-ಷರತ್ತು ಒಪ್ಪಿದ ಅಭಿಮಾನಿ
ಮುಂಬೈ: ಸೆಲ್ಫಿ ಕೇಳಿದ ಅಭಿಮಾನಿಗೆ ಬಿಗ್ಬಾಸ್ ಸೀಸನ್ 13ರ ವಿಜೇತ, ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಕಂಡೀಷನ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಸಹ ನೆಚ್ಚಿನ ನಟ ಕಂಡೀಷನ್ ಒಪ್ಪಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.
ಜಿಮ್ ಸೆಂಟರ್ ನಿಂದ ಸಿದ್ಧಾರ್ಥ್ ಹೊರ ಬರುತ್ತಿದ್ದಂತೆ ಓರ್ವ ಅಭಿಮಾನಿ ಸೆಲ್ಫಿ ಕೇಳಿದ್ದಾರೆ. ಆದ್ರೆ ಸಿದ್ಧಾರ್ಥ್ ತಾವು ಹಾಕಿರುವ ಮಾಸ್ಕ್ ತೆಗೆಯಲ್ಲ, ಹಾಗೆಯೇ ಫೋಟೋ ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಿದ್ಧಾರ್ಥ್ ಮಾತಿಗೆ ಒಪ್ಪಿದ ಅಭಿಮಾನಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ಅಭಿಮಾನಿ ಮಾಸ್ಕ್ ಧರಿಸಿರಲಿಲ್ಲ.
Advertisement
Advertisement
ಕೊರೊನಾದಿಂದಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಅಂತೆಯೇ ಸಿದ್ಧಾರ್ಥ್ ಕೋವಿಡ್ ನಿಯಮ ಪಾಲನೆ ಮಾಡಿದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Advertisement
Advertisement
ಸಿದ್ಧಾರ್ಥ್ ಅಭಿನಯದ ‘ದಿಲ್ ಕೋ ಕರಾರ್ ಆಯಾ’ ಹಾಡು ರಿಲೀಸ್ ಆಗಿದೆ. ಬಾಲಿವುಡ್ ನಟಿ ನೇಹಾ ಶರ್ಮಾ ಈ ಹಾಡಿನಲ್ಲಿ ಸಿದ್ಧಾರ್ಥ್ ಗೆ ಜೊತೆಯಾಗಿದ್ದು ಇಬ್ಬರ ಕೆಮಿಸ್ಟ್ರಿ ಮೋಡಿ ಮಾಡಿದೆ. ಶಹನಾಜ್ ಗಿಲ್ ಜೊತೆ ಅಲ್ಬಂನಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ.