ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ನಿಂದ ವಿಶ್ವವೇ ತತ್ತರಿಸಿ ಹೋಗಿದೆ. ದೇಶದ ಆರ್ಥಿಕತೆ ಸಹ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ವಾಯುವ್ಯ ಸಾರಿಗೆ ಸಂಸ್ಥೆ ಲಾಕ್ಡೌನ್ ನಷ್ಟದಿಂದ ಪಾರಾಗಲು ಮೆಗಾಪ್ಲಾನ್ವೊಂದನ್ನ ಮಾಡಿದೆ.
ಮಹಾಮಾರಿ ಕೊರೊನಾ ಎಲ್ಲೆಡೆ ವಕ್ಕರಿಸಿಕೊಳ್ತಿದೆ. ಲಾಕ್ಡೌನ್ನಿಂದ ಅಂತೂ ಸಾರಿಗೆ ಸಂಸ್ಥೆಯ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವಿಆರ್ಎಸ್ (ಅಂದ್ರೆ ವಾಲಂಟರಿ ರಿಟೈರ್ಮೆಂಟ್ ಸಿಸ್ಟಮ್) ನೀಡಲು ಮುಂದಾಗಿದೆ. ಈ ಮೂಲಕ ಲಾಕ್ಡೌನ್ ನಷ್ಟದಿಂದ ಪಾರಾಗಲು ಪ್ಲಾನ್ ಮಾಡಿದೆ. ಜೊತೆಗೆ ನಷ್ಟ ಸರಿಪಡಿಸಲು ಸಂಸ್ಥೆಯಲ್ಲಿನ ಬಡ್ತಿ ಹೊಂದುವ ಹುದ್ದೆಗಳ ಕಡಿತ ಹಾಗೂ ವಿಲೀನ ಮಾಡಲು ಮುಂದಾಗಿದೆ.
Advertisement
Advertisement
ಯಾವ ಯಾವ ಹುದ್ದೆಗಳ ವಿಲೀನ..?
* ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರು ಪ್ರಾದೇಶಿಕ ತರಬೇತಿ ಕೇಂದ್ರ
* ಮುಖ್ಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣ ಮತ್ತು ಖರೀದಿ ನಿಯಂತ್ರಕರು
* ಮುಖ್ಯ ಯೋಜನಾ ಮತ್ತು ಅಂಕಿ ಸಂಖ್ಯೆ ಅಧಿಕಾರಿ, ಮುಖ್ಯ ಗಣಕ ವ್ಯವಸ್ಥಾಪಕರು
* ಮುಖ್ಯ ಕಾನೂನು ಅಧಿಕಾರಿ ಹಾಗೂ ಮಂಡಳಿ ಕಾರ್ಯದರ್ಶಿ
* ವಿಭಾಗಗಳ ಆಡಳಿತಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿಗಳು
* ವಿಭಾಗಗಳ ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ವಿಭಾಗೀಯ ಕಾರ್ಯ ಅಧೀಕ್ಷರು
* ವಿಭಾಗಗಳ ಭದ್ರತಾ ಅಧಿಕಾರಿಗಳು ಹಾಗೂ ಉಗ್ರಾಣಾಧಿಕಾರಿಗಳು
* ವಿಭಾಗಗಳ ಲೆಕ್ಕಾಧಿಕಾರಿಗಳು ಹಾಗೂ ಅಂಕಿ ಸಂಖ್ಯಾಧಿಕಾರಿಗಳು
* ವಿಭಾಗಗಳ ವಿಭಾಗೀಯ ಸಂಚಲನಾಧಿಕಾರಿ, ಸಹಾಯಕ ಸಂಚಾರ ವ್ಯವಸ್ಥಾಪಕರು
Advertisement
Advertisement
ಯಾವ ಯಾವ ಹುದ್ದೆಗಳ ಕಡಿತ..?
* ಪ್ರಾಂಶುಪಾಲರು ಪ್ರಾದೇಶಿಕ ತರಬೇತಿ ಕೇಂದ್ರ
* ಮುಖ್ಯ ಕಾನೂನು ಅಧಿಕಾರಿ
* ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು
* ಉಪ ಮುಖ್ಯ ಲೆಕ್ಕಾಧಿಕಾರಿಗಳು ಕೇಂದ್ರ ಕಚೇರಿ
* ಉಪ ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ
* ಉಪ ಮುಖ್ಯ ಭದ್ರತಾ, ಜಾಗೃತಾಧಿಕಾರಿಗಳು
* ಭದ್ರತಾ ಮತ್ತು ಜಾಗೃತಾಧಿಕಾರಿ (ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ)
ಹೀಗೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳ ಅಧಿಕಾರಿಗಳ ಹುದ್ದೆಗಳನ್ನು ವಿಲೀನಗೊಳಿಸೋದು ಹಾಗೂ ಹುದ್ದೆಗಳನ್ನು ಕಡಿತಗೊಳಿಸುವಂತೆ ವಾಯವ್ಯ ಸಾರಿಗೆ ಸಂಸ್ಥೆ ಸರ್ಕಾರಕ್ಕೆ ಪತ್ರ ಬರೆದಿದೆ. ಹುದ್ದೆ ಕಡಿತದ ಜೊತೆಗೆ ಹುದ್ದೆ ವಿಲೀನಗೊಳಿಸಿದ್ರೆ ಸಾರಿಗೆ ಸಂಸ್ಥೆಗೆ ಆಗೋ ನಷ್ಟ ಕಡಿತ ಮಾಡಬಹುದು ಅನ್ನೋದು ಸಾರಿಗೆ ಸಂಸ್ಥೆಯ ಲೆಕ್ಕಾಚಾರ. ಸೋಂಕಿನಿಂದ ವೃದ್ಧರೇ ಹೆಚ್ಚಾಗಿ ತುತ್ತಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಯಲ್ಲಿ ಕೆಲ್ಸ ಮಾಡೋ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವಿಆರ್ಎಸ್ ನೀಡಲು ಮುಂದಾಗಿದೆ. ಆದ್ರೆ ಇದು ವಿವಾದಕ್ಕೆ ಕಾರಣವಾಗಿದೆ. ಹುದ್ದೆ ಕಡಿತಗೊಳಿಸುವುದು ಬಿಟ್ಟು ಅನಾವಶ್ಯಕ ಖರ್ಚುಗಳಿಗೆ ಸರ್ಕಾರ ಬ್ರೇಕ್ ಹಾಕಲಿ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.
ಕೊರೊನಾ ಬಂದ ನಂತರ ಕೇಂದ್ರ ಸರ್ಕಾರ ನೌಕರರನ್ನ ಕೆಲಸದಿಂದ ತೆಗೆಯುವಂತೆ ಆದೇಶ ಕೊಟ್ಟಿದೆ. ಇತ್ತ ಸಾರಿಗೆ ಸಂಸ್ಥೆ ಹುದ್ದೆ ಕಡಿತ, ವಿಲೀನ, ಸಿಬ್ಬಂದಿಗೆ ವಿಆರ್ಎಸ್ ನೀಡಲು ಮುಂದಾಗಿರೋದು ವಿವಾದಕ್ಕೆ ಕಾರಣವಾಗಿದೆ.