ಹಾಸನ: ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ರೋಗಿ ನಂ.225 ಅರವತ್ತು ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇವರು ಮೂಲತಃ ಬೇಲೂರು ತಾಲೂಕಿನವರಾಗಿದ್ದು, ಹಾಸನ ತಾಲೂಕಿನ ಹಳ್ಳಿಯೊಂದರಲ್ಲಿ ನೆಲೆಸಿದ್ದರು. ವೃದ್ಧಗೆ ಈ ಹಿಂದೆಯೇ ಪಾಶ್ರ್ವವಾಯು ಸಂಭವಿಸಿತ್ತು. ಅಲ್ಲದೆ ಡಯಾಬಿಟಿಸ್, ಉಸಿರಾಟದ ತೊಂದರೆ ಸೇರಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಜೂನ್ 10ರಿಂದ ಉಸಿರಾಟದ ತೊಂದರೆಗಾಗಿ ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.
Advertisement
Advertisement
ಬಳಿಕ ಖಾಸಗಿ ಆಸ್ಪತ್ರೆಯಿಂದ ಕೋವಿಡ್-19 ಆಸ್ಪತ್ರೆಗೆ ಮೃತ ವೃದ್ಧನನ್ನು ಶಿಫ್ಟ್ ಮಾಡಿ, ಜೂನ್ 11ಕ್ಕೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ವರದಿ ಬಂದ ನಂತರ ಇಂದು ಮಧ್ಯಾಹ್ನ 1:15ಕ್ಕೆ ಕೊರೊನಾ ಸೋಂಕಿತ ವೃದ್ಧ ಮೃತಪಟ್ಟಿದ್ದಾರೆ. ಮೃತ ವೃದ್ಧನ ಮಗ ಕ್ಯಾಂಟರ್ ವಾಹನ ಓಡಿಸುತ್ತಿದ್ದು, ತರಕಾರಿ ತೆಗೆದುಕೊಂಡು ಹೊರರಾಜ್ಯಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಈ ಮೂಲಕ ಮೃತ ವೃದ್ಧನಿಗೆ ಕೊರೊನಾ ಬಂದಿರಬಹುದು ಎನ್ನಲಾಗಿದೆ.
Advertisement
Advertisement
ಮುನ್ನೆಚ್ಚರಿಕಾ ಕ್ರಮವಾಗಿ ಮೃತ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಪಡೆದು ಕ್ವಾರಂಟೈನ್ ಮಾಡಲಾಗಿದೆ. ವೃದ್ಧನ ಸಾವಿನಿಂದ ಹಾಸನ ಜಿಲ್ಲೆಯಲ್ಲಿ ಕೊರೊನಾ ಸಾವಿನ ಖಾತೆ ತೆರೆದಂತಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.