ಮೆಜೆಸ್ಟಿಕ್‍ನಲ್ಲಿ ಟೆನ್ಶನ್- ಜ್ವರದಿಂದ ಕುಸಿದು ಅನಾಥವಾಗಿ ಬಿದ್ದ ವೃದ್ಧ

Majestic

– ಪಿಪಿಇ ಕಿಟ್ ಇಲ್ಲದೆ ಪರದಾಡಿದ ಅಂಬುಲೆನ್ಸ್ ಸಿಬ್ಬಂದಿ
– ಒಂದು ಗಂಟೆ ಬಳಿಕ ವೃದ್ಧ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವೃದ್ಧನೋರ್ವ ಜ್ವರದಿಂದ ಕುಸಿದು ಬಿದ್ದಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.

ವೃದ್ಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಇಂದು 13ನೇ ಪ್ಲಾಟ್ ಫಾರಂನಲ್ಲಿ ಕುಳಿತಿದ್ದ ವೃದ್ಧ ಏಕಾಏಕಿ ಕುಸಿದು ಬಿದ್ದಿದ್ದ. ಇದನ್ನು ನೋಡಿದ ಪ್ರಯಾಣಿಕರು ಹಾಗೂ ಮಗಳಿಗಳ ಸಿಬ್ಬಂದಿ ಆತಂಕಕ್ಕೆ ಒಳಗಾಗಿ ದೂರ ಸರಿದು ತಕ್ಷಣವೇ ಅಂಬುಲೆನ್ಸ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

Majestic A

ಸ್ಥಳಕ್ಕೆ ದೌಡಾಯಿಸಿದ ಅಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿರಲಿಲ್ಲ. ಇದರಿಂದಾಗಿ ತಮಗೂ ಸೋಂಕು ಹಬ್ಬಿದರೆ ಹೇಗೆ ಅಂತ ವೃದ್ಧನನ್ನ ಮುಟ್ಟಲು ಹಿಂದೇಟು ಹಾಕಿದರು. ಸುಮಾರು ಒಂದು ಗಂಟೆಯ ಬಳಿಕ ಮತ್ತೊಂದು ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಪಿಪಿಇ ಕಿಟ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿ ವೃದ್ಧನನ್ನು ಅಂಬುಲೆನ್ಸ್ ನಲ್ಲಿ ಹಾಕಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊರೊನಾ ಆತಂಕದಲ್ಲಿ ಇರುವ ಜನರಿಗೆ ವೃದ್ಧ ಜ್ವರದಿಂದ ಕುಸಿದು ಬಿದ್ದಿದ್ದು  ಮತ್ತಷ್ಟು ಭಯಕ್ಕೆ ದೂಡಿದೆ.

ಮುಂಜಾಗ್ರತಾ ಕ್ರಮವಾಗಿ ವೃದ್ಧ ಕುಸಿದು ಬಿದ್ದ ಅಕ್ಕಪಕ್ಕದ ಅಂಗಡಿಗಳು ಕ್ಲೋಸ್ ಮಾಡಲಾಗಿದ್ದು, ಸಾನಿಟೈಜರ್ ಸಿಂಪಡಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ವೃದ್ಧನ ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಇಂದು ಮೆಜೆಸ್ಟಿಕ್‍ನಲ್ಲಿದ್ದ ಪ್ರಯಾಣಿಕರು ಹಾಗೂ ಮಳಿಗೆಗಳ ಸಿಬ್ಬಂದಿ ಆತಂಕ ಕಾಡುತ್ತಲೇ ಇರುತ್ತೆ.

Comments

Leave a Reply

Your email address will not be published. Required fields are marked *