪ್ಪ

    ಬೆಂಗಳೂರು: ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಕ್ರಾಂತಿವೀರ ಬ್ರಿಗೇಡ್ (Krantiveera Brigade) ಉದ್ಘಾಟನೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.4 ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ. ಇದು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾ ಕಾರ್ಯಕ್ರಮ ನಡೆಯಲಿದೆ. ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂಗಳು ಒಂದಾಗಬೇಕು. ಹಿಂದೂಗಳು ಒಂದಾಗದಿದ್ದರೆ ಬಹಳ ಕಷ್ಟ. 1008 ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆ ಆಗಲಿದೆ. ಹಿಂದೂ ಧರ್ಮದ ಒಳಿತಿಗಾಗಿ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲಿದೆ ಎಂದರು.ಇದನ್ನೂ ಓದಿ: ‌ರೂಲ್ಸ್‌ಗೆಲ್ಲಾ ಡೊಂಟ್ ಕೇರ್-‌ ಮತ್ತೆ ಹೊಡೆದಾಡಿಕೊಂಡ ತ್ರಿವಿಕ್ರಮ್‌, ಉಗ್ರಂ ಮಂಜು

    ಹಿಂದುಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರ್ಕಾರದಿಂದಲೂ ಸಿಗುತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿವೀರ ಬ್ರಿಗೇಡ್ ನಿಲ್ಲಲಿದೆ. ಸ್ವಾಮೀಜಿಗಳು ತೀರ್ಮಾನ ತೆಗೆದುಕೊಂಡಾಗ ನಾವು ಪೂರ್ಣ ಬೆಂಬಲ ನೀಡಿದ್ದೇವೆ. ಬಸವರಾಜ ಬಾಳೇಕಾಯಿ ಬ್ರಿಗೇಡ್ ಅಧ್ಯಕ್ಷರಾಗಿ, ಕೆ.ಇ. ಕಾಂತೇಶ್ ಕಾರ್ಯಾಧ್ಯಕ್ಷರಾಗಿ ಇರುತ್ತಾರೆ. ನಾನು ಮತ್ತು ಗೂಳಿ ಹಟ್ಟಿ ಶೇಖರ್ ಬ್ರಿಗೇಡ್‌ನ ಸಂಚಾಲಕರಾಗಿರುತ್ತೇವೆ. ಸಕಲ ಹಿಂದೂ ಸಮಾಜದ ರಕ್ಷಣೆಗೆ ಈ ಬ್ರಿಗೇಡ್ ಕೆಲಸ ಮಾಡಲಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗೋಶಾಲೆ ಘೋಷಣೆ ಆಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಈ ಆದೇಶವನ್ನು ರದ್ದು ಮಾಡಿತು. ಸರ್ಕಾರದಲ್ಲಿ ಹಿಂದೂ ವಿರೋಧಿ ಕೆಲಸಗಳು ಆಗುತ್ತಿವೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಗೆ ತಲೆಕಡಿದ ಹಸು, ಹಸುವಿನ ರಕ್ತ ಬಂದು ಬೀಳುತ್ತಿದೆ. ವಕ್ಫ್ ಆಸ್ತಿ ಅಂತಾ ಪಹಣಿಯಲ್ಲಿ ಸೇರಿದ್ದನ್ನು ಒಂದಾದರೂ ವಾಪಸ್ ಪಡೆದಿದ್ದಾರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಈ ಹಿಂದೆ ರಾಯಣ್ಣ ಬ್ರಿಗೇಡ್ ಅನ್ನು ಅಮಿತ್ ಶಾ ಅವರ ಮಾತು ಕೇಳಿ ನಿಲ್ಲಿಸಿದ್ದೆ. ಈಗ ಸಾಧು ಸಂತರ ಜೊತೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ. ಈಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಯಾರು ಬೆಂಬಲಿಸಿದರೂ ಸ್ವಾಗತ ಮಾಡ್ತೇವೆ. ಹಿಂದೂ ಸಮಾಜದಲ್ಲಿರುವ ಎಲ್ಲ ಸಕಲ ಸಮಾಜದವರಿಗೆ ಈ ಬ್ರಿಗೇಡ್ ಬೆಂಬಲ ಕೊಡುತ್ತದೆ. ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ. ದೊಡ್ಡವರ ಮಾತು ಕೇಳುವ ಅಭ್ಯಾಸ ಆಗ ನನಗೆ ಇತ್ತು, ಆದರೆ ಇವತ್ತು ಇಲ್ಲ. ಅಂದು ದೊಡ್ಡವರ ಮಾತು ಕೇಳಿ ನಿಲ್ಲಿಸಿದೆ. ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ. ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ.ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಎನ್ನುವ ಪ್ರಶ್ನೆ ಇಲ್ಲ. ಫೆ.4 ರಂದು ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದರು.

    ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ವೇಳೆ ಯಾವ ಕಾರಣಕ್ಕೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದೆ. ನಾನು ಯಾವ ವಿಚಾರ ಹೇಳಿದ್ದೇನೋ ಅದೇ ವಿಚಾರ ದೇವರ ದಯದಿಂದ ಇಂದು ಬಿಜೆಪಿಯಲ್ಲಿ ಚರ್ಚೆ ಆಗುತ್ತದೆ. ಇದು ತಾತ್ಕಾಲಿಕ ಗೊಂದಲ, ಬಗೆಹರಿಯುತ್ತದೆ. ನನ್ನ ಬಿಜೆಪಿ ಹೈಕಮಾಂಡ್ ಸೇರಿಸಲು ಯೋಚನೆ ಮಾಡಿದರೆ ಹೋಗಬೇಕಾ ಎಂದು ನಾನೂ ಯೋಚನೆ ಮಾಡಬೇಕು. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಲ್ಲ, ಬಿಜೆಪಿ ನನ್ನ ತಾಯಿ. ಬ್ರಿಗೇಡ್ ಬಿಡಿ ಎಂದು ಮೋದಿ ಯಾವುದೇ ಕಾರಣಕ್ಕೂ ಹೇಳಲ್ಲ. ಬಿಜೆಪಿಯಲ್ಲಿ ಹಿಂದುತ್ವ ಸಿದ್ಧಾಂತ ದೂರ ಹೋಗಿದೆ, ಹೊಂದಾಣಿಕೆ ರಾಜಕೀಯ ಹೆಚ್ಚಾಗಿದೆ. ಹೊಂದಾಣಿಕೆ ರಾಜಕೀಯ ಶುದ್ದೀಕರಣ ಆಗಲಿ ಎಂಬ ಆಸೆ ನನ್ನದು, ಅನೇಕ ಮುಖಂಡರ ಆಸೆಯೂ ಅದೇ ಆಗಿದೆ. ಬಿಜೆಪಿ ಶುದ್ದೀಕರಣ ಆಗುತ್ತದೆ, ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ಬಿಜೆಪಿಯೊಳಗಿನ ವ್ಯವಸ್ಥೆ ಸರಿಯಿಲ್ಲ, ಅದು ಬದಲಾಗಬೇಕು. ಶಿಕಾರಿಪುರದಲ್ಲಿ ನಮ್ಮ ಭಿಕ್ಷೆ ಎಂದು ಡಿಕೆಶಿ ಹೇಳಿದ್ದರು. ನಾನು ವರುಣಾದಲ್ಲಿ ನಿಂತಿದ್ದರೆ ಸಿದ್ದರಾಮಯ್ಯ ಕಥೆ ಏನಾಗುತ್ತಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ. ಅಂದರೆ ನಾನೇ ಗೆಲ್ಲಿಸಿದೆ ಅಂತಾ ತಾನೇ ಅರ್ಥ? ಇದು ಹೊಂದಾಣಿಕೆ ರಾಜಕೀಯ ಅಲ್ಲದೇ ಇನ್ನೇನು? ರಾಜಕೀಯ ಬೆತ್ತಲೆ ಇದು ಎಂದರು.ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ, ಗುತ್ತಿಗೆದಾರರ ಬಾಕಿ ಪಾವತಿಸಿ – ಸಿಎಂಗೆ ಹೆಚ್‌ಡಿಕೆ ತಿರುಗೇಟು

  • ದೆಹಲಿಯಲ್ಲಿ ಫೆ.5ಕ್ಕೆ ಚುನಾವಣೆ, ಫೆ.8 ರಂದು ಮತ ಎಣಿಕೆ

    ದೆಹಲಿಯಲ್ಲಿ ಫೆ.5ಕ್ಕೆ ಚುನಾವಣೆ, ಫೆ.8 ರಂದು ಮತ ಎಣಿಕೆ

    ನವದೆಹಲಿ: ದೆಹಲಿಯಲ್ಲಿ ಫೆ.5 ರಂದು ಚುನಾವಣೆ (Delhi Election) ನಡೆಯಲಿದ್ದರೆ ಫೆ.8 ರಂದು ಮತ ಎಣಿಕೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

    ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv kumar)  ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದರು.

    70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯ ಅವಧಿ ಫೆ.23ರಂದು ಅಂತ್ಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣೆ ನಡೆಯಬೇಕಿದೆ.

    NARENDRA MODI ARVIND KEJRIWAL

    ಎಎಪಿ (AAP) ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅರವಿಂದ್​ ಕೇಜ್ರಿವಾಲ್​​ ಚುನಾವಣೆ ಗೆದ್ದು ಮತ್ತೆ ಸಿಎಂ ಹುದ್ದೆಗೇರುವ ತವಕದಲ್ಲಿದ್ದಾರೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಬಿಜೆಪಿ (BJP) 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್​ ಗೆಹ್ಲೋಟ್​ ಬಿಜವಸನ್​ನಿಂದ ಸ್ಪರ್ಧಿಸುತ್ತಿದ್ದಾರೆ. ಪಟೇಲ್​ ನಗರದಿಂದ ರಾಜ್​ ಕುಮಾರ್, ದೆಹಲಿಯ ಮಾಜಿ ಕಾಂಗ್ರೆಸ್​ ಮುಖ್ಯಸ್ಥ ಅರವಿಂದ್​ ಸಿಂಗ್​ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.

    dk shivakumar delhi congress

     

    ಕಾಂಗ್ರೆಸ್​ 48 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮತ್ತೊಂದು ಪಟ್ಟಿ ಹೊರಬೇಕಿದೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್​​ ಮಗ ಸಂದೀಪ್​ ದೀಕ್ಷಿತ್​ ಈ ಬಾರಿ ವಿಧಾನಸಭಾ ಚುನಾವಣೆಗೆ ಇಳಿಯಲಿದ್ದಾರೆ. ಈ ಹಿಂದೆ ಎರಡು ಬಾರಿ ಸಂಸದರಾಗಿದ್ದ ದೀಕ್ಷಿತ್​​ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2013 ಮತ್ತ 2015ರಲ್ಲಿ ಕೇಜ್ರಿವಾಲ್​ ಅವರು ಶೀಲಾ ದೀಕ್ಷಿತ್​​ ವಿರುದ್ದ ಜಯ ಸಾಧಿಸಿದ್ದರು.

    ಬಿಜೆಪಿ ಬೃಹತ್ ಪ್ರಚಾರವನ್ನು ನಡೆಸುತ್ತಿದ್ದು ಪ್ರಧಾನಿ ಮೋದಿ (PM Narendra Modi) ಪ್ರಚಾರದ ಮೂಲಕ ಕೇಜ್ರಿವಾಲ್‌ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತಾರೂಢ ಎಎಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ನಗರಗಳಲ್ಲಿ ನೆಲೆಯೂರಲು ಸಿದ್ಧತೆಯನ್ನು ನಡೆಸಿದೆ.

    ಬಿಜೆಪಿಯು 1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿದ್ದು, 2015 ರಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಹೊಂದಿರುವ ಎಎಪಿಯನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಎಎಪಿ 2015 ಮತ್ತು 2020ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಕ್ರಮವಾಗಿ 67 ಮತ್ತು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿತ್ತು.

  • ‌ರೂಲ್ಸ್‌ಗೆಲ್ಲಾ ಡೊಂಟ್ ಕೇರ್-‌ ಮತ್ತೆ ಹೊಡೆದಾಡಿಕೊಂಡ ತ್ರಿವಿಕ್ರಮ್‌, ಉಗ್ರಂ ಮಂಜು

    ‌ರೂಲ್ಸ್‌ಗೆಲ್ಲಾ ಡೊಂಟ್ ಕೇರ್-‌ ಮತ್ತೆ ಹೊಡೆದಾಡಿಕೊಂಡ ತ್ರಿವಿಕ್ರಮ್‌, ಉಗ್ರಂ ಮಂಜು

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ಹಂತ ತಲುಪಲು ನಾನಾ ರೀತಿಯ ತಂತ್ರಗಳು ನಡೆಯುತ್ತಿವೆ. ಬಿಗ್ ಬಾಸ್ ಕೊಡುವ ಪ್ರತಿ ಟಾಸ್ಕ್‌ನಲ್ಲೂ ಅತ್ಯುತ್ತಮ ಪರ್ಫಾಮೆನ್ಸ್ ನೀಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಎದುರಾಳಿಗಳನ್ನು ಹೆದರಿಸಿಕೊಂಡು ಮನೆಯೊಳಗೆ ಟಾಸ್ಕ್ ಆಡುತ್ತಿದ್ದಾರೆ. ಅದರಂತೆ ಬಿಗ್ ಬಾಸ್‌ನಲ್ಲಿ ಸರಣಿ ಟಾಸ್ಕ್‌ಗಳು ಆರಂಭವಾಗಿವೆ. ಇದೀಗ ಟಾಸ್ಕ್‌ವೊಂದರಲ್ಲಿ ತ್ರಿವಿಕ್ರಮ್‌ (Trivikram) ಮತ್ತು ಉಗ್ರಂ ಮಂಜು (Ugramm Manju) ಹೊಡೆದಾಡಿಕೊಂಡಿದ್ದಾರೆ.

    UGRAMM MANJU

    ಉಳಿದುಕೊಂಡಿರುವ 9 ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಣಿ ಟಾಸ್ಕ್‌ಗಳನ್ನು ನೀಡಲಿದ್ದಾರೆ. ಈ ಟಾಸ್ಕ್‌ಗಳಲ್ಲಿ ಹೆಚ್ಚು ಚೆನ್ನಾಗಿ ಆಡಿ, ಯಾವುದೇ ಮೋಸ ಮಾಡದೇ ಗೆಲುವು ಸಾಧಿಸಬೇಕು. ಟಾಸ್ಕ್‌ಗಳಲ್ಲಿ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿ ಗೆಲುವನ್ನು ಪಡೆಯುವ ಸ್ಪರ್ಧಿಗಳಿಗೆ ಗ್ರ‍್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಅಂದರೆ ಸ್ಪರ್ಧಿಗಳು ಆಡುವ ಟಾಸ್ಕ್ ಮೇಲೆ ಅವರ ಫಿನಾಲೆ ಟಿಕೆಟ್ ಖಾತರಿಯಾಗುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದನ್ನೂ ಓದಿ:ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್

    bbk 11

    ರಜತ್ ಈ ವಾರ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ಕೊನೆ ಮೂರು ವಾರಗಳಲ್ಲಿ 9 ಸ್ಪರ್ಧಿಗಳು ಆಡುವ ಟಾಸ್ಕ್ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.

    ಇನ್ನು ಇಂದಿನ ಟಾಸ್ಕ್‌ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ವಾಕ್ಸಮರ ನಡೆದಿದೆ. ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್‌ನಲ್ಲಿ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ. ಈ ವೇಳೆ, ನಿಯಮ ಉಲ್ಲಂಘನೆ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

  • ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ, ಗುತ್ತಿಗೆದಾರರ ಬಾಕಿ ಪಾವತಿಸಿ – ಸಿಎಂಗೆ ಹೆಚ್‌ಡಿಕೆ ತಿರುಗೇಟು

    ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ, ಗುತ್ತಿಗೆದಾರರ ಬಾಕಿ ಪಾವತಿಸಿ – ಸಿಎಂಗೆ ಹೆಚ್‌ಡಿಕೆ ತಿರುಗೇಟು

    ನವದೆಹಲಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಮೇಲೆ 60% ಕಮೀಷನ್ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ತುಣುಕುಗಳನ್ನು ಟ್ಯಾಗ್ ಮಾಡಿ ಸರ್ಕಾರದ ವಿರುದ್ಧ ಪರ್ಸಂಟೇಜ್ ದಾಳಿ ಮಾಡಿರುವ ಅವರು, ಇಲ್ಲಿದೆ ನೋಡಿ ನಿಮ್ಮ ಲೂಟಿಗೆ ಸಾಕ್ಷಿಗುಡ್ಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಾಖಲೆ ಕೊಡಿ, ದಾಖಲೆ ಕೊಡಿ ಎನ್ನುತ್ತಿದ್ದಿರಿ. ಇಲ್ನೋಡಿ ಸನ್ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿಗೆ ಸಾಕ್ಷಿಗುಡ್ಡೆ. ಪತ್ರಿಕೆಯವರೇ ನಿಮ್ಮ ಸಾಕ್ಷಿಗುಡ್ಡೆಯ ಸಾಕ್ಷಾತ್ಕಾರ ಮಾಡಿಸಿದ್ದಾರೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜಿನ ವಾತಾವರಣ – 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ. ಗುತ್ತಿಗೆದಾರರ 32,000 ಕೋಟಿಯಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್ ಕರಿನೆರಳು ಕೂಡ ಬಿದ್ದಿದೆ. ಸಾಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಜೋರಾಯ್ತು ಪವರ್‌ ಪಾಲಿʼಟ್ರಿಕ್ಸ್‌ʼ – ಈಗ ಪರಮೇಶ್ವರ್‌ರಿಂದ ಡಿನ್ನರ್‌ ಸಭೆ

    ಗುತ್ತಿಗೆದಾರರ ಬಿಲ್ ಬಾಕಿ ಪಟ್ಟಿ ನೋಡಿ. ಜಲ ಸಂಪನ್ಮೂಲದಲ್ಲಿ 14,600 ಕೋಟಿ ರೂ, ಲೋಕೋಪಯೋಗಿಯಲ್ಲಿ 10,000 ಕೋಟಿ ರೂ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್‌ನಲ್ಲಿ 3,100 ಕೋಟಿ ರೂ, ಸಣ್ಣ ನೀರಾವರಿಯಲ್ಲಿ 2,800 ಕೋಟಿ ರೂ., ಇತರೆ ಇಲಾಖೆಗಳಲ್ಲಿ 1,500 ಕೋಟಿ ರೂ. ಸೇರಿ ಒಟ್ಟು 32,000 ಕೋಟಿ ರೂ. ಬಾಕಿ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ವಿಮೆ ಹಣಕ್ಕಾಗಿ ಅಪ್ಪನ ಕೊಂದ ಮಗ – ಪುತ್ರ ಸೇರಿ ನಾಲ್ವರ ಬಂಧನ

    ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ ಎಂದು ಸಿಎಂ ಮತ್ತು ಸಚಿವರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: Gold Fraud Case| ಐಶ್ವರ್ಯ ಲಿಂಕ್ ಕೈ ಶಾಸಕನ ಬುಡಕ್ಕೆ – ಬೆನ್ಜ್‌ ಕಾರು ಬಳಸಿದ್ರಾ ವಿನಯ್ ಕುಲಕರ್ಣಿ?

  • ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜಿನ ವಾತಾವರಣ – 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜಿನ ವಾತಾವರಣ – 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ನವದೆಹಲಿ: ದೆಹಲಿಯಲ್ಲಿ ದಟ್ಟ ಮಂಜಿನ ವಾತಾವರಣ ಮುಂದುವರಿದ ಹಿನ್ನೆಲೆ 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

    ಇಂದು (ಜ.7) ಮುಂಜಾನೆ ದೆಹಲಿಯಲ್ಲಿ (Delhi) ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ಸ್ಪಷ್ಟ ಗೋಚರತೆ ಕಡಿಮೆಯಾಗಿ 25 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಮೃತ ರೇವತಿ ಪುತ್ರನನ್ನು ಭೇಟಿಯಾದ ಅಲ್ಲು ಅರ್ಜುನ್

    ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ ಪಾಲಂನಲ್ಲಿ 11-13 ಕಿ.ಮೀ ವೇಗದಲ್ಲಿ ವಾಯುವ್ಯ ಗಾಳಿ ಹಾಗೂ ದಟ್ಟವಾದ ಮಂಜಿನಲ್ಲಿ ಕನಿಷ್ಠ 150 ಮೀ. ಗೋಚರತೆ ಕಂಡುಬಂದಿದೆ. ಬೆಳಿಗ್ಗೆ 8.30ರ ಹೊತ್ತಿಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮ ಗಾಳಿ ಹಾಗೂ ಮಂಜಿನಲ್ಲಿ ಕ್ರಮೇಣ 700 ಮೀ.ಗೆ ಸುಧಾರಿಸಿತ್ತು ‘ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಮಂಜಿನ ವಾತಾವರಣದಿಂದಾಗಿ, ಒಟ್ಟು 25 ರೈಲುಗಳ ಸಂಚಾರದಲ್ಲಿ ಬೆಳಿಗ್ಗೆ 6 ಗಂಟೆಯವರೆಗೆ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಿಮೆ ಹಣಕ್ಕಾಗಿ ಅಪ್ಪನ ಕೊಂದ ಮಗ – ಪುತ್ರ ಸೇರಿ ನಾಲ್ವರ ಬಂಧನ

