ಹಾವೇರಿ: ಈ ಬಾರಿಯ ಹಾವೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಫುಲ್ ಹೈವೋಲ್ಟೇಜ್ ಎಲೆಕ್ಷನ್ ಆಗಿತ್ತು. ಆದರೆ ಕಾಂಗ್ರೆಸ್ ಈ ಬಾರಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿದೆ.
ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಡಿದ್ದ ಕಾಂಗ್ರೆಸ್ ಪ್ಲಾನ್ಗೆ ಬಿಜೆಪಿ ಭಾರಿ ಪ್ರತಿತಂತ್ರ ರೂಪಿಸಿತ್ತು. ಆದರೆ ಇದರ ನಡುವೆಯೂ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. 31 ಸದಸ್ಯ ಬಲ ಹೊಂದಿದ್ದ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ. ಬಿಜೆಪಿ ಕೇವಲ 9 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 15 ಸದಸ್ಯರನ್ನು ಹೊಂದಿತ್ತು.
Advertisement
Advertisement
7 ಜನ ಪಕ್ಷೇತರ ಸದಸ್ಯರಿದ್ದರು. ಆದರೆ ಇಬ್ಬರಿಗೂ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷೇತರರ ಬೆಂಬಲ ಬೇಕಾಗಿತ್ತು. ಕಾಂಗ್ರೆಸ್ ಚುನಾವಣೆ ಘೋಷಣೆ ಆಗೋದಕ್ಕಿಂತ ಮುಂಚಿತವಾಗಿಯೇ ಮೂವರು ಪಕ್ಷೇತರ ಸದಸ್ಯರನ್ನು ತನ್ನತ್ತ ಸೆಳೆದುಕೊಂಡಿತ್ತು. ಇದರ ಜೊತೆಗೆ ಈಗ ಉಳಿದ ಪಕ್ಷೇತರ ಸದಸ್ಯರನ್ನು ತನ್ನತ್ತ ಸೆಳೆದುಕೊಂಡು ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.
Advertisement
Advertisement
ಬಿಜೆಪಿ ಸಂಸದ ಮತ್ತು ಬಿಜೆಪಿ ಶಾಸಕರ ಮತ ಸೇರಿಸಿದರೂ ಬಿಜೆಪಿಗೆ ಬಹುಮತ ಬರಲಿಲ್ಲ. ಹೀಗಾಗಿ ಬಿಜೆಪಿಯ ಮೂವರು ಕಾಂಗ್ರೆಸ್ ಸದಸ್ಯರ ವಿರುದ್ಧ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ದಾಖಲಾಗಲು ಪರೋಕ್ಷ ಬೆಂಬಲ ನೀಡಿತ್ತು. ಆದರೂ ಬಿಜೆಪಿ ಪ್ಲಾನ್ ಫ್ಲಾಪ್ ಮಾಡಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.