ಬಳ್ಳಾರಿ: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.
Advertisement
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಹೊಸಪೇಟೆ ತಾಲೂಕಿನ, ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ 176 ಮಕ್ಕಳಿಗೆ 88 ಟ್ಯಾಬ್ ಗಳನ್ನು ಹಾಗೂ ಜವುಕು ಸರ್ಕಾರಿ ಪ್ರೌಢ ಶಾಲೆಯ 68 ಮಕ್ಕಳಿಗೆ 34 ಟ್ಯಾಬ್ ಗಳನ್ನು ಹಾಗೂ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 114 ಮಕ್ಕಳಿಗೆ ಒಟ್ಟು 57 ಟ್ಯಾಬ್ ಗಳನ್ನು ಉಚಿತವಾಗಿ ನೀಡಲಾಯಿತು.
Advertisement
Advertisement
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಟ್ಯಾಬ್ ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಇನ್ನು ಈ ಟ್ಯಾಬ್ ಮೂಲಕ ಕಲಿತು ಉತ್ತಮ ಫಲಿತಾಂಶ ಪಡೆಯುತ್ತೇವೆ. ಟ್ಯಾಬ್ ಕೊಟ್ಟ ಪಬ್ಲಿಕ್ ಟಿವಿ ಹಾಗೂ ಸಚಿವರಿಗೆ ಕೀರ್ತಿ ತರುತ್ತವೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ಬಹಳ ಸಹಕಾರಿಯಾಗಲಿವೆ. ಟ್ಯಾಬ್ ನೀಡಿದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಆನಂದ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.