– ಮೂರು ಸಲೂನ್ ಗಳಲ್ಲಿ ಉಚಿತ ಸೇವೆ
– ಕ್ಷೌರಿಕನ ಕೆಲಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ
ಭೋಪಾಲ್ : ಹೆಣ್ಣು ಮಗುವಿನ ತಂದೆಯಾದ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಮೂಲಕ ಕ್ಷೌರಿಕರೊಬ್ಬರು ಗಮನ ಸೆಳೆದಿದ್ದಾರೆ. ಹೆಣ್ಣು ಮಗು ಹುಟ್ಟಿದ ಕಾರಣಕ್ಕಾಗಿ ತನ್ನ ಕ್ಷೌರದ ಅಂಗಡಿಗೆ ಬರುವ ಗ್ರಾಹಕರಿಗೆ ಒಂದು ದಿನದ ಕಟ್ಟಿಂಗ್ನ್ನು ಉಚಿತವಾಗಿ ಮಾಡಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ 3 ಸಲೂನ್ಗಳನ್ನು ನಡೆಸುತ್ತಿರುವ ಸಲ್ಮಾನ್ ಎಂಬವರು ತಮಗೆ ಹೆಣ್ಣು ಮಗುವಾದ ಸಂಭ್ರಮಾಚರಣೆಯನ್ನು ಮಾಡಿ ಸಮಾಜಕ್ಕೆ ವಿಶೇಷವಾದ ಸಂದೇಶ ರವಾನಿಸಿದ್ದಾರೆ.
Advertisement
Advertisement
ಸಲ್ಮಾನ್ ಅವರಿಗೆ ಡಿಸೆಂಬರ್ 26 ರಂದು ಹೆಣ್ಣು ಮಗು ಜನಿಸಿತ್ತು. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ ಇವರು ತಮ್ಮ ಸಲೂನ್ಗಳಲ್ಲಿ ಉಚಿತವಾಗಿ 1 ದಿನದ ಸೇವೆ ಸಲ್ಲಿಸಿದ್ದಾರೆ. ಮೂರು ಸಲೂನ್ಗಳ ಮಾಲೀಕರಾಗಿರುವ ಸಲ್ಮಾನ್ ತಮ್ಮ ಎಲ್ಲ ಶಾಪ್ ಗಳಲ್ಲೂ ಉಚಿತವಾಗಿ ಗ್ರಾಹಕರಿಗೆ ಕಟ್ಟಿಂಗ್ ಮಾಡಿದ್ದಾರೆ.
Advertisement
Advertisement
ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಕೆಲ ಜನರು ದುಃಖಿತರಾಗುತ್ತಾರೆ. ಇವರ ಮಧ್ಯೆ ನಾನು ಗಂಡು ಹೆಣ್ಣು ಎಂಬ ಲಿಂಗವನ್ನು ಲೆಕ್ಕಿಸದೆ ಮಗುವಿನ ಜನನದ ಬಗ್ಗೆ ಜನರು ಸಂತೋಷವಾಗಿರಬೇಕೆಂದು ತೋರಿಸುವ ಉದ್ದೇಶದಿಂದ ನಮ್ಮ ಮೂರು ಅಂಗಡಿಗಳಲ್ಲಿ ಈ ರೀತಿಯ ಸೇವೆಗೆ ನಿರ್ಧಾರ ಮಾಡಿರುವುದಾಗಿ ಸಲ್ಮಾನ್ ಸಂತೋಷ ಹಂಚಿಕೊಂಡರು.
ಮಗಳ ಜನನವನ್ನು ಆಚರಿಸಲು ನಿರ್ಧಾರ ಮಾಡಿದ ಸಲ್ಮಾನ್ ತಮ್ಮ ಅಂಗಡಿಯ ಮುಂಭಾದಲ್ಲಿ ಪೋಸ್ಟರ್ ಒಂದನ್ನು ಹಾಕಿಕೊಂಡಿದ್ದರು. ನಮ್ಮ ಮನೆಯಲ್ಲಿ ಹೆಣ್ಣು ಮಗುವಿನ ಜನನವನ್ನು ಸ್ವಾಗತಿಸಲು ಜನವರಿ 4 ರಂದು ಗ್ರಾಹಕರಿಗೆ ಉಚಿತವಾಗಿ ಸೇವೆ ಲಭ್ಯವಿರುತ್ತದೆ ಎಂದು ಪೋಸ್ಟರ್ ನಲ್ಲಿ ನಮೂದಿಸಿದ್ದರು. ಅದರಂತೆ ಜನವರಿ 4 ರಂದು 70 ರಿಂದ 80 ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದೇವೆ. ಇದರ ಮೌಲ್ಯ 3 ಸಾವಿರ ದಿಂದ 3 ಸಾವಿರದ ಐನೂರು ರೂಪಾಯಿ ಆಗಿದೆ ಎಂದರು.
ನಾವೆಲ್ಲರೂ ಹೆಣ್ಣು ಮಗುವಿನ ಜನನವನ್ನು ಆಚರಿಸಬೇಕು. ಇದು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ ಎಂದು ಗ್ರಾಹಕರೊಬ್ಬರು ಸಲ್ಮಾನ್ ಕಾರ್ಯಕ್ಕೆ ಬೆಂಬಲ ಸೂಚಿಸಿದರು.
Gwalior: A salon owner offered free services at his three salons in the city on 4th Jan, to celebrate the birth of a girl child
"I want to give the message that birth of a girl child brings immense happiness. People shouldn't be sad on birth of a girl," said Salman, salon owner pic.twitter.com/gPFrx4iKL5
— ANI (@ANI) January 4, 2021
ಹೆಣ್ಣು ಮಗು ಜನಿಸಿದರೆ ಹೆಚ್ಚಾಗಿ ಇಷ್ಟಪಡದೆ ಇರುವ ಜನಗಳ ಮಧ್ಯೆ ಸಲ್ಮಾನ್ ಅವರು ಖುಷಿ ಪಟ್ಟು ಸಮಾಜಕ್ಕೆ ಹೆಣ್ಣು ಮಗುವಿನ ಜನನದ ಸಿಹಿ ಈ ರೀತಿ ಹಂಚಿರುವುದನ್ನು ಕಂಡು ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.