– ಮೂವರು ಬಾಲಕರನ್ನು ರಕ್ಷಿಸಿದ ವಿಕಲಚೇತನ ಯುವಕ
ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯ ಹೊಂಡದಲ್ಲಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಇಂದಿರಾ ಗಾಜಿನ ಮನೆ ಆವರಣದಲ್ಲಿ ನಡೆದಿದೆ.
ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಸ್ಮಾಟ್ ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕಾಮಗಾರಿಯ ಹೊಂಡದ ಪಕ್ಕದಲ್ಲೇ ಆಟವಾಡುತ್ತಿದ್ದ ಮೂವರು ಬಾಲಕರು ಹಾಗೂ ಬಾಲಕಿ ಹೊಂಡಕ್ಕೆ ಬಿಗಿದ್ದು, ಘಟನೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
Advertisement
Advertisement
ಮೃತ ಬಾಲಕಿಯನ್ನು ಹುಬ್ಬಳ್ಳಿಯ ಗಿರಣಿಚಾಳದ ತ್ರಿಶಾ ಎಂದು ಗುರುತಿಸಲಾಗಿದೆ. ಬಾಲಕಿಯೊಂದಿಗೆ ಹೊಂಡಕ್ಕೆ ಬಿದ್ದಿದ್ದ ಮೂವರು ಬಾಲಕರನ್ನು ಸ್ಥಳೀಯ ವಿಕಲಚೇತನ ಯುವಕ ಸುರೇಶ ಹೊರಕೇರಿ ರಕ್ಷಣೆ ಮಾಡಿದ್ದಾರೆ. ಮೂವರು ಬಾಲಕರನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹದಿನೈದು ಅಡಿ ಆಳಕ್ಕೆ ತಗ್ಗು ತೆಗೆದು ಹಾಗೆಯೇ ಬಿಟ್ಟ ಪರಿಣಾಮ ಹೊಂಡದಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳು ಗುಂಡಿಯೊಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯುವಕ ಸುರೇಶ ಹೊರಕೇರಿ ಮಕ್ಕಳನ್ನು ನೋಡಿದ್ದರಿಂದ ಮೂವರು ಬಾಲಕರನ್ನು ರಕ್ಷಣೆ ಮಾಡಿದ್ದು, ಬಾಲಕಿಯನ್ನು ರಕ್ಷಣೆ ಮಾಡುವ ವೇಳೆಗ ಮೃತಪಟ್ಟಿದ್ದಾಳೆ.
Advertisement
ಇಂದು ಕರ್ನಾಟಕ ಬಂದ್ ಇದ್ದ ಪರಿಣಾಮ ಇಂದಿರಾ ಗಾಜಿನ ಮನೆಯಲ್ಲಿ ಜನರ ಓಡಾಟ ವಿರಳವಾಗಿದ್ದು. ಹೀಗಾಗಿ ಮಕ್ಕಳು ಹೊಂಡದಲ್ಲಿ ಬಿದ್ದರೂ ಬೇಗ ಯಾರ ಗಮನಕ್ಕೂ ಬಂದಿಲ್ಲ. ಘಟನೆಯ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.