     

  • ರಾಜ್ಯದಲ್ಲಿ ಜೋರಾಯ್ತು ಪವರ್‌ ಪಾಲಿʼಟ್ರಿಕ್ಸ್‌ʼ – ಈಗ ಪರಮೇಶ್ವರ್‌ರಿಂದ ಡಿನ್ನರ್‌ ಸಭೆ

    ರಾಜ್ಯದಲ್ಲಿ ಜೋರಾಯ್ತು ಪವರ್‌ ಪಾಲಿʼಟ್ರಿಕ್ಸ್‌ʼ – ಈಗ ಪರಮೇಶ್ವರ್‌ರಿಂದ ಡಿನ್ನರ್‌ ಸಭೆ

    ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಡಿನ್ನರ್‌ ಸಭೆ (Dinner Meeting) ನಡೆಸಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್‌ (G Parameshwara) ಅವರು ಡಿನ್ನರ್‌ ಸಭೆ ನಡೆಸಲು ಮುಂದಾಗಿದ್ದಾರೆ.

    ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪರಮೇಶ್ವರ್ ಡಿನ್ನರ್ ಆಯೋಜಿಸಿದ್ದಾರೆ. ದಲಿತ ಶಾಸಕರು ಹಾಗೂ ದಲಿತ ಸಚಿವರ ಜೊತೆ ಪರಮೇಶ್ವರ್ ಡಿನ್ನರ್ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: Gold Fraud Case| ಐಶ್ವರ್ಯ ಲಿಂಕ್ ಕೈ ಶಾಸಕನ ಬುಡಕ್ಕೆ – ಬೆನ್ಜ್‌ ಕಾರು ಬಳಸಿದ್ರಾ ವಿನಯ್ ಕುಲಕರ್ಣಿ?

     

    2023 ರ ವಿಧಾನಸಭೆ ಚುನಾವಣೆಯ ಪರಾಜಿತ ದಲಿತ ಅಭ್ಯರ್ಥಿಗಳಿಗೂ ಈ ಭೋಜನ ಕೂಟಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಈ ಡಿನ್ನರ್‌ ಸಭೆಯ ಮೂಲಕ ದಲಿತ ಸಿಎಂ ಕಾರ್ಡ್ ಪ್ಲೇ ಮಾಡಲು ಪರಮೇಶ್ವರ್ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ನಾಳೆ ನಾನು ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಡಿನ್ನರ್ ಪಾರ್ಟಿ ಅಲ್ಲ. ಮುಂದೆ ನಾವು ಎಸ್‌ಸಿ, ಎಸ್ಟಿ ಸಮಾವೇಶ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ಎಲ್ಲ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರಿಗೆ ಆಹ್ವಾನ ನೀಡಿದ್ದೇವೆ. ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸುತ್ತೇವೆ. ಸಂಜೆ 7 ಗಂಟೆಗೆ ನಡೆಯುವ ಈ ಡಿನ್ನರ್‌ಗೆ ಎಸ್‌ಟಿ, ಎಸ್‌ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಹಾಗೆಂದ ಮಾತ್ರಕ್ಕೆ ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್‌ಟಿ, ಎಸ್‌ಸಿ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಅದರ ಬಗ್ಗೆಯೂ ನಾಳೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೆಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.

    ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿತ್ತು. ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು.

    ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು.

    ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ್ದಾಗಿ ಸತೀಶ್ ಜಾರಕಿಹೊಳಿ ಕಚೇರಿ ಮೂಲಗಳು ತಿಳಿಸಿದ್ದರೂ ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗಲೇ ಈ ಔತಣಕೂಟ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.