– 70 ಸಾವಿರಕ್ಕೆ ಮಗು ಮಾರಾಟ
ಹೈದರಾಬಾದ್: ಹಣದಾಸೆಗೆ ತಂದೆ ತನ್ನ ಹಸುಗುಸನ್ನು 70 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
Advertisement
ಪಾಪಿ ತಂದೆ ತನ್ನ ಒಂದು ತಿಂಗಳ ಹಸುಗೂಸನ್ನು ದಂಪತಿಯಿಂದ ಹಣವನ್ನು ತೆಗೆದುಕೊಂಡು ಮಾರಾಟ ಮಾಡಿದ್ದಾನೆ. ಈ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ನನ್ನ ಪತಿ ಹಣದ ಆಸೆಗೆ ಮಗುವನ್ನು ಮಾರಾಟ ಮಾಡಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ಒಂದುವಾರದ ಬಳಿಕ ಮಗುವನ್ನು ಹುಡುಕಿ ರಕ್ಷಿಸಿದ್ದಾರೆ.
Advertisement
ಮಗುವನ್ನು ಕಳೆದಕೊಂಡ ತಾಯಿಯ ದೂರಿನ ಆದಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ತನಿಖೆ ಮಾಡಿದ್ದಾರೆ. ಈ ವೇಳೆ ಮಗುವಿನ ಪಾಲಕರು ನಿರ್ಗತಿಕರಾಗಿದ್ದು, ಪಾದಾಚಾರಿ ಮಾರ್ಗದಲ್ಲಿ ವಾಸಿಸುತ್ತಾರೆ. ಸಣ್ಣ ಪುಟ್ಟ ಕೆಲಸ ಮತ್ತು ಭಿಕ್ಷಾಟನೆ ಮಾಡಿ ಜೀವನವನ್ನು ನಡೆಸುತ್ತಾರೆ. ಕೆಲವು ದಿನಗಳ ಕಾಲ ಫುಟ್ಪಾತ್ನಲ್ಲಿ ವಾಸಿಸುತ್ತಿರುವ ಬಡ ಕುಟುಂಬವನ್ನು ದಂಪತಿ ಗಮನಿಸಿದ್ದರು. ಬಡ ದಂಪತಿಗೆ 70,000 ರೂಪಾಯಿ ಹಣವನ್ನು ನೀಡುತ್ತೇವೆ ಮಗುವನ್ನು ಕೊಡಿ ಎಂದು ಹಣದ ಆಸೆ ತೋರಿಸಿ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಆದರೆ ಇದರಿಂದ ಮನನೊಂದ ಮಗುವಿನ ತಾಯಿ ನಮ್ಮಲ್ಲಿ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರಿಸಿ ಪೋಷಣೆ ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ತನಿಖೆಯನ್ನು ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.