– 15 ಅಡಿ ಆಳಕ್ಕೆ ಬಿದ್ದ ಜನರು, ನದಿಯ ನೀರೆಲ್ಲ ಕೆಂಪು.. ಕೆಂಪು..!
– ಮದುವೆಯ ಮನೆಯಲ್ಲಿ ಸೂತಕದ ಕರಿ ನೆರಳು!
ಭೋಪಾಲ್: ಮಧ್ಯ ಪ್ರದೇಶದ ಖಂಡವಾ ಜಿಲ್ಲೆಯಲ್ಲಿ ಮದುವೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ ಸೇತುವೆ ಮೇಲಿಂದ ಪಲ್ಟಿಯಾದ ಪರಿಣಾಮ ವರ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮಂಟಪದ ಬದಲಾಗಿ ಆಸ್ಪತ್ರೆಯ ಮುಂದೆ ಜನ ಸಾಗರ ಸೇರಿದೆ.
Advertisement
ಇಂದು ಮಧ್ಯಾಹ್ನ ಖಂಡವಾ ಜಿಲ್ಲೆಯ ಖಾಲ್ವಾ ಕ್ಷೇತ್ರದ ಮಹಲೂ ಗ್ರಾಮದಲ್ಲಿ ಈ ದುರಂತ ನಡೆದಿದೆ. ವರನ ಜೊತೆ ಕಲ್ಯಾಣ ಮಂಟಪಕ್ಕೆ ಕುಟುಂಬಸ್ಥರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆ ಮೇಲೆ ಪಲ್ಟಿಯಾಗಿದೆ. ಟ್ರಾಲಿಯಲ್ಲಿ ಕುಳಿತಿದ್ದ ಜನರು ಸೇತುವೆ ಮೇಲಿಂದ 15 ಅಡಿ ಆಳದ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಕಡಿಮೆ ಪ್ರಮಾಣದ ನೀರು ಹರಿಯುತ್ತಿತ್ತು. ಕಲ್ಲುಗಳ ಮೇಲೆ ಬಿದ್ದ ಜನರ ರಕ್ತವೆಲ್ಲ ಸೇರಿದ ನೀರು ಕೆಂಪಾಗಿತ್ತು.
Advertisement
Advertisement
ಟ್ರ್ಯಾಕ್ಟರ್ ಟ್ರೋಲಿಯಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಇವರ ಪೈಕಿ ವರ, ಆತನ ತಾಯಿ, ತಂದೆ ಸೇರಿದಂತೆ ಒಟ್ಟು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಖಂಡವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಭಯಾನಕ ಅಪಘಾತ – ಬಸ್ನೊಳಗೆ ತೂರಿಬಂದ ಗ್ಯಾಸ್ಲೈನ್ ಪೈಪ್
Advertisement
ಸ್ಥಳಕ್ಕಾಗಮಿಸಿರುವ ಖಾಲ್ವಾ ಠಾಣೆಯ ಪೊಲೀಸರು ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸಂಜೆ ವಧುವಿನ ಜೊತೆ ಬರಲು ಹೋದವರ ಶವಗಳೇ ಗ್ರಾಮಕ್ಕೆ ಹಿಂದಿರುಗಿದ್ದು, ಇಡೀ ಊರಿನಲ್ಲಿ ಸೂತಕದ ಕರಾಳ ಛಾಯೆ ಆವರಿಸಿದೆ. ಇದನ್ನೂ ಓದಿ: ನಿಶ್ಚಿತಾರ್ಥಕ್ಕೆ ಹೊರಟಿದ್ದ ಟೆಂಪೋ ಭೀಕರ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು