ನವದೆಹಲಿ: ಕೊರೊನಾ ಸಂಕಷ್ಟ ಶುರುವಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಈವರೆಗೂ ಶೇವ್ ಮಾಡಿಸಿಲ್ಲ. ಕಳೆದ ಮಂಗಳವಾರ ಭಾಷಣದಲ್ಲೂ ಪ್ರಧಾನಿ ಮೋದಿ ಫುಲ್ ಗಡ್ಡದಲ್ಲೇ ಕ್ಯಾಮೆರಾ ಮುಂದೆ ಪ್ರತ್ಯಕ್ಷರಾಗಿದ್ದರು. ಅಷ್ಟಕ್ಕೂ ಪ್ರಧಾನಿ ಮೋದಿ ಹೀಗ್ಯಾಕೆ ಗಡ್ಡ ಬಿಡುತ್ತಿರುವವುದು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿ. ಕಲರ್ ಫುಲ್ ರಾಜಕಾರಣಿ, ತಮ್ಮ ವೇಷ ಭೂಷಣ, ವಿಭಿನ್ನ ಮಾತಿನ ಶೈಲಿ ಮೂಲಕವೇ ಜನಪ್ರಿಯಗೊಂಡವರು. ಕುರ್ತಾ, ಜುಬ್ಬಾ ಮೇಲೊಂದು ಕೋರ್ಟ್ ಧರಿಸಿ ಫುಲ್ ಕ್ಲೀನ್ ಟ್ರಿಮ್ ಶೇವಿಂಗ್ನೊಂದಿಗೆ ಕಾಣಿಸಿಕೊಳ್ಳುವ ಮೋದಿ ಅವರದ್ದು, ಎಲ್ಲರನ್ನೂ ಸೆಳೆಯುವ ಕ್ಯಾರೆಕ್ಟರ್. ಟ್ರೋಲ್ ಆಗುವ ಮಟ್ಟಿಗೆ ವಿಭಿನ್ನ ಶೈಲಿಯ ಉಡುಪುಗಳನ್ನು ಧರಿಸುತ್ತಿದ್ದ ಪ್ರಧಾನಿ ಮೋದಿ ಅವರಲ್ಲಿ ಕೊರೊನಾ ಸಂಕಷ್ಟ ಆರಂಭವಾದ ಬಳಿಕ ಬದಲಾವಣೆ ಕಾಣಿಸಿಕೊಂಡಿದೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ತಿಂಗಳಿಂದ ಗಡ್ಡದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಈವರೆಗೂ ಶೇವ್ ಮಾಡಿಲ್ಲ ಎಂದು ಮೂಲಗಳು ಹೇಳುತ್ತಿವೆ. 98 ದಿನಗಳಿಂದ ಶೇವ್ ಮಾಡಿಸದ ಮೋದಿ ಬರೀ ಟ್ರಿಮ್ಮರ್ ಮೂಲಕ ಅಗತ್ಯ ತಕ್ಕಂತೆ ಖುದ್ದು ಕೊಂಚ ಸೆಟ್ ಮಾಡಿಕೊಳ್ಳುತ್ತಿದ್ದಾರಂತೆ. ಮೋದಿ ಅವರ ಗಡ್ಡವನ್ನು ನಾವು ಅವರ ಪ್ರತಿ ಸಭೆಯಲ್ಲೂ ಗಮನಿಸಬಹುದು. ಅನ್ಲಾಕ್ ಬಳಿಕವೂ ಹೀಗೆ ಗಡ್ಡ ದಾರಿಯಾಗಿರುವ ಗುಟ್ಟೇನು ಅನ್ನೊದು ಈಗ ಎಲ್ಲರನ್ನು ಕಾಡುತ್ತಿದೆ. ನೆಟ್ಟಿಗರು ಈ ಬಗ್ಗೆ ಹುಡುಕಾಟವೇ ಮಾಡಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಿರುವ ಗುಟ್ಟೇನು, ಅದರ ಹಿಂದಿನ ರಹಸ್ಯ ಬಹಿರಂಗವಾಗಿದೆ.
Advertisement
Advertisement
* ಪ್ರಧಾನಿ ನರೇಂದ್ರ ಮೋದಿ ಸ್ವತಃ ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರೆ.
* ದೈಹಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆ ಅನ್ಲಾಕ್ ಆದರೂ ಕ್ಷೌರಿಕರಿಂದ ಶೇವ್ ಮಾಡಿಸಿಲ್ಲ.
* ಟ್ರಿಮ್ಮರ್ ಬಳಿಸಿ ಖುದ್ದು ತಾವೇ ತಮ್ಮ ಗಡ್ಡವನ್ನು ಸೆಟ್ ಮಾಡಿಕೊಳ್ಳುತ್ತಿದ್ದಾರೆ.
* ಅಗತ್ಯ ಕೆಲಸಗಳಿಗೆ ಮನೆಯಿಂದ ಹೊರಹೋಗಿ, ದೈಹಿಕ ಅಂತರದ ಸಲಹೆ ನೀಡುವ ಮೋದಿ ಖುದ್ದು ಪಾಲನೆ ಮಾಡುತ್ತಿದ್ದಾರೆ.
* ಈ ಹಿನ್ನಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ.
* ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಕೆಲಸಗಳನ್ನು ಮಾಡಿ 130 ಕೋಟಿ ಜನರಿಗೆ ಮಾದರಿಯಾಗುವ ಕೆಲಸ ಮಾಡುತ್ತಿದ್ದಾರೆ.
ಇಡೀ ದೇಶದ ಜನರಿಗೆ ಸಲಹೆ ನೀಡುತ್ತಿರುವ ಅವರೇ ನಿಯಮಗಳು ಪಾಲಿಸಿದಿದ್ದರೆ ಮುಜುಗರಕ್ಕೆ ಕಾರಣವಾಗಬಹುದು, ವಿಪಕ್ಷಗಳ ಟೀಕೆಗೆ ಗುರಿಯಾಗಬಹುದು ಎನ್ನುವ ಕಾರಣಕ್ಕೆ ಕಟ್ಟು ನಿಟ್ಟಾಗಿ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರಂತೆ. ಉದ್ದೇಶ ಏನೇ ಇದ್ದರೂ ಪ್ರಧಾನಿ ಮೋದಿ ಉದ್ದದ ಗಡ್ಡದ ಲುಕ್ ನೋಡಿ ಅವರ ಅಭಿಮಾನಿಗಳು ಇನ್ನಷ್ಟು ಫಿದಾ ಆಗಿದ್ದಾರೆ